Farm Laws; ಕಾಂಗ್ರೆಸ್ ಸರ್ಕಾರ ಕೃಷಿ ಕಾನೂನುಗಳಲ್ಲಿ ತಿದ್ದುಪಡಿ ತರಲು ನಿರ್ಧಸಿರುವುದು ಶೋಚನೀಯ: ಡಾ ಆಶ್ವಥ್ ನಾರಾಯಣ, ಶಾಸಕ
ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋಸಗಾರ ಸರ್ಕಾರ ಇದು ಎಂದು ಅಶ್ವಥ್ ನಾರಾಯಣ ಕುಟುಕಿದರು.
ಬೆಂಗಳೂರು: ಎಪಿಎಂಸಿ ಕಾಯ್ದೆಯಲ್ಲಿ (APMC Act) ತಿದ್ದುಪಡಿ ತರಲು ಈಗಿನ ಕಾಂಗ್ರೆಸ್ ಸರ್ಕಾರದ ನಿರ್ಧಾರ ರೈತ ವಿರೋಧಿ ಮತ್ತು ಜನ ವಿರೋಧಿ ಎಂದು ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಹೇಳಿದರು. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಸಚಿವರು, ಬಿಎಸ್ ಯಡಿಯೂರಪ್ಪನವರ (BS Yediyurappa) ನೇತೃತ್ವದ ಬಿಜೆಪಿ ಸರ್ಕಾರ ರೈತರ ಹಿತರಕ್ಷಣೆ ಕಾಯಲು ಬೆಳೆಗಾರನಿಂದ ನೇರವಾಗಿ ಬಳಕೆದಾರನಿಗೆ ಎಂಬ ಸೂತ್ರದಡಿ ಎಪಿಎಂಸಿ ಕಾಯ್ದೆ ಜಾರಿಗೆ ತಂದಿತ್ತು. ಆ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆಗಳು ಕೇವಲ ಭಾರತ ಮಾತ್ರವಲ್ಲ ವಿಶ್ವದಲ್ಲೇ ಮನ್ನಣೆ ಗಳಿಸಿದ್ದವು. ಆದರೆ, ರೈತವಿರೋಧಿ ಕಾಂಗ್ರೆಸ್ ಸರ್ಕಾರ ಆ ಕಾಯ್ದೆಗಳನ್ನು ರದ್ದು ಮಾಡಲು ಹೊರಟಿದೆ ಎಂದು ಅಶ್ವಥ್ ನಾರಾಯಣ ಕೆಂಡ ಕಾರಿದರು. ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋಸಗಾರ ಸರ್ಕಾರ ಇದು ಅವರು ಕುಟುಕಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ