ಕಾಂಗ್ರೆಸ್ ಹಲವು ತಲೆಮಾರುಗಳನ್ನು ನಾಶಪಡಿಸಿದೆ: ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಕಿಡಿ

|

Updated on: May 22, 2024 | 9:21 PM

ಕಾಂಗ್ರೆಸ್ ವ್ಯವಸ್ಥೆಯು ಎಸ್ಸಿ, ಎಸ್ಟಿ, ಒಬಿಸಿಯ ಹಲವು ತಲೆಮಾರುಗಳನ್ನು ನಾಶಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ಮಾಡಿದ್ದಾರೆ. ಆ ಮೂಲಕ ಕೆಳಜಾತಿಗಳ ವಿರುದ್ಧ ವ್ಯವಸ್ಥೆಯು ಒಗ್ಗೂಡಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ತನ್ನ ಅಜ್ಜಿ, ತಂದೆ, ತಾಯಿಯ ಕಾಲದಲ್ಲಿ ರೂಪುಗೊಂಡ ವ್ಯವಸ್ಥೆಯೂ ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳ ವಿರುದ್ಧವಾಗಿತ್ತು ಎಂದು ಅವರು ದೊಡ್ಡ ಸತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.     

ನವದೆಹಲಿ, ಮೇ 22: ಕಾಂಗ್ರೆಸ್ ವ್ಯವಸ್ಥೆಯು ಎಸ್ಸಿ, ಎಸ್ಟಿ, ಒಬಿಸಿಯ ಹಲವು ತಲೆಮಾರುಗಳನ್ನು ನಾಶಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ಮಾಡಿದ್ದಾರೆ. ಆ ಮೂಲಕ ಕೆಳಜಾತಿಗಳ ವಿರುದ್ಧ ವ್ಯವಸ್ಥೆಯು ಒಗ್ಗೂಡಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನವದೆಹಲಿಯ ದ್ವಾರಕಾದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಲವೊಮ್ಮೆ ಸುಳ್ಳು ಮಾತನಾಡುವಾಗ, ಶೆಹಜಾದಾ ಬಾಯಿಯಿಂದ ಸತ್ಯ ಹೊರಬರುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್​ ಶೆಹಜಾದಾ ದೊಡ್ಡ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ತನ್ನ ಅಜ್ಜಿ, ತಂದೆ, ತಾಯಿಯ ಕಾಲದಲ್ಲಿ ರೂಪುಗೊಂಡ ವ್ಯವಸ್ಥೆಯೂ ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳ ವಿರುದ್ಧವಾಗಿತ್ತು ಎಂದು ಅವರು ದೊಡ್ಡ ಸತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಹರಿಯಾಣದ ಪಂಚಕುಲದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ ತಮ್ಮ ತಂದೆ ಮತ್ತು ಅಜ್ಜಿ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ, ಅದು ಯಾರನ್ನು ಬೆಂಬಲಿಸುತ್ತದೆ ಮತ್ತು ರಕ್ಷಿಸುತ್ತದೆ ಎಂದು ನನಗೆ ತಿಳಿದಿದೆ ಎಂದು ಹೇಳಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.