ಕಾಂಗ್ರೆಸ್ ನಲ್ಲಿ ಅತೃಪ್ತ ಶಾಸಕರ‍್ಯಾರೂ ಇಲ್ಲ, ಬಿಜೆಪಿಯಲ್ಲಿ ಅತೃಪ್ತ ಆತ್ಮಗಳಿವೆ, ಅಷ್ಟೇ: ಭೈರತಿ ಸುರೇಶ್, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ

ಕಾಂಗ್ರೆಸ್ ನಲ್ಲಿ ಅತೃಪ್ತ ಶಾಸಕರ‍್ಯಾರೂ ಇಲ್ಲ, ಬಿಜೆಪಿಯಲ್ಲಿ ಅತೃಪ್ತ ಆತ್ಮಗಳಿವೆ, ಅಷ್ಟೇ: ಭೈರತಿ ಸುರೇಶ್, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 15, 2023 | 7:18 PM

ಆಣೆ-ಪ್ರಮಾಣ ಮಾಡುವುದನ್ನು ಸಂವಿಧಾನದಲ್ಲಿ ಹೇಳಿಲ್ಲ, ಸಂವಿಧಾನದಲ್ಲಿ ಹೇಳುವುದನ್ನು ಮಾತ್ರ ತಮ್ಮ ಸರ್ಕಾರ ಪಾಲಿಸುತ್ತದೆ, ಮೂಢನಂಬಿಕೆಗಳಲ್ಲಿ ವಿಶ್ವಾಸವಿಟ್ಟು ನಡೆಯುವ ಸರ್ಕಾರ ತಮ್ಮದಲ್ಲ ಎಂದು ಭೈರತಿ ಸುರೇಶ್ ಹೇಳಿದರು.

ಕೋಲಾರ: ಮುಂದಿನ ಲೋಕ ಸಭಾ ಚುನಾವಣೆ ಹೊತ್ತಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಿದ್ದು ಹೋಗುತ್ತದೆ ಅಂತ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ ಅಂತ ಹೇಳಿದಾಗ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ (Byrathi Suresh) ನಕ್ಕುಬಿಟ್ಟರು. ಡಿಕೆ ಶಿವಕುಮಾರ್ (DK Shivakumar ) ರಾಜೀನಾಮೆ ನೀಡಬೇಕೆಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ ಅಂತ ಸುದ್ದಿಗಾರರು ಹೇಳಿದ್ದಕ್ಕೆ ಸುರೇಶ್, ಯಾಕೆ ಅವರು ರಾಜೀನಾಮೆ ನೀಡಬೇಕು. ನಿನ್ನೆಯಷ್ಟೇ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು; ಶಿವಕುಮಾರ್ ತಮ್ಮನ್ನು ಕರೆಸಿ ಮಾತಾಡಿಲ್ಲ ಮತ್ತ್ತು ಲಂಚವಾಗಲೀ ಆಥವಾ ಕಮೀಶನ್ ಆಗಲೀ ಕೇಳಿಲ್ಲ ಅಂತ ಹೇಳಿರುವಾಗ ಬಿಜೆಪಿಯ ಆರೋಪಗಳಿಗೆ ನೆಲೆ ಎಲ್ಲಿದೆ ಎಂದು ಸುರೇಶ್ ಹೇಳಿದರು. ಕಾಮಗಾರಿಗಳಲ್ಲಿ ಯಾವುದೇ ಅಕ್ರವೆಸಗದೆ ಪೂರೈಸಿರುವ ಗುತ್ತಿಗೆದಾರರ ಬಿಲ್ ಗಳನ್ನು ಯಾವುದೇ ಷರತ್ತಿಲ್ಲದೆ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನರೂ ಹೇಳಿದ್ದಾರೆ ಎಂದು ಸುರೇಶ್ ಹೇಳಿದರು. ಆಣೆ-ಪ್ರಮಾಣ ಮಾಡುವುದನ್ನು ಸಂವಿಧಾನದಲ್ಲಿ ಹೇಳಿಲ್ಲ, ಸಂವಿಧಾನದಲ್ಲಿ ಹೇಳುವುದನ್ನು ಮಾತ್ರ ತಮ್ಮ ಸರ್ಕಾರ ಪಾಲಿಸುತ್ತದೆ, ಮೂಢನಂಬಿಕೆಗಳಲ್ಲಿ ವಿಶ್ವಾಸವಿಟ್ಟು ನಡೆಯುವ ಸರ್ಕಾರ ತಮ್ಮದಲ್ಲ ಎಂದು ಭೈರತಿ ಸುರೇಶ್ ಹೇಳಿದರು. ಕಾಂಗ್ರೆಸ್ ನಲ್ಲಿ ಅತೃಪ್ತ ಶಾಸಕರು ಯಾರೂ ಇಲ್ಲ, ಬಿಜೆಪಿಯಲ್ಲಿ ಅತೃಪ್ತ ಆತ್ಮಗಳಿಗೆ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ