AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡ ಕನಸು ಕಂಡಿದ್ದ ಸ್ಪಂದನಾ; ನಿಧನದ ಬಳಿಕ ಡೈರಿಯಲ್ಲಿದ್ದ ವಿಷಯ ತಿಳಿಸಿದ ಸಂಬಂಧಿಕರು

ದೊಡ್ಡ ಕನಸು ಕಂಡಿದ್ದ ಸ್ಪಂದನಾ; ನಿಧನದ ಬಳಿಕ ಡೈರಿಯಲ್ಲಿದ್ದ ವಿಷಯ ತಿಳಿಸಿದ ಸಂಬಂಧಿಕರು

ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಮದನ್​ ಕುಮಾರ್​

Updated on:Aug 15, 2023 | 6:23 PM

ಆಗಸ್ಟ್​ 16ರಂದು ಸ್ಪಂದನಾ ವಿಜಯ್​ ರಾಘವೇಂದ್ರ ಅವರ ಉತ್ತರ ಕ್ರಿಯೆ ನಡೆಯಲಿದೆ. ಅದಕ್ಕಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಸಕಲ ಸಿದ್ಧತೆ ನಡೆದಿದೆ. ಈ ನಡುವೆ ಸ್ಪಂದನಾ ಅವರು ಇಟ್ಟುಕೊಂಡಿದ್ದ ಒಂದು ಕನಸಿನ ಬಗ್ಗೆ ಈಗ ಅವರ ಸಂಬಂಧಿ ಪಿತಾಂಬರ ಹೇರಾಜೆ ಮಾಹಿತಿ ನೀಡಿದ್ದಾರೆ. ಆ ವಿಡಿಯೋ ಇಲ್ಲಿದೆ..

ಕನ್ನಡದ ಖ್ಯಾತ ನಟ ವಿಜಯ್​ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ನಿಧನರಾಗಿದ್ದು ನೋವಿನ ಸಂಗತಿ. ಹೃದಯಾಘಾತದಿಂದ ಕೊನೆಯುಸಿರು ಎಳೆದ ಅವರ ಬಗ್ಗೆ ಈಗ ಒಂದು ವಿಚಾರ ಬಹಿರಂಗ ಆಗಿದೆ. ಸಿನಿಮಾ ರಂಗದ ಬಗ್ಗೆ ಸ್ಪಂದನಾ ವಿಜಯ್ ರಾಘವೇಂದ್ರ (Spandana Vijay Raghavendra) ಅವರು ಒಂದು ದೊಡ್ಡ ಕನಸು ಕಂಡಿದ್ದರು. ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ಅವರ ಕನಸಾಗಿತ್ತು. ಈ ಮೂಲಕ ಅನೇಕರಿಗೆ ಅವಕಾಶಗಳನ್ನು ನೀಡಬೇಕು ಎಂದು ಅವರು ಆಲೋಚಿಸಿದ್ದರು. ಪಾರ್ವತಮ್ಮ ರಾಜ್​ಕುಮಾರ್ (Parvathamma Rajkumar) ರೀತಿಯೇ ತಾವು ಕೂಡ ನಿರ್ಮಾಪಕಿಯಾಗಿ ಗುರುತಿಸಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆ ಸ್ಪಂದನಾ ಅವರಿಗೆ ಇತ್ತು. ಅದನ್ನು ಅವರು ಡೈರಿಯಲ್ಲಿ ಬರೆದಿದ್ದರು ಎಂದು ಮಾವ ಪಿತಾಂಬರ ಹೇರಾಜೆ ತಿಳಿಸಿದ್ದಾರೆ. ಆಗಸ್ಟ್​ 16ರಂದು ಸ್ಪಂದನಾ ವಿಜಯ್​ ರಾಘವೇಂದ್ರ ಅವರ ಉತ್ತರ ಕ್ರಿಯೆ ನಡೆಯಲಿದೆ. ಅದಕ್ಕಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಸಕಲ ಸಿದ್ಧತೆ ನಡೆದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Aug 15, 2023 06:17 PM