AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Stampede: ವಿವರಣೆ ಕೇಳಲು ಸಿಎಂ, ಡಿಸಿಎಂರನ್ನು ದೆಹಲಿಗೆ ಕರೆಸಿದ ಕಾಂಗ್ರೆಸ್ ಹೈಕಮಾಂಡ್

Bengaluru Stampede: ವಿವರಣೆ ಕೇಳಲು ಸಿಎಂ, ಡಿಸಿಎಂರನ್ನು ದೆಹಲಿಗೆ ಕರೆಸಿದ ಕಾಂಗ್ರೆಸ್ ಹೈಕಮಾಂಡ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 10, 2025 | 10:18 AM

Share

ಆರ್​ಸಿಬಿ ರಾಜ್ಯದ ಅಥವಾ ದೇಶದ ಒಂದು ತಂಡವಲ್ಲ, ಖಾಸಗಿ ಸಂಸ್ಥೆಯೊಂದರ ಕ್ಲಬ್ ಅದು. ಕ್ಲಬ್ ಬಗ್ಗೆ ಅಭಿಮಾನ ಮತ್ತು ಪ್ರೀತಿಯನ್ನು ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೇರಿದಂತೆ ಯಾರೂ ಬೇಕಾದರೂ ಇಟ್ಟುಕೊಳ್ಳಬಹುದು. ಅದರೆ ಸರ್ಕಾರೀ ಖರ್ಚಿನಲ್ಲಿ ಆರ್​ಸಿಬಿ ತಂಡದ ಆಟಗಾರರಿಗೆ ಸನ್ಮಾನ ಇಟ್ಟುಕೊಳ್ಳೋದು, ಅದರಲ್ಲಿ ಭಾಗಿಯಾಗೋದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ.

ಬೆಂಗಳೂರು, ಜೂನ್ 10: ಬೆಂಗಳೂರು ಕಾಲ್ತುಳಿತ ಪ್ರಕರಣ ಕರ್ನಾಟಕದ ನಾಯಕರಿಗೆ ಬೆಂಬಿಡದ ಭೂತವೆಂದರೆ ತಪ್ಪಲ್ಲ. ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಅದು ಬಹಳ ದಿನಗಳವರೆಗೆ ಕಾಡಲಿದೆ. ವಿರೋಧ ಪಕ್ಷಗಳು ಸರ್ಕಾರವನ್ನು ಪ್ರತಿದಿನ ಇಕ್ಕಟ್ಟಿಗೆ ಸಿಕ್ಕಿಸುತ್ತಿವೆ ಅದು ಬೇರೆ ಪ್ರಶ್ನೆ, ಪಕ್ಷದ ಹೈಕಮಾಂಡ್​ ಸಹ ಘಟನೆಯ ಬಗ್ಗೆ ಉಗ್ರರೂಪ ತಳೆದಿದೆ ಮತ್ತು ವಿವರಣೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (Siddaramaiah and DK Shivakumar) ಅವರನ್ನು ದೆಹಲಿಗೆ ಕರೆಸಿದೆ. ಇಂದು ಬೆಳಗ್ಗೆ ಅವರಿಬ್ಬರೂ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದರು.

ಇದನ್ನೂ ಓದಿ:   ಬೆಂಗಳೂರು ಕಾಲ್ತುಳಿತ ದುರಂತದ ವರದಿ ನೀಡುವಂತೆ ಜಸ್ಟೀಸ್ ಕುನ್ಹಾ ಆಯೋಗಕ್ಕೆ ಸರ್ಕಾರ ಸೂಚನೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More