ಕಾಂಗ್ರೆಸ್ ಪಕ್ಷವೇ ಒಂದು ದುಷ್ಟಶಕ್ತಿಯಾಗಿ ದೇಶವನ್ನು ಕಾಡುತ್ತಿದೆ: ಗಾಲಿ ಜನಾರ್ಧನ ರೆಡ್ಡಿ
ತನ್ನ ದುಷ್ಟತನದಿಂದಾಗೇ ಕಾಂಗ್ರೆಸ್ ಪಕ್ಷ ಅಧಿಕಾರದಿಂದ ದೂರವುಳಿದಿದೆ, ನರೇಂದ್ರ ಮೋದಿಯವರು ತಮ್ಮ ಜನಪರ ಕಾಳಜಿ ಮತ್ತು ಯೋಜನೆಗಳಿಂದ ದೇಶದ ಅತ್ಯಂತ ಜನಪ್ರಿಯ ನಾಯಕರಾಗಿದ್ದಾರೆ ಮತ್ತು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ರೆಡ್ಡಿ ಹೇಳಿದರು.
ಕೊಪ್ಪಳ: ದುಷ್ಟ ಶಕ್ತಿಗಳಿಂದ ರಕ್ಷಣೆ ಎಂದು ಕಾಂಗ್ರೆಸ್ ಹೇಳಿರುವುನ್ನು ಬಿಜೆಪಿ ಲೇವಡಿ ಮಾಡುತ್ತಿದೆ. ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಭಾರತವನ್ನು ಒಂದು ದುಷ್ಟಶಕ್ತಿಯಾಗಿ ಕಾಡುತ್ತಿರೋದು ಕಾಂಗ್ರೆಸ್ ಪಕ್ಷವೇ ಹೊರತು ಬೇರಾರೂ ಅಲ್ಲ, ತಾನು ಸುಮಾರು ಒಂದೂವರೆ ದಶಕಗಳ ಕಾಲ ಬಳ್ಳಾರಿ ನೆಲದ ಮೇಲೆ ಕಾಲಿಡದ ಸ್ಥಿತಿ ನಿರ್ಮಾಣವಾಗಿತ್ತು, ಆದರೆ ತಾಯಿ ಜಗನ್ಮಾತೆ ತನ್ನನ್ನು ಅಂಥ ಸ್ಥಿತಿಯಿಂದ ದೂರ ಮಾಡಿದ ಕಾರಣ ಈ ಬಾರಿ ದಸರಾ ಹಬ್ಬವನ್ನು ಬಳ್ಳಾರಿಯಲ್ಲಿ ಆಚರಿಸಲು ಸಾಧ್ಯವಾಯಿತು ಎಂದು ರೆಡ್ಡಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜನಾರ್ಧನ ರೆಡ್ಡಿ ವಿರುದ್ಧ ಕಾಮೆಂಟ್ ಮಾಡಲ್ಲವೆಂದು ಹೇಳಿ ದೊಡ್ಡತನ ಪ್ರದರ್ಶಿಸಿದ ಬಿ ಶ್ರೀರಾಮುಲು