Congress Kalyana Kranti Live ಕಲಬುರಗಿಯಲ್ಲಿ ಖರ್ಗೆಗೆ ಅದ್ಧೂರಿ ಸ್ವಾಗತ, ಬೃಹತ್ ಸಮಾವೇಶ

Congress Kalyana Kranti Live ಕಲಬುರಗಿಯಲ್ಲಿ ಖರ್ಗೆಗೆ ಅದ್ಧೂರಿ ಸ್ವಾಗತ, ಬೃಹತ್ ಸಮಾವೇಶ

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 10, 2022 | 3:48 PM

ಎಐಸಿಸಿ ಅಧ್ಯಕ್ಷರಾದ ನಂತರ ಖರ್ಗೆ ಮೊದಲ ಬಾರಿಗೆ ಇಂದು( ಶನಿವಾರ) ತವರು ಕ್ಷೇತ್ರ ಕಲಬುರಗಿಗೆ ಆಗಮಿಸಿದ್ದು, ಅವರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಕೋರಿದ್ದಾರೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಕಲ್ಯಾಣ ಕ್ರಾಂತಿ ಸಮಾವೇಶವನ್ನು ಆಯೋಜಿಸಿದ್ದು, ಕಾರ್ಯಕ್ರಮದ ಲೈವ್ ವೀಕ್ಷಿಸಿ...​

ಕಲಬುರಗಿ:: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ (All India Congress Committee-AICC) ಸ್ಥಾನ ಕನ್ನಡಿಗ, ಕಲಬುರಗಿ ಕುವರ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಒಲಿದಿದೆ. ಇದರಿಂದ ಕಲ್ಯಾಣ ಕರ್ನಾಟಕದಲ್ಲಿ ಖರ್ಗೆ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ. ಎಐಸಿಸಿ ಅಧ್ಯಕ್ಷರಾದ ನಂತರ ಖರ್ಗೆ ಮೊದಲ ಬಾರಿಗೆ ಇಂದು( ಶನಿವಾರ) ತವರು ಕ್ಷೇತ್ರ ಕಲಬುರಗಿಗೆ ಆಗಮಿಸಿದ್ದು, ಅವರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಕೋರಿದ್ದಾರೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಕಲ್ಯಾಣ ಕ್ರಾಂತಿ ಸಮಾವೇಶವನ್ನು ಆಯೋಜಿಸಿದೆ.