ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಶೇಷ ಸಂದರ್ಶನ: ‘ಆಪರೇಶನ್ ಕಮಲದಿಂದ ಪಕ್ಷ ತೊರೆದವರು ಮತ್ತೆ ಬರಬೇಕಿದ್ದರೆ ಪಕ್ಷಕ್ಕೆ ಅರ್ಜಿ ಸಲ್ಲಿಸಲಿ‘
DK Shivakumar Interview: ಕಾಂಗ್ರೆಸ್ನ್ನು ಬಲಪಡಿಸುವ ದೃಷ್ಟಿಯಿಂದ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸೇರಿದ್ದವರಿಗೆ ಕಾಂಗ್ರೆಸ್ ಮಣೆ ಹಾಕಲಿದೆಯೇ? ಮುಂದಿನ ಬಾರಿ ಕಾಂಗ್ರೆಸ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಮತ್ತು ಇನ್ನೂ ಹಲವು ಪ್ರಶ್ನೆಗಳ ಬಗ್ಗೆ ಅವರು ಸಮಗ್ರವಾಗಿ ಉತ್ತರಿಸಿದ್ದಾರೆ.
ಇತ್ತೀಚಿಗೆ ಕರ್ನಾಟಕದ ರಾಜಕಾರಣ ದೆಹಲಿ ಮಟ್ಟದಲ್ಲಿ ದೊಡ್ಡದಾಗಿ ಸದ್ದು ಮಾಡಿದ್ದು ಎರಡು ವಿದ್ಯಮಾನಗಳು. ಒಂದು ಬಿಜೆಪಿಗೆ ಸಂಬಂಧಿಸಿದ್ದು, ಮುಖ್ಯಮಂತ್ರಿ ಪಟ್ಟದಿಂದ ಬಿ.ಎಸ್.ಯಡಿಯೂರಪ್ಪರನ್ನು ಇಳಿಸಿ, ನಾಯಕತ್ವ ಬದಲಾವಣೆ ಮಾಡುವುದು. ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ನ ನಾಯಕರು ಮುಂದಿನ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಮುಖ್ಯಮಂತ್ರಿಯಾಗಲು ನಾಮುಂದು ತಾಮಂದು ಎಂದು ಹಾತೊರೆತ ಆರಂಭಿಸಿದ್ದು. ಕಾಂಗ್ರೆಸ್ ನಾಯಕರ ಬಣ ವಿಭಜನೆಯನ್ನು ಶಮನಗೊಳಿಸುವ ಪ್ರಯತ್ನದಲ್ಲಿ ದೆಹಲಿ ಭೇಟಿ ನೀಡಿ ಉನ್ನತ ಮಟ್ಟದ ವಕ್ತಾರರನ್ನು ಭೇಟಿಯೂ ಆಗಿದ್ದರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದಕ್ಕಿಂತ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರುವುದು ಮಾತ್ರ ಸದ್ಯದ ಗುರಿ ಎಂದು ಮಂತ್ರದಂತೆ ಉಚ್ಛರಿಸುತ್ತಲೇ ಇದ್ದರು.
ಈ ಎಲ್ಲ ವಿದ್ಯಮಾನಗಳ ಬಗ್ಗೆ ಟಿವಿ9 ಕನ್ನಡದ ಹಿರಿಯ ನಿರೂಪಕ ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಂದರ್ಶನವನ್ನು ನಡೆಸಿದ್ದಾರೆ. ಆ ಸಂದರ್ಶನ ಇಲ್ಲಿದೆ. ಕಾಂಗ್ರೆಸ್ನ್ನು ಬಲಪಡಿಸುವ ದೃಷ್ಟಿಯಿಂದ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸೇರಿದ್ದವರಿಗೆ ಕಾಂಗ್ರೆಸ್ ಮಣೆ ಹಾಕಲಿದೆಯೇ? ಮುಂದಿನ ಬಾರಿ ಕಾಂಗ್ರೆಸ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಮತ್ತು ಇನ್ನೂ ಹಲವು ಪ್ರಶ್ನೆಗಳ ಬಗ್ಗೆ ಅವರು ಸಮಗ್ರವಾಗಿ ಉತ್ತರಿಸಿದ್ದಾರೆ.
(Congress KPCC President DK Shivakumar Special interview by Tv9 Kannada Digital by senior Anchor Hariprasad about Karnataka Politics )