ಬೆಂಗಳೂರಿನಲ್ಲಿ ಕೈ ನಾಯಕನ ರೌಂಡ್ಸ್: ಬಿಎಂಟಿಸಿಯಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ ಟಿಕೆಟ್ ತಗೊಂಡ್ರಾ?
ಕನ್ನಿಂಗ್ಹ್ಯಾಮ್ ರಸ್ತೆಯ ಕೆಫೆಯಲ್ಲಿ ಗ್ರಾಹಕರ ಜೊತೆ ಕಾಫಿ ಸವಿದು ಕಷ್ಟ-ಸುಖಗಳನ್ನು ಆಲಿಸಿದ್ದಾರೆ. ಬಳಿಕ ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡಿ ಪ್ರಯಾಣಿಕರ ಕುಂದು ಕೊರತೆಗಳಿಗೆ ಕಿವಿಯಾದ್ರು. BMTC ಬಸ್ನಲ್ಲಿ ಪ್ರಯಾಣಿಕರ ಜೊತೆ ಚರ್ಚೆ ನಡೆಸಿದರು.
ಪ್ರಚಾರದ ಕಣದಲ್ಲಿ ಕ್ಲೈಮ್ಯಾಕ್ಸ್ ಕ್ಯಾಂಪೇನ್ ಮಾಡ್ತಿರುವ ರಾಹುಲ್ ಗಾಂಧಿ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿ ಕ್ಯಾಂಪೇನ್ ಮಾಡಿದ್ದಾರೆ. ಕನ್ನಿಂಗ್ಹ್ಯಾಮ್ ರಸ್ತೆಯ ಕೆಫೆಯಲ್ಲಿ ಗ್ರಾಹಕರ ಜೊತೆ ಕಾಫಿ ಸವಿದು ಕಷ್ಟ-ಸುಖಗಳನ್ನು ಆಲಿಸಿದ್ದಾರೆ. ಬಳಿಕ ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡಿ ಪ್ರಯಾಣಿಕರ ಕುಂದು ಕೊರತೆಗಳಿಗೆ ಕಿವಿಯಾದ್ರು. BMTC ಬಸ್ನಲ್ಲಿ ಪ್ರಯಾಣಿಕರ ಜೊತೆ ಚರ್ಚೆ ನಡೆಸಿದರು.
ಇನ್ನು ನಿನ್ನೆ ಪುಲಕೇಶಿನಗರ ಕ್ಷೇತ್ರದಲ್ಲಿ ರೋಡ್ ಶೋ ಮಾಡಿದ್ರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕಾಂಗ್ರೆಸ್ ಅಭ್ಯರ್ಥಿ ಎ.ಸಿ.ಶ್ರೀನಿವಾಸ್ ಪರ ಮತ ಬೇಡಿದ್ರು. ಇದೇ ವೇಳೆ ಬಿಜೆಪಿ ದ್ವೇಷ ಹರಡುತ್ತೆ. ನಾವು ಪ್ರೀತಿಯಿಂದ ಜನರನ್ನು ಬೆಸೆಯುತ್ತೇವೆೆ. ದ್ವೇಷದ ಬಜಾರ್‌ನಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇವೆ ಅಂತಂದ್ರು. ಬಿಜೆಪಿ ವಿರುದ್ಧ ಬೆಲೆ ಏರಿಕೆ, 40 ಪರ್ಸೆಂಟ್ ಅಸ್ತ್ರ ಝಳಪಿಸಿದ್ರು. ಡೆಲಿವರಿ ಬಾಯ್ ಸ್ಕೂಟರ್ ಏರಿದ ರಾಹುಲ್, ಸಿಟಿ ಮಂದಿಯ ಗಮನ ಸೆಳೆದ್ರು. ಏರ್‌ಲೈನ್ಸ್ ಹೊಟೇಲ್‌ನಿಂದ ಶಾಂಗ್ರಿಲಾ ಹೋಟೆಲ್ ವರೆಗೆ ಸ್ಕೂಟರ್‌ನಲ್ಲಿ ಸವಾರಿ ಮಾಡ್ತಾ ಸಂವಾದ ನಡೆಸಿದ್ರು. ಇಲ್ಲಿಂದ ನೇರವಾಗಿ ಆನೇಕಲ್ಗೆ ಎಂಟ್ರಿಕೊಟ್ಟ ರಾಹುಲ್, ರೋಡ್ ಶೋ ನಡೆಸಿದ್ರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಹುಲ್ಗೆ ಸಾಥ್ ಕೊಟ್ರು. ರಾತ್ರಿ ಶಿವಾಜಿನಗರದಲ್ಲಿ ಕ್ಯಾಂಪೇನ್ ಮಾಡಿದ ಕೈ ನಾಯಕ ಬಿಜೆಪಿ ವಿರುದ್ಧ ಗುಡುಗಿದ್ರು.