ಜಮೀರ್ ಅಹ್ಮದ್ರಂಥ ನಾಯಕರಿಗೆ ಬಳಸುವ ಭಾಷೆ ಮೇಲೆ ಹಿಡಿತವಿರಬೇಕು, ಪರಸ್ಪರ ಕೆಸರೆರಚಾಟದಲ್ಲಿ ಅವಾಚ್ಯ ಶಬ್ದಗಳ ಪ್ರಯೋಗವಾಗುತ್ತಿದೆ
ಸಿದ್ದರಾಮಯ್ಯನವರ ಬಾಲಬಡುಕನಂತೆ ಆಡುವ ಜಮೀರ್ ಅವರು ತಮ್ಮ ನಾಲಗೆ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಟೀಕೆ ಮಾಡಲು ಬೇಕಾದಷ್ಟು ಪದಗಳಿವೆ. ಸುಸಂಸ್ಕೃತ ಭಾಷೆಯಲ್ಲಿ ಎದೆಗೆ ನಾಟುವ ಹಾಗೆ ಟೀಕಿಸಬಹುದು.
ರಾಜಕಾರಣಿಗಳು ತಮ್ಮ ನಾಲಗೆ ಮನಬಂದಂತೆ ಹರಿಬಿಡುತ್ತಿದ್ದಾರೆ ಅಂತ ನಾವು ಹೇಳತ್ತಲೇ ಇದ್ದೇವೆ, ಅದರೆ ಅವರ ಮೇಲೆ ಅದು ಯಾವುದೇ ಪ್ರಭಾವ ಬೀರುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಇತರ ನಾಯಕರ ವಿರುದ್ಧ ಹಗುರವಾಗಿ ಮಾತಾಡಿದ ಹಾಗೆಯೇ, ಬಿಜೆಪಿ ನಾಯಕರು ಸಹ ತಮ್ಮ ವಿರೋಧಿಗಳನ್ನು ಕುರಿತು ಕೆಟ್ಟ ಭಾಷೆ ಬಳಸುತ್ತಿದ್ದಾರೆ. ರಾಜ್ಯದ ಜನರಿಗೆ, ತಮ್ಮ ಬೆಂಬಲಿಗರಿಗೆ ಮೇಲ್ಪಂಕ್ತಿ ಹಾಕಬೇಕಿರುವ ನಾಯಕರು ತಾವೇ ಹಳಿ ತಪ್ಪುತ್ತಿದ್ದಾರೆ. ಇದು ತಪ್ಪು ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತಿದೆ ಎಂಬ ಅರಿವಿದ್ದರೂ ನಾಯಕರು ತಮ್ಮನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿತ್ತಿಲ್ಲ. ಎದುರಾಳಿಗಳ ವಿರುದ್ಧ ಕೆಟ್ಟ ಭಾಷೆ ಬಳಸಿದಾಗ ಜನ ಚಪ್ಪಾಳೆ ತಟ್ಟುತ್ತಾರೆ, ಶಿಳ್ಳೆ ಹಾಕುತ್ತಾರೆ. ಇದು ನಮ್ಮ ನಾಯಕರಿಗೆ ಅಮಲೇರುವಂತೆ ಮಾಡುತ್ತಿದೆ.
ಹಾನಗಲ್ ಉಪಚುನಾವಣೆಯಲ್ಲಿ ಮಂಗಳವಾರ ಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್ ನಾಯಕ ಜಮೀರ್ ಆಹ್ಮದ್, ಬಿಜೆಪಿಯ ನಾಯಕರು ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ವಿಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಾ ಮಾತಿನ ಭರದಲ್ಲಿ ‘ಮುಂ..ಮಕ್ಕಳು’ ಅನ್ನುವ ಪದ ಬಳಸುತ್ತಾರೆ. ತಮ್ಮ ಪದಪ್ರಯೋಗಕ್ಕೆ ಜಮೀರ್ ಕರತಾಡನ, ಶಿಳ್ಳೆ ಮತ್ತು ಶಹಬ್ಬಾಸ್ಗಿರಿ ಗಿಟ್ಟಿಸುತ್ತಾರೆ.
ಸಿದ್ದರಾಮಯ್ಯನವರ ಬಾಲಬಡುಕನಂತೆ ಆಡುವ ಜಮೀರ್ ಅವರು ತಮ್ಮ ನಾಲಗೆ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಟೀಕೆ ಮಾಡಲು ಬೇಕಾದಷ್ಟು ಪದಗಳಿವೆ. ಸುಸಂಸ್ಕೃತ ಭಾಷೆಯಲ್ಲಿ ಎದೆಗೆ ನಾಟುವ ಹಾಗೆ ಟೀಕಿಸಬಹುದು. ನಾಳೆ ಜಮೀರ್ ಅವರನ್ನು ಟೀಕಿಸಲು ಬಿಜೆಪಿ ನಾಯಕರು ಸಹ ಅದೇ ಧಾಟಿಯಲ್ಲಿ ಮಾತಾಡುತ್ತಾರೆ. ಇದು ಚೇನ್ ರಿಯಾಕ್ಷನ್, ಮುಂದುವರಿಯುತ್ತಾ ಹೋಗುತ್ತದೆ.
ಪಕ್ಷಾತೀತವಾಗಿ ನಮ್ಮ ನಾಯಕರು ಒಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ. ಇದು ಕೂಡಲೇ ನಿಲ್ಲಬೇಕು.
ಇದನ್ನೂ ಓದಿ: ಪ್ರಾರ್ಥನಾ ಮಂದಿರಗಳ ಮುಂದೆ ಭಕ್ತರು ಕಳಚಿರುವ ಚಪ್ಪಲಿಗಳು ಹೇಗೆ ಕಳುವಾಗುತ್ತವೆ ಗೊತ್ತಾ? ವಿಡಿಯೋ ನೋಡಿ