ಮುಂದಿನ ವಿಧಾನ ಸಭೆ ಚುನಾವಣೆಯನ್ನು ಬಿಜೆಪಿ ಮುಖ್ಯಮಂತ್ರಿ ಬೊಮ್ಮಾಯಿಯವರ ನೇತೃತ್ವದಲ್ಲಿ ಎದುರಿಸಲಿದೆ: ರಮೇಶ್ ಜಾರಕಿಹೊಳಿ

ಬಿ ಎಸ್ ವೈ ಅಧಿಕಾರ ತ್ಯಜಿಸುವಾಗ ಭಾವುಕರಾಗಿ ಕಣ್ಣೀರು ಹಾಕಿದರೇ ಹೊರತು ಕುರ್ಚಿ ಕಳೆದುಕೊಂಡ ವೇದನೆಯಿಂದಲ್ಲ ಎಂದು ರಮೇಶ್ ಹೇಳಿದರು. ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡುವುದು ತಪ್ಪಿದ ಕಾರಣಕ್ಕೆ ಅವರು ದುಃಖಿತರಾದರು ಎಂದು ಅವರು ಹೇಳಿದರು.

TV9kannada Web Team

| Edited By: Arun Belly

Oct 26, 2021 | 10:50 PM

ಸ್ಲೀಜ್ ಸಿಡಿ ಬಹಿರಂಗಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ವಿರಳ ಸಂದರ್ಭಗಳಲ್ಲಿ ಮಾತ್ರ. ಆ ಘಟನೆ ಮತ್ತು ಅದರ ನಂತರ ನಡೆದ ಬೆಳವಣಿಗೆಗಳಿಂದ ಅವರು ವಿಚಲಿತರಾಗಿದ್ದು ಸತ್ಯ. ಮಂಗಳವಾರದಂದು ರಮೇಶ್, ಹಾನಗಲ್ ವಿಧಾನ ಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯ ಪ್ರಚಾರಕ್ಕೆ ಆಗಮಿಸಿದರು. ಹಾನಗಲ್ ತಾಲ್ಲೂಕಿನ ಅರಳೇಶ್ವರ ಗ್ರಾಮದಲ್ಲಿ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಮಾಧ್ಯಮದವರ ಕೈಗೆ ಸಿಕ್ಕರು. ಯಡಿಯೂರಪ್ಪನವರ ಕಣ್ಣೀರು, ಬಸವರಾಜ ಬೊಮ್ಮಾಯಿ ಅವರ ನಾಯಕತ್ವ ಮತ್ತು 2023ರಲ್ಲಿ ನಡೆಯುವ ವಿಧಾನ ಸಭೆ ಚುನಾವಣೆಯನ್ನು ಬಿಜೆಪಿ ಯಾರ ನೇತೃತ್ವದಲ್ಲಿ ಎದುರಿಸಲಿದೆ ಎಂಬ ಪ್ರಶ್ನೆಗಳಿಗೆ ಅವರು ತಮ್ಮ ಎಂದಿನ ಬೆಳಗಾವಿ ಭಾಷೆಯಲ್ಲಿ ಉತ್ತರ ನೀಡಿದರು.

ಬಿ ಎಸ್ ವೈ ಅಧಿಕಾರ ತ್ಯಜಿಸುವಾಗ ಭಾವುಕರಾಗಿ ಕಣ್ಣೀರು ಹಾಕಿದರೇ ಹೊರತು ಕುರ್ಚಿ ಕಳೆದುಕೊಂಡ ವೇದನೆಯಿಂದಲ್ಲ ಎಂದು ರಮೇಶ್ ಹೇಳಿದರು. ವಯಸ್ಸು 75 ಆದ ನಂತರ ಮುಖ್ಯಮಂತ್ರಿಯಾಗಿ ಮುಂದುವರಿಯುವಂತಿಲ್ಲ ಎಂದು ಪಕ್ಷದ ಹೈಕಮಾಂಡ್ ಮೊದಲೇ ಅವರಿಗೆ ತಿಳಿಸಿತ್ತು. ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡುವುದು ತಪ್ಪಿದ ಕಾರಣಕ್ಕೆ ಅವರು ದುಃಖಿತರಾದರು ಎಂದು ಅವರು ಹೇಳಿದರು.

ಬೊಮ್ಮಾಯಿ ಮುಂದಿನ ಮುಖ್ಯಮಂತ್ರಿ ಎಂದು ಅವರೇ ಸೂಚಿಸಿದ್ದು ಎಂದ ಶಾಸಕರು, ಹೊಸ ಮುಖ್ಯಮಂತ್ರಿ ಅದ್ಭುತವಾದ ರೀತಿಯಲ್ಲಿ ಆಡಳಿತ ನಡೆಸುತ್ತಿರುವುದು ಕಂಡು ಕಾಂಗ್ರೆಸ್ ನಾಯಕರು ಅಸೂಯೆಪಟ್ಟುಕೊಳ್ಳುತ್ತಿದ್ದಾರೆ ಅಂತ ಹೇಳಿದರು.

ಮುಂದಿನ ವಿಧಾನ ಸಭೆ ಚುನಾವಣೆಯನ್ನು ಬಿಜೆಪಿ ಬಸವರಾ ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸಲಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಪಕ್ಷದ ವರಿಷ್ಠ ನಾಯಕರಾದ ಅಮಿತ್ ಶಾ ಅವರು ಈ ವಿಷಯವನ್ನು ಆಗಲೇ ಸ್ಪಷ್ಟಪಡಿಸಿದ್ದಾರೆ ಅಂತ ಅವರು ಹೇಳಿದರು.

ಇದನ್ನೂ ಓದಿ:  ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ; ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ ಮುಸ್ಲಿಂ ಸಮುದಾಯದ ವ್ಯಕ್ತಿ, ವಿಡಿಯೋ ವೈರಲ್

Follow us on

Click on your DTH Provider to Add TV9 Kannada