ಇಫ್ತಾರ್ಕೂಟದಲ್ಲಿ ಮಟನ್ ಬಿರಿಯಾನಿ ಸವಿದ ‘ಕೈ’ ನಾಯಕರು
ಜೊತೆಯಲ್ಲೇ ಊಟಕ್ಕೆ ಕುಳಿತ ಡಾ ಯತೀಂದ್ರ ಸಿದ್ದರಾಮಯ್ಯಗೆ ರೋಟಿ ದಾಲ್ ಊಟ ಮಾಡಿದ್ದಾರೆ. ಇಫ್ತಿಯಾರ್ ಕೂಟದಲ್ಲಿ ಹಲವು ಮುಸ್ಲಿಂ ಮುಖಂಡರು ಭಾಗಿಯಾಗಿದ್ದಾರೆ.
ಮೈಸೂರು: ರಂಜಾನ್ ಮಾಸ ಹಿನ್ನೆಲೆ ಸಿದ್ದರಾಮಯ್ಯರಿಂದ ಇಫ್ತಿಯಾರ್ ಕೂಟ (Iftar Gathering) ವನ್ನು ನಗರದ ಬೆಂಗಳೂರು ರಸ್ತೆಯ ಮಿಲನ್ ಫಂಕ್ಷನ್ ಹಾಲ್‌ನಲ್ಲಿ ಆಯೋಜನೆ ಮಾಡಲಾಗಿದ್ದು, ಬಿಳಿ ಬಣ್ಣದ ಮುಸ್ಲಿಂ ಟೋಪಿ ಹಾಕಿಕೊಂಡು ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿದ್ದಾರೆ. ಮಗ ಡಾ. ಯತೀಂದ್ರ ಸಿದ್ದರಾಮಯ್ಯ ಸಹಾ ಟೋಪಿ ಹಾಕಿಕೊಂಡು ಭಾಗಿಯಾಗಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಇಫ್ತಿಯಾರ್ ಕೂಟ ಆಯೋಜನೆ ಮಾಡಿದ್ದು, ರಾತ್ರಿ 9 ಗಂಟೆವರೆಗೂ ಇಫ್ತಿಯಾರ್ ಕೂಟ ನಡೆಯಲಿದೆ. ಶಾಸಕ ತನ್ವೀರ್ ಸೇಠ್, ಕೆಪಿಸಿಸಿ ಕಾರ್ಯಧ್ಯಕ್ಷ ಆರ್ ಧೃವನಾರಾಯಣ್ ಜತೆಗೆ ಒಟ್ಟಿಗೆ ಊಟ ಮಾಡಿದ್ದು, ಕೈ ನಾಯಕರು ಮಟನ್ ಬಿರಿಯಾನಿ ಸವಿದಿದ್ದಾರೆ. ಜೊತೆಯಲ್ಲೇ ಊಟಕ್ಕೆ ಕುಳಿತ ಡಾ ಯತೀಂದ್ರ ಸಿದ್ದರಾಮಯ್ಯಗೆ ರೋಟಿ ದಾಲ್ ಊಟ ಮಾಡಿದ್ದಾರೆ. ಇಫ್ತಿಯಾರ್ ಕೂಟದಲ್ಲಿ ಹಲವು ಮುಸ್ಲಿಂ ಮುಖಂಡರು ಭಾಗಿಯಾಗಿದ್ದಾರೆ.
ಇದನ್ನೂ ಓದಿ:
RR vs KKR Playing XI IPL 2022: ಸ್ಯಾಮ್ಸನ್ vs ಶ್ರೇಯಸ್: ಉಭಯ ತಂಡಗಳ ಪ್ಲೇಯಿಂಗ್ 11
Published on: Apr 17, 2022 08:55 PM