KGF Chapter 2: ರಾಕಿ ಸಾಮ್ರಾಜ್ಯ ವೀಕ್ಷಿಸುತ್ತಿರುವ ಬೆಂಗಳೂರು ಬಾಯ್ಸ್; ಆರ್​ಸಿಬಿ ತಂಡಕ್ಕೆ ‘ಕೆಜಿಎಫ್ ಚಾಪ್ಟರ್ 2’ ವಿಶೇಷ ಪ್ರದರ್ಶನ

IPL 2022 | Virat Kohli | Yash: ಐಪಿಎಲ್​ನಲ್ಲಿ ಗೆಲುವಿನ ಟ್ರ್ಯಾಕ್​ನಲ್ಲಿರುವ ‘ಆರ್​ಸಿಬಿ’ ತಂಡಕ್ಕೆ ‘ಕೆಜಿಎಫ್ ಚಾಪ್ಟರ್ 2’ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಈ ಬಗ್ಗೆ ತಂಡ ಮಾಹಿತಿ ಹಂಚಿಕೊಂಡಿದೆ. ಸುದ್ದಿ ತಿಳಿದ ಅಭಿಮಾನಿಗಳು ಥ್ರಿಲ್ ಆಗಿದ್ದು, ಆಟಗಾರರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಕುತೂಹಲ ಹೊಂದಿದ್ದಾರೆ.

KGF Chapter 2: ರಾಕಿ ಸಾಮ್ರಾಜ್ಯ ವೀಕ್ಷಿಸುತ್ತಿರುವ ಬೆಂಗಳೂರು ಬಾಯ್ಸ್; ಆರ್​ಸಿಬಿ ತಂಡಕ್ಕೆ ‘ಕೆಜಿಎಫ್ ಚಾಪ್ಟರ್ 2’ ವಿಶೇಷ ಪ್ರದರ್ಶನ
ಆರ್​ಸಿಬಿ ತಾರಾ ಆಟಗಾರರಾದ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​​ವೆಲ್, ಫಾಫ್​ಡು ಪ್ಲೆಸಿಸ್ (ಎಡ ಚಿತ್ರ), ‘ಕೆಜಿಎಫ್ 2’ ಚಿತ್ರದಲ್ಲಿ ಯಶ್ (ಬಲ ಚಿತ್ರ)
Follow us
TV9 Web
| Updated By: shivaprasad.hs

Updated on:Apr 17, 2022 | 8:47 PM

ವಿಶ್ವಾದ್ಯಂತ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಹವಾ ಜೋರಾಗಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮೊದಲಾದ ತಾರೆಯರು ಬಣ್ಣಹಚ್ಚಿರುವ ಚಿತ್ರ ಬಾಕ್ಸಾಫೀಸ್​ನಲ್ಲಿ ಜಯಭೇರಿ ಬಾರಿಸಿದ್ದು, ಈಗಾಗಲೇ ಚಿತ್ರದ ಗಳಿಕೆ 400 ಕೋಟಿ ರೂ ದಾಟಿದೆ. ಇತ್ತೀಚೆಗಷ್ಟೇ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಹೊಸ ಒಪ್ಪಂದ ಮಾಡಿಕೊಂಡಿದ್ದವು. ಕ್ರೀಡೆ ಹಾಗೂ ಮನರಂಜನೆಯಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಲು ಜತೆಯಾಗಿ ಸಾಗುವುದಾಗಿ ಎರಡೂ ಸಂಸ್ಥೆಗಳು ಘೋಷಿಸಿದ್ದವು. ಎಲ್ಲೆಡೆ ‘ಕೆಜಿಎಫ್’ ಟ್ರೆಂಡ್ ಜೋರಾಗಿರುವಂತೆಯೇ ಐಪಿಎಲ್ ಬಯೋಬಬಲ್ ಒಳಗಡೆಯೇ ಆರ್​ಸಿಬಿ ಆಟಗಾರರು ‘ಕೆಜಿಎಫ್ ಚಾಪ್ಟರ್ 2’ ವೀಕ್ಷಿಸುತ್ತಿದ್ದಾರೆ. ಹೌದು. ಇಂದು (ಏ.17) ಆರ್​ಸಿಬಿ ಈ ಬಗ್ಗೆ ಟ್ವೀಟ್ ಹಂಚಿಕೊಂಡಿದ್ದು, ಶೋ ಆರಂಭಗೊಂಡಿದೆ ಎಂದು ಬರೆದುಕೊಂಡಿದೆ.

‘ಆರ್​ಸಿಬಿ ಬಯೋಬಬಲ್​ನಲ್ಲಿ ಕೆಜಿಎಫ್ ಚಾಪ್ಟರ್ 2 ವಿಶೇಷ ಪ್ರದರ್ಶನ. ಬ್ಲಾಕ್​ಬಸ್ಟರ್ ಚಿತ್ರವನ್ನು ವೀಕ್ಷಿಸಲು ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ’ ಎಂದು ಆರ್​ಸಿಬಿ ಟ್ವೀಟ್ ಮಾಡಿದೆ. ನಟ, ನಿರೂಪಕ ದಾನಿಶ್ ಸೇಠ್ ಚಿತ್ರ ಪ್ರದರ್ಶನದ ಫೋಟೋ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ನಟ, ನಿರೂಪಕ ದಾನಿಶ್ ಸೇಠ್ ಹಂಚಿಕೊಂಡ ಟ್ವೀಟ್:

ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್ ಹಾಗೂ ಆರ್​ಸಿಬಿ ಸಹಯೋಗವು ದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಕಾರಣ, ಐಪಿಎಲ್​ ತಂಡ ಹಾಗೂ ನಿರ್ಮಾಣ ಸಂಸ್ಥೆಯೊಂದು ಮೊಟ್ಟಮೊದಲ ಬಾರಿಗೆ ಕೈಜೋಡಿಸಿದ್ದವು. ಬೆಂಗಳೂರೇ ತವರೂರಾಗಿರುವ ಎರಡೂ ಸಂಸ್ಥೆಗಳ ಮುಂದಿನ ಸಹಯೋಗದ ಬಗ್ಗೆ ತೀವ್ರ ಕುತೂಹಲ ಮೂಡಿತ್ತು.  ಕ್ರೀಡೆ ಮತ್ತು ಚಲನಚಿತ್ರ ಮನರಂಜನಾ ವಲಯದಲ್ಲಿ ಅಭಿಮಾನಿಗಳಿಗೆ ಮ್ಯಾಜಿಕ್ ಮೂಮೆಂಟ್‌ಗಳನ್ನು ಸೃಷ್ಟಿಸಲು ನಾವು ಒಟ್ಟಾಗಿ ಪ್ರಯತ್ನಿಸುತ್ತೇವೆ ಎಂದು ನಿರ್ಮಾಪಕ ವಿಜಯ್​ ಕಿರಗಂದೂರು ತಿಳಿಸಿದ್ದರು.

ನಂತರದಲ್ಲಿ ಆರ್​ಸಿಬಿ ಹಾಗೂ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿವೆ. ಆರ್​ಸಿಬಿ ತಂಡದಲ್ಲಿರುವ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಕಪ್ತಾನ ಫಾಫ್​ಡು ಪ್ಲೆಸಿಸ್​ರನ್ನು ‘ಕೆಜಿಎಫ್’ ಎಂದೇ ಅಭಿಮಾನಿಗಳು ಗುರುತಿಸುತ್ತಿದ್ದಾರೆ. ಚಿತ್ರದ ರಿಲೀಸ್ ಸಂದರ್ಭದಲ್ಲಿ ಆರ್​ಸಿಬಿ ಆಟಗಾರರನ್ನು ಒಳಗೊಂಡ ‘ಕೆಜಿಎಫ್’ ಪ್ರೋಮೋ ಒಂದನ್ನು ರಿಲೀಸ್ ಮಾಡಲಾಗಿತ್ತು. ಅದು ವೈರಲ್ ಆಗಿತ್ತು. ಇದೀಗ ಆರ್​ಸಿಬಿ ತಂಡ ಚಿತ್ರ ವೀಕ್ಷಣೆ ನಡೆಸುತ್ತಿದ್ದು, ತಾರಾ ಆಟಗಾರರ ಪ್ರತಿಕ್ರಿಯೆ ಹೇಗಿರಬಹುದು ಎಂಬುದರ ಬಗ್ಗೆ ಅಭಿಮಾನಿಗಳು ಕುತೂಹಲಗೊಂಡಿದ್ದಾರೆ.

ಇದನ್ನೂ ಓದಿ: ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ವಿಜಯ ಪತಾಕೆ: ಪರಭಾಷೆ ಸೆಲೆಬ್ರಿಟಿಗಳ ಪ್ರತಿಕ್ರಿಯೆ ಏನು?​

James: ಪುನೀತ್ ಧ್ವನಿಯಲ್ಲಿಯೇ ಪ್ರದರ್ಶನ ಕಾಣಲಿದೆ ‘ಜೇಮ್ಸ್’; ಹೇಗೆ? ಎಂದಿನಿಂದ? ಅಪ್ಪು ಅಭಿಮಾನಿಗಳಿಗಿದು ಖುಷಿಯ ವಿಚಾರ

Published On - 8:27 pm, Sun, 17 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ