AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kanhaiya Kumar: ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯ ಕುಮಾರ್​ಗೆ ಕಪಾಳಮೋಕ್ಷ

Kanhaiya Kumar: ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯ ಕುಮಾರ್​ಗೆ ಕಪಾಳಮೋಕ್ಷ

ಸುಷ್ಮಾ ಚಕ್ರೆ
|

Updated on:May 17, 2024 | 10:11 PM

Lok Sabha Elections: ಚುನಾವಣಾ ಪ್ರಚಾರದ ವೇಳೆ ಈಶಾನ್ಯ ದೆಹಲಿಯ ಕಾಂಗ್ರೆಸ್ ಮತ್ತು ಇಂಡಿಯಾ ಬ್ಲಾಕ್ ಅಭ್ಯರ್ಥಿ ಕನ್ನಯ್ಯ ಕುಮಾರ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಕನ್ನಯ್ಯ ಕುಮಾರ್‌ಗೆ ಹಾರ ಹಾಕುವ ನೆಪದಲ್ಲಿ ಬಂದ ಯುವಕನೊಬ್ಬ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಇದಾದ ಬಳಿಕ ಸ್ಥಳದಲ್ಲಿ ಗೊಂದಲ ಉಂಟಾಯಿತು.

ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯ ಕುಮಾರ್ (Kanhaiya Kumar) ಇಂದು (ಶುಕ್ರವಾರ) ಲೋಕಸಭೆ ಚುನಾವಣೆಯ (Lok Sabha Elections 2024) ಪ್ರಚಾರ ನಡೆಸುತ್ತಿದ್ದಾಗ ಯುವಕನೊಬ್ಬ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕನ್ನಯ್ಯ ಕುಮಾರ್ ಚುನಾವಣಾ ಪ್ರಚಾರದ ವೇಳೆ ಹೊರಗೆ ಬರುತ್ತಿದ್ದಂತೆ ಕೈಯಲ್ಲಿ ಹಾರ ಹಿಡಿದ ಯುವಕನೊಬ್ಬ ಅವರ ಕೆನ್ನೆಗೆ ಬಾರಿಸಿದ್ದಾನೆ.

ಈಶಾನ್ಯ ದೆಹಲಿ ಕ್ಷೇತ್ರದಿಂದ ಕಾಂಗ್ರೆಸ್ ಮತ್ತು ಇಂಡಿಯಾ ಬ್ಲಾಕ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಆಗಿದ್ದರೆ, ಬಿಜೆಪಿ ಈ ಕ್ಷೇತ್ರದಿಂದ ಮನೋಜ್ ತಿವಾರಿ ಅವರನ್ನು ಕಣಕ್ಕಿಳಿಸಿದೆ. ಮೇ 25ರಂದು ದೆಹಲಿಯ ಎಲ್ಲಾ 7 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 17, 2024 10:11 PM