ಅಂದಿನ RSS ಚೆನ್ನಾಗಿತ್ತು, ಈಗ ಬಿಜೆಪಿಯ ಪುಢಾರಿಗಳು ಸೇರಿದ ಮೇಲೆ ಹಾಳಾಗಿದೆ: ಕೈ ಶಾಸಕ ಕಿಡಿ

Updated on: Oct 30, 2025 | 3:36 PM

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್‌ ಶಾಸಕ ಬೇಳೂರು ಗೋಪಾಲಕೃಷ್ಣ, ಅಂದಿನ ಆರ್‌ಎಸ್‌ಎಸ್‌ ಚೆನ್ನಾಗಿತ್ತು. ಈಗ ಬಿಜೆಪಿಯ ಪುಢಾರಿಗಳು ಸೇರಿದ ಮೇಲೆ ಆರ್‌ಎಸ್‌ಎಸ್‌ ಹಾಳಾಗಿದೆ ಎಂದಿದ್ದಾರೆ. ಪಿಡಿಒ ಅಮಾನತು ಆದೇಶಕ್ಕೆ ತಡೆಯಾಜ್ಞೆ ವಿಚಾರದಲ್ಲಿ ನ್ಯಾಯಾಲಯದ ಆದೇಶಕ್ಕೆ ನಾವು ತಲೆಬಾಗಬೇಕಾಗಿದೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.

ಬೆಂಗಳೂರು, ಅಕ್ಟೋಬರ್​ 30: ನಾನು ಆರ್​​ಎಸ್​​ಎಸ್​ ಹಾಗೂ ಬಿಜೆಪಿಯಲ್ಲಿದ್ದೆ, ಅಂದಿನ ಆರ್‌ಎಸ್‌ಎಸ್‌ (RSS) ಚೆನ್ನಾಗಿತ್ತು. ಈಗ ಬಿಜೆಪಿಯ ಪುಢಾರಿಗಳು ಸೇರಿದ ಮೇಲೆ ಆರ್‌ಎಸ್‌ಎಸ್‌ ಹಾಳಾಗಿದೆ ಎಂದು ಕಾಂಗ್ರೆಸ್‌ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಸಂಸ್ಥೆ ಕಾರ್ಯಕ್ರಮ ಮಾಡಬೇಕಂದ್ರೆ ಅನುಮತಿ ಬೇಕು ಎಂದಿದ್ರು. ಶಾಲಾ ಆವರಣದಲ್ಲಿ ಅನುಮತಿ ಕೊಡಬಾರದು. ಪಿಡಿಒ ಪ್ರವೀಣ್ ಕುಮಾರ್ ಅಮಾನತು ಆದೇಶಕ್ಕೆ ತಡೆಯಾಜ್ಞೆ ವಿಚಾರವಾಗಿ ಮಾತನಾಡಿ, ಕೋರ್ಟ್ ಆದೇಶಕ್ಕೆ ನಾವು ತಲೆಬಾಗಬೇಕಾಗಿದೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.