ಏ ಪಾಂಚಾಲಿ! ಕುರುಕ್ಷೇತ್ರ ನಾಟಕದ ಭೀಮನ ಪಾತ್ರದ ಡೈಲಾಗ್ ಹೇಳಿದ ಮಿಂಚಿದ ಶಾಸಕ ಶಿವಲಿಂಗೇಗೌಡ
ಏ ಪಾಂಚಾಲಿ, ಎಂದು ಅಲ್ಲಿ ಅಬ್ಬರಿಸಿದ್ದು ಮತ್ಯಾರೂ ಅಲ್ಲ! ಸದಾ ವಿಧಾನಸಭೆ ಕಲಾಪದಲ್ಲಿ ಅಬ್ಬರಿಸುವ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡರು. ಆದರೆ, ಈಗ ಅವರು ಅಬ್ಬರಿಸಿದ್ದು, ನಾಟಕ ಉದ್ಘಾಟನೆ ವೇಳೆ. ಶಾಸಕರ ನಾಟಕರ ಡೈಲಾಗ್ ವಿಡಿಯೋ ಈಗ ಜನಮನ ಗೆದ್ದಿದೆ. ವಿಡಿಯೋ ಇಲ್ಲಿದೆ ನೋಡಿ.
ಹಾಸನ, ಜನವರಿ 16: ಶಾಸಕ ಶಿವಲಿಂಗೇಗೌಡ ಕುರುಕ್ಷೇತ್ರ ನಾಟಕದ ಭೀಮನ ಪಾತ್ರದ ಡೈಲಾಗ್ ಹೇಳಿ ಗಮನ ಸೆಳೆದರು. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗುತ್ತಿನಕೆರೆ ಗ್ರಾಮದಲ್ಲಿ ಬುಧವಾರ ಗ್ರಾಮಸ್ಥರು ಕುರುಕ್ಷೇತ್ರ ನಾಟಕ ಅಭಿನಯಿಸಿದ್ದರು. ನಾಟಕ ಉದ್ಘಾಟನೆಗೆ ತೆರಳಿದ್ದ ಶಿವಲಿಂಗೇಗೌಡ, ಭೀಮನ ಪಾತ್ರ ಅಭಿನಯ ಮಾಡಿ ತೋರಿಸಿದರು.
ಈ ಹಿಂದೆ ಶಿವಲಿಂಗೇಗೌಡ ಪೌರಾಣಿಕ ನಾಟಕದಲ್ಲಿ ಭೀಮನ ಪಾತ್ರ ನಟಿಸುತ್ತಿದ್ದರು. ಹೀಗಾಗಿ ಉದ್ಘಾಟನಾ ಸಮಾರಂಭದ ವೇಳೆ, ಭೀಮನ ಡೈಲಾಗ್ ಹೇಳುವಂತೆ ಜನ ಒತ್ತಾಯಿಸಿದ್ದರು. ಇದೇ ವೇಳೆ ಅವರು, ಕೈಯಲ್ಲಿ ಗದೆ ಹಿಡಿದು ದ್ರೌಪದಿ ಜೊತೆಗಿನ ಸಂಬಾಷಣೆ ಸನ್ನಿವೇಶದ ಡೈಲಾಗ್ ಹೇಳಿದ್ದಾರೆ. ಡೈಲಾಗ್ ಜೊತೆ ಹಾಡು ಹಾಡಿ ಜನರನ್ನು ರಂಜಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ