Karnataka Assembly Session; ಉತ್ತರ ಮತ್ತು ದಕ್ಷಿಣದ ಕುರಿಗಾಹಿಗಳ ನಡುವಿನ ತಾರತಮ್ಯ ಸದನದ ಗಮನಕ್ಕೆ ತಂದ ಶಿವಲಿಂಗೇಗೌಡ

Updated on: Aug 21, 2025 | 2:43 PM

ಕೇಂದ್ರ ಸರ್ಕಾರವು ಭಾರತದ ಅರಣ್ಯ ಪ್ರದೇಶವನ್ನೆಲ್ಲ ಡೀಮ್ಡ್ ಫಾರೆಸ್ಟ್ ಅಂತ ಘೋಷಿಸಿರುವುದರಿಂದ ಕುರಿಗಾಹಿಗಳಿಗೆ ಅರಣ್ಯ ಭಾಗಗಳಿಗೆ ತೆರಳಿ ಕುರಿಗಳನ್ನು ಮೇಯಿಸುವುದು ಆಗುತ್ತಿಲ್ಲ, ಅರಣ್ಯ ಪ್ರದೇಶದಲ್ಲಿ ಕಾಲಿಟ್ಟರೆ ವನಪಾಲಕರು ಅತಿಕ್ರಮಣದ ಕೇಸನ್ನು ಕುರಿಗಾಹಿಗಳ ಮೇಲೆ ಹೇರುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಮಧ್ಯಪ್ರವೇಶ ಮಾಡಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಬೇಕು ಎಂದು ಶಿವಲಿಂಗೇಗೌಡರು ಹೇಳಿದರು.

ಬೆಂಗಳೂರು, ಆಗಸ್ಟ್ 21: ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡರು (KM Shivalinge Gowda) ಅತ್ಯುತ್ತಮ ಸಂಸದೀಯ ಪಟು ಅಂತ ಹೆಸರು ಮಾಡಿದ್ದಾರೆ, ಸದನದಲ್ಲಿ ಅವರು ಮಾತಾಡುವಾಗ ಎಲ್ಲರೂ ಗಮನವಿಟ್ಟು ಆಲಿಸುತ್ತಾರೆ. ಇವತ್ತು ಗೌಡರು ಉತ್ತರದ ಕಡೆಯಿಂದ ಬರುವ ಮತ್ತು ತಮ್ಮ ಭಾಗದ ಕುರಿಗಾಹಿಗಳ ನಡುವೆ ಸರ್ಕಾರದಿಂದ ಆಗುತ್ತಿರುವ ತಾರತಮ್ಯವನ್ನು ಸದನದ ಗಮನಕ್ಕೆ ತಂದರು. ಉತ್ತರದಿಂದ ಬರುವ ಕುರಿಗಾಹಿಗಳಿಗೆ ಸಿಗುತ್ತಿರುವ ಸೌಲಭ್ಯ ಸ್ಥಳೀಯರಿಗೆ ಸಿಗುತ್ತಿಲ್ಲ, ಅವರು ಬೇಸಿಗೆಯಲ್ಲಿ ಮಾತ್ರ ಹುಲ್ಲುಗಾವಲು ಪ್ರದೇಶಗಳನ್ನು ಹುಡುಕಿಕೊಂಡು ದಕ್ಷಿಣ ಕರ್ನಾಟಕದ ಕಡೆ ಬರುತ್ತಾರೆ, ಅರಸೀಕೆರೆ ಭಾಗದ ಕುರಿಗಾಹಿಗಳು ಸಹ ಚನ್ನರಾಯಪಟ್ಟಣದ ಕಡೆ ಗದ್ದೆ ಮತ್ತು ಹುಲ್ಲುಗಾವಲುಗಳನ್ನು ಹುಡುಕಿಕೊಂಡು ವಲಸೆ ಹೋಗುತ್ತಾರೆ, ಹಾಗಾಗಿ ಉತ್ತರದ ಕುರಿಗಾಹಿಗಳಿಗೆ ಸಿಗುವ ಸೌಲಭ್ಯ ಸವಲತ್ತುಗಳು ತಮ್ಮ ಭಾಗದವರಿಗೂ ಸಿಗಬೇಕು ಎಂದು ಗೌಡರು ಹೇಳಿದರು.

ಇದನ್ನೂ ಓದಿ:  Karnataka Assembly session: ಆರ್​ಟಿಐ ಕಾರ್ಯಕರ್ತರು ಐಷಾರಾಮಿ ಬದುಕು ನಡೆಸುತ್ತಿರುವ ಬ್ಲ್ಯಾಕ್​ಮೇಲರ್​ಗಳು: ಯತ್ನಾಳ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ