ಬಿಜೆಪಿಗರದ್ದು ಡೋಂಗಿ ಹಿಂದುತ್ವ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಆರೋಪ
ಬಿಜೆಪಿ ನಾಯಕರ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. ನೀವು ಜೈಲು ಸೇರಿದ್ರೆ ನಿಮ್ಮ ಅಪ್ಪ-ಅಮ್ಮ ಬೇಲ್ ಕೊಡಿಸಲು ಬರಬೇಕು. ಬಿಜೆಪಿ ನಾಯಕರು ಕಳ್ಳರು, ಡೋಂಗಿಗಳು. ಅವರ ನಾಲಿಗೆ ಮೇಲಷ್ಟೇ ಶ್ರೀರಾಮ ಇರೋದು. ಆದರೆ ನಮ್ಮ ಹೃದಯದಲ್ಲಿ ರಾಮ ಇದ್ದಾನೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು, ಅಕ್ಟೋಬರ್ 21: ಮಂಗಳೂರಲ್ಲಿ ಬಿಜೆಪಿಯವರ (BJP) ಪ್ರಚೋದನಕಾರಿ ಭಾಷಣಕ್ಕೆ ಅದೆಷ್ಟೋ ಯುವಕರು ಬಾಳು ಹಾಳು ಮಾಡಿಕೊಂಡಿದ್ದಾರೆ. ಇವರ ಮಕ್ಕಳು ಯಾವತ್ತಾದರೂ ತ್ರಿಶೂಲ ಹಿಡಿಯುತ್ತಾರಾ? ಬೀದಿಗೆ ಬಂದು ಹೋರಾಟ ಮಾಡಿದ್ದನ್ನು ನೋಡಿದ್ದೀರಾ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರಶ್ನಿಸಿದ್ದಾರೆ. ನೀವು ಜೈಲು ಸೇರಿದ್ರೆ ನಿಮ್ಮ ಅಪ್ಪ-ಅಮ್ಮ ಬೇಲ್ ಕೊಡಿಸಲು ಬರಬೇಕು. ಬಿಜೆಪಿ ನಾಯಕರು ಕಳ್ಳರು, ಡೋಂಗಿಗಳು. ಅವರ ನಾಲಿಗೆ ಮೇಲಷ್ಟೇ ಶ್ರೀರಾಮ ಇರೋದು. ಆದರೆ ನಮ್ಮ ಹೃದಯದಲ್ಲಿ ರಾಮ ಇದ್ದಾನೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
