ತನ್ನೊಂದಿಗೆ ಚರ್ಚೆಗೆ ಬರುವಂತೆ ಬಿಜೆಪಿ ನಾಯಕ ಕೆ ಅಣ್ಣಾಮಲೈಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸವಾಲು

|

Updated on: May 04, 2024 | 2:45 PM

ತಾವಿಬ್ಬರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು, ತಾನು ಶಾಸಕ ಮತ್ತು ಅವರು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಜೊತೆಗೆ ಸಂಸದರಾಗಿ ಆಯ್ಕೆಯಾಗುವ ಸಾಧ್ಯತೆಯೂ ಇದೆ. ರಾಜ್ಯಕ್ಕೆ ಕಾಂಗ್ರೆಸ್ ಕೊಡುಗೆ ಏನು ಮತ್ತು ಬಿಜೆಪಿ ಕಾಂಟ್ರಿಬ್ಯೂಷನ್ ಏನು ಅನ್ನೋದನ್ನು ಪರಸ್ಪರ ಖಂಡನೆ ಮಾಡದೆ ಚರ್ಚೆ ಮಾಡೋಣ ಎಂದು ಈಶ್ವರ್ ಹೇಳಿದರು.

ಶಿವಮೊಗ್ಗ: ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar), ಮೇ 7 ಕ್ಕಿಂತ ಮುಂಚೆ ತನ್ನೊಂದಿಗೆ ಡಿಬೇಟ್ ಮಾಡಲು ಬರುವಂತೆ; ನಿನ್ನೆ ಪ್ರಜ್ವಲ್ ರೇವಣ್ಣ ಪ್ರಕರಣದ (Prajwal Revanna) ಬಗ್ಗೆ ಕಾನೂನಿನ ಎಳೆಗಳನ್ನು ಬಿಡಿಸಿ ಹೇಳಿರುವ ಬಿಜೆಪಿ ನಾಯಕ ಕೆ ಅಣ್ಣಾಮಲೈ (K Annamalai) ಅವರಿಗೆ ಸವಾಲೆಸೆದರು. ತಾವಿಬ್ಬರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು, ತಾನು ಶಾಸಕ ಮತ್ತು ಅವರು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಜೊತೆಗೆ ಸಂಸದರಾಗಿ ಆಯ್ಕೆಯಾಗುವ ಸಾಧ್ಯತೆಯೂ ಇದೆ. ರಾಜ್ಯಕ್ಕೆ ಕಾಂಗ್ರೆಸ್ ಕೊಡುಗೆ ಏನು ಮತ್ತು ಬಿಜೆಪಿ ಕಾಂಟ್ರಿಬ್ಯೂಷನ್ ಏನು ಅನ್ನೋದನ್ನು ಪರಸ್ಪರ ಖಂಡನೆ ಮಾಡದೆ ಚರ್ಚೆ ಮಾಡೋಣ ಎಂದು ಈಶ್ವರ್ ಹೇಳಿದರು. ನಿನ್ನೆ ಅಣ್ಣಾಮಲೈ ತಮ್ಮ ಪಕ್ಷದ ವಕ್ತಾರರು ಚರ್ಚೆ  ಮಾಡುತ್ತಾರೆ ಅಂತ ಹೇಳಿದ್ದಾರೆ, ಅದು ಸರಿ, ಬಿಜೆಪಿ ವಕ್ತಾರರು ಮತ್ತು ಕಾಂಗ್ರೆಸ್ ವಕ್ತಾರರೊಂದಿಗೆ ಚರ್ಚೆ ಮಾಡಲಿ, ಆದರೆ ಯುವ ನಾಯಕರಾಗಿ ತಮ್ಮಿಬ್ಬರ ನಡುವೆ ಚರ್ಚೆ ನಡೆಯಲಿ ಎಂದು ಪ್ರದೀಪ್ ಈಶ್ವರ್ ಹೇಳಿದರು. ಪ್ರಧಾನ ಮಂತ್ರಿ ಹಿರಿಯರು ಮತ್ತು ಉನ್ನತ ಹುದ್ದೆಯಲ್ಲಿರುವವರು, ಅವರೊಂದಿಗೆ ಚರ್ಚೆ ಮಾಡುವಷ್ಟು ಯೋಗ್ಯತೆ ತನಗಿಲ್ಲ ಎಂದು ಈಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಾವುದೇ ಹಗರಣ ಮಾಡಿಲ್ಲವೆಂದು ಸುಧಾಕರ್ ಆಣೆ ಪ್ರಮಾಣ ಮಾಡ್ತಾರಾ? ಪ್ರದೀಪ್ ಈಶ್ವರ್ ಸವಾಲ್