Cabinet expansion: ಕೊನೆಗೊಳ್ಳದ ಸಂಪುಟ ವಿಸ್ತರಣೆ ಕಸರತ್ತು, ದೆಹಲಿಯಲ್ಲಿ ಬೀಡುಬಿಟ್ಟ ಶಾಸಕರಿಗೆ ಹೆಚ್ಚುತ್ತಿದೆ ಆತಂಕ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 26, 2023 | 4:36 PM

ಶಿವಕುಮಾರ್, ವಿನಯ್ ಕುಲಕರ್ಣಿ ಅವರನ್ನು ಪ್ರತ್ಯೇಕವಾಗಿ ಕರೆದು ಮಾತಾಡುವಾಗ ಎನ್ ಎ ಹ್ಯಾರಿಸ್ ಅವರ ಜೊತೆಗೂಡುತ್ತಾರೆ.

ದೆಹಲಿ: ಸಂಪುಟ ವಿಸ್ತರಣೆ ಕಾಂಗ್ರೆಸ್ ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೂರು ದಿನಗಳಿಂದ ಕಸರತ್ತು ನಡೆಯುತ್ತಿದೆಯಾದರೂ ಕೊನೆಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ ಮಾರಾಯ್ರೇ. ಸಚಿವಾಕಾಂಕ್ಷಿ ಶಾಸಕರ ಒಂದು ದೊಡ್ಡ ದಂಡು ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಅವರಲ್ಲಿ ಕೆಲವರು ಒಮ್ಮೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಜೊತೆ ಕಾಣಿಸಿಕೊಂಡರೆ ಇನ್ನೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಜೊತೆ ಕಾಣಿಸಿಕೊಳ್ಳುತ್ತಾರೆ. ಇಲ್ನೋಡಿ, ಶಿವಕುಮಾರ್ ಅವರು ಜೇಬಲ್ಲಿ ಒಂದು ಲಕೋಟೆ ಇಟ್ಟುಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಬಂದಾಗ ಅಲ್ಲಿ ಕೆಲ ಶಾಸಕರು ನೆರೆದಿದ್ದರು. ಶಿವಕುಮಾರ್, ವಿನಯ್ ಕುಲಕರ್ಣಿ (Vinay Kulkarni) ಅವರನ್ನು ಪ್ರತ್ಯೇಕವಾಗಿ ಕರೆದು ಮಾತಾಡುವಾಗ ಎನ್ ಎ ಹ್ಯಾರಿಸ್ ಅವರ ಜೊತೆಗೂಡುತ್ತಾರೆ. ಶಾಸಕರು ಗುಂಪುಗೂಡಲಾರಂಭಿಸಿದಾಗ ಶಿವಕುಮಾರ್ ಖರ್ಗೆ ನಿವಾಸದೊಳಗೆ ಹೋಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 26, 2023 04:36 PM