Loading video

ನಿಲ್ಲದ ಸತೀಶ್ ಸೈಲ್ ಮತ್ತು ಆರ್ ವಿ ದೇಶಪಾಂಡೆ ನಡುವಿನ ಜಟಾಪಟಿ, ಅಸಮಾಧಾನ ಹೊರಹಾಕಲು ಕೆಡಿಪಿ ಸಭೆಯೇ ವೇದಿಕೆ

|

Updated on: Jan 28, 2025 | 7:03 PM

ಶಾಸಕರು ಮತ್ತು ಮಂತ್ರಿಗಳು ತಮ್ಮ ಬೇಸರ, ಕೋಪ ಮತ್ತು ಅಸಮಾಧಾನ ಹೊರಹಾಕಲು ಕೆಡಿಪಿ ಇಲ್ಲವೇ ದಿಶಾ ಸಭೆಗಳನ್ನು ಬಳಸುವುದು ವಿಷಾದನೀಯ. ಅವರ ಕೋಪ ತಾಪಗಳಿಗೆ ಅಧಿಕಾರಿಗಳು ಬಲಿಪಶುವಾಗುತ್ತಿರುವುದು ಮತ್ತಷ್ಟು ಶೋಚನೀಯ. ಹಾಗೆ ನೋಡಿದರೆ ತಮ್ಮ ಅಸಮಾಧಾನಗಳನ್ನು ಹೇಳಿಕೊಳ್ಳಲು ಜನಪ್ರತಿನಿಧಿಗಳಿಗೆ ಪಕ್ಷದ ವೇದಿಕೆ ಮತ್ತು ಮಾಧ್ಯಮಗಳಿವೆ.

ಕಾರವಾರ: ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು ಮಾಡಿದ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿ ಜೈಲು ಸೇರಿ ಹೈಕೋರ್ಟ್ ಶಿಕ್ಷೆಯನ್ನು ಅಮಾನತ್ತುಗೊಳಿಸಿದ ಬಳಿಕ ಹೊರಬಂದಿರುವ ಕಾರವಾರದ ಶಾಸಕ ಕಾಂಗ್ರೆಸ್​ನ  ಸತೀಶ್ ಸೈಲ್ ಇಂದು ಕೆಡಿಪಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ಮತ್ತು ಹಳಿಯಾಳದ ಶಾಸಕ ಅರ್ ವಿ ದೇಶಪಾಂಡೆ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು. ದೃಶ್ಯಗಳಲ್ಲಿ ಅವರು ಅಧಿಕಾರಿಗಳ ಮೇಲೆ ರೇಗುತ್ತಿರುವುದನ್ನು ನೋಡಬಹುದು. ನಮ್ಮ ಕಾರವಾರ ಪ್ರತಿನಿಧಿ ನೀಡುವ ಮಾಹಿತಿ ಪ್ರಕಾರ ಸತೀಶ್ ಸೈಲ್ ಮತ್ತು ದೇಶಪಾಂಡೆ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಕೋಲ್ಡ್ ವಾರ್ ನಡೆಯುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೇಲೆಕೇರಿ ಕೇಸ್: ಶಾಸಕ ಸತೀಶ್ ಸೈಲ್ ಸೇರಿ ಇತರೆ ಅಪರಾಧಿಗಳಿಗೆ ಹೈಕೋರ್ಟ್ ರಿಲೀಫ್