ಗಾಂಧೀಜಿ ಹತ್ಯೆಯ ಆರೋಪ ಮಾಡುತ್ತಾ ಕಾಂಗ್ರೆಸ್ ಪಕ್ಷ 30-40 ವರ್ಷಗಳ ಕಾಲ ದೇಶವನ್ನಾಳಿದೆ: ಜಗದೀಶ್ ಶೆಟ್ಟರ್

|

Updated on: Feb 10, 2024 | 6:01 PM

ಗಾಂಧೀಜಿಯನ್ನು ಕೊಂದ ಆರೋಪ ಹೊರಿಸುತ್ತಲೇ ಅವರು 30-40 ವರ್ಷಗಳ ಕಾಲ ಸರ್ಕಾರ ನಡೆಸಿದ್ದಾರೆ, ಗಾಂಧಿ ಕೊಲೆ ಮತ್ತು ಬಿಜೆಪಿ ನಡುವೆ ಯಾವುದೇ ಸಂಬಂಧವಿಲ್ಲ ಅನ್ನೋದು ಬಹಳಷ್ಟು ಸಲ ಸಾಬೀತಾಗಿದೆ, ಅದು ಈಗ ಮುಗಿದುಹೋದ ಅಧ್ಯಾಯ, ಕಾಂಗ್ರೆಸ್ ಪಕ್ಷದವರು ಜನರನ್ನು ನಿರಂತರವಾಗಿ ಮೂರ್ಖರಾಗಿಸಲಾರರು ಎಂದು ಶೆಟ್ಟರ್ ಹೇಳಿದರು.

ಹುಬ್ಬಳ್ಳಿ: ಹಿರಿಯ ರಾಜಕಾರಣಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ಗೆಟಪ್ ಚೇಂಜ್ ಮಾಡಿದ್ದಾರೆ. ತಲೆಗೂದನ್ನು ಚಿಕ್ಕದಾಗಿ ಟ್ರಿಮ್ ಮಾಡಿಸಿದ್ದಾರೆ. ಮೊದಲು ಅಂದರೆ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಮಂದಹಾಸದೊಂದಿಗೆ ಮಾತಾಡುತ್ತಿದ್ರೆ ಈಗ ದೇಶಾವರಿ ನಗೆ ಬೀರುತ್ತಾ ಮಾತಾಡುತ್ತಾರೆ. ಹುಬ್ಬಳ್ಳಿಯಲ್ಲಿಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತಾಡಿದ ಅವರಿಗೆ ಮಾಧ್ಯಮದವರು, ಈಶ್ವರಪ್ಪನವರ (KS Eshwarappa) ಗುಂಡಿಕ್ಕಿ ಕೊಲ್ಲುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಅದೇ ದೇಶಾವರಿ ನಗೆ ಬೀರುತ್ತಾ, ಈಶ್ವರಪ್ಪ ತಮ್ಮ ಮಾತನ್ನು ಡಿಫೆಂಡ್ ಮಾಡಿಕೊಂಡಿದ್ದಾರೆ. ಆದರೆ ತಾನು ಹೇಳುವುದೇನೆಂದರೆ ಯಾರೇ ಆಗಲಿ, ಆ ಕಡೆಯವರಾಗಲೀ ಈ ಕಡೆಯವರಾಗಲೀ ಲಕ್ಷ್ಮಣ ರೇಖೆಯನ್ನು (Lakshman Rekha) ದಾಟಬಾರದು, ಈ ಮಾತನ್ನು ಸದಾ ಪ್ರತಿಪಾದಿಸುತ್ತಾ ಬಂದಿರುವುದಾಗಿ ಹೇಳಿದರು. ಮುಂದುವರಿದು ಮಾತಾಡಿದ ಅವರು ಗಾಂಧೀಜಿಯನ್ನು ಕೊಂದ ಆರೋಪ ಹೊರಿಸುತ್ತಲೇ ಅವರು 30-40 ವರ್ಷಗಳ ಕಾಲ ಸರ್ಕಾರ ನಡೆಸಿದ್ದಾರೆ, ಗಾಂಧಿ ಕೊಲೆ ಮತ್ತು ಬಿಜೆಪಿ ನಡುವೆ ಯಾವುದೇ ಸಂಬಂಧವಿಲ್ಲ ಅನ್ನೋದು ಬಹಳಷ್ಟು ಸಲ ಸಾಬೀತಾಗಿದೆ, ಅದು ಈಗ ಮುಗಿದುಹೋದ ಅಧ್ಯಾಯ, ಕಾಂಗ್ರೆಸ್ ಪಕ್ಷದವರು ಜನರನ್ನು ನಿರಂತರವಾಗಿ ಮೂರ್ಖರಾಗಿಸಲಾರರು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ