Video: ನೀರಿನ ವಿಚಾರವಾಗಿ ಸ್ವಪಕ್ಷದ ಶಾಸಕರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಕಾರ್ಯಕರ್ತೆ
ವಿಜಯನಗರದಲ್ಲಿ ಕುಡಿಯುವ ಟ್ಯಾಂಕರ್ ನೀರಿನ ವಿಚಾರವಾಗಿ ಕಾಂಗ್ರೆಸ್ ಹಾಲಿ ಶಾಸಕ ಗವಿಯಪ್ಪ ಹಾಗೂ ಬಿಜೆಪಿಯ ಮಾಜಿ ಶಾಸಕ ಆನಂದ್ ಸಿಂಗ್ ನಡುವೆ ರಾಜಕೀಯ ಜಟಾಪಟಿ ನಡೆದಿದೆ. ಇದರ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆ ಪಕ್ಷದ ಮುಖ ಮುಖ ಮೂತಿ ನೋಡದೇ ಸ್ವಪಕ್ಷದ ಶಾಸಕ ಗವಿಯಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.
ವಿಜಯನಗರ, (ಮೇ 28): ವಿಜಯನಗರ ಜಿಲ್ಲೆಯ ನಗರ ಪ್ರದೇಶದಲ್ಲೇ ನೀರಿಗೆ ಹಾಹಾಕಾರ ಎದುರಾಗಿದೆ. ಕುಡಿಯುವ ಟ್ಯಾಂಕರ್ ನೀರಿನ ವಿಚಾರವಾಗಿ ಕಾಂಗ್ರೆಸ್ ಹಾಲಿ ಶಾಸಕ ಗವಿಯಪ್ಪ ಮತ್ತು ಮಾಜಿ ಶಾಸಕ ಆನಂದ್ ಸಿಂಗ್ ನಡುವೆ ಜಟಾಪಟಿ ನಡೆದಿದೆ. ಇದರ ಮಧ್ಯ ಪ್ರವೇಶಿಸಿದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತೆ ಸ್ವಪಕ್ಷದ ಶಾಸಕ ಗವಿಯಪ್ಪಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿರುವ ಕೈ ಕಾರ್ಯಕರ್ತೆ ಹಿಂದುಮತಿ, ಶಾಸಕರಾಗಿ 1 ವರ್ಷ ಆಯ್ತು, ಯಾರ ಕಷ್ಟ ಸುಖದಲ್ಲಿ ಭಾಗಿಯಾಗಿದ್ದೀರಿ. ಕಾಂಗ್ರೆಸ್ ಗ್ಯಾರಂಟಿಗಳನ್ನು ಕೊಟ್ಟಿದ್ದರಿಂದ ಗವಿಯಪ್ಪ ಬಚಾವ್ ಆಗಿದ್ದಾರೆ. ಇವತ್ತಿನವರೆಗೆ ಯಾವ ವಾರ್ಡ್ಗೆ ನೀವು ಭೇಟಿ ನೀಡಿದ್ದೀರಿ ಎಂದು ಸ್ವಪಕ್ಷದ ಶಾಸಕರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.
ನೀರಿನ ವಿಚಾರದಲ್ಲಿ ನೀವು ರಾಜಕೀಯ ಮಾಡಬೇಡಿ ಗವಿಯಪ್ಪ ಅವರೇ ನಿಮ್ಮ ತಾಕತ್ನ್ನು ನೀವು ತೋರಿಸಿ. ಆನಂದ್ ಸಿಂಗ್ ಅವರು ತಮ್ಮ ತಾಕತ್ ತೋರಿಸ್ತಾರೆ. ಪಕ್ಷ ಅಡ್ಡ ತಂದು ರಾಜಕೀಯ ಮಾಡಬೇಡಿ. ಅಧಿಕಾರದಲ್ಲಿ ಇರುವ ಮೊದಲೇ ಆನಂದ್ ಸಿಂಗ್ ನೀರು ಕೊಡುತ್ತಿದ್ದಾರೆ. ಕಾಂಗ್ರೆಸ್ಗೆ ದುಡಿದವರನ್ನ ಕರೆದು ಯಾವತ್ತೂ ನೀವು ಮಾತಾಡಿಸಿಲ್ಲ. ನಿಮ್ಮ ಹಿಂಬಾಲಕರನ್ನು ಮಾತ್ರ ಚೆನ್ನಾಗಿ ನೋಡಿಕೊಳ್ತಿದ್ದೀರಿ ಎಂದು ಶಾಸಕ ಗವಿಯಪ್ಪ ಅವರಿಗೆ ಅವರದ್ದೇ ಪಕ್ಷದ ಕಾರ್ಯಕರ್ತೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.

ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ: ಸಿದ್ದರಾಮಯ್ಯ

ಹಕ್ಕಿ ಜ್ವರ: ಕೋಳಿ ಫಾರ್ಮ್ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ

ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ

ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
