ಸಿದ್ದರಾಮಯ್ಯನವರನ್ನು ಫ್ರೀಡಂ ಪಾರ್ಕ್​​ನಲ್ಲಿ ನೋಡುತ್ತಲೇ ಮಹಿಳಾ ಕಾರ್ಯಕರ್ತರು ಪುಳಕಿತರಾಗುತ್ತಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 21, 2022 | 1:23 PM

ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಫ್ರೀಡಂ ಪಾರ್ಕ್​​ನಲ್ಲಿ ಪ್ರತಿಭಟನೆಗೆ ಕುಳಿತಾಗ ಸಿದ್ದರಾಮಯ್ಯ ಮುಂದಿನ ಸಾಲಿನ ಕುರ್ಚಿಯಲ್ಲಿ ಕಂಡು ಹಿಂದಿನ ಸಾಲಿನಲ್ಲಿ ಕುಳಿತ ಮಹಿಳಾ ಕಾರ್ಯಕರ್ತರು ಪುಳಕಿತರಾಗಿ ವಿಶ್ ಮಾಡುತ್ತಾರೆ.

Bengaluru: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಪಕ್ಷದ ಮಹಿಳಾ ಕಾರ್ಯಕರ್ತೆಯರ ನಡುವೆಯೂ ಜನಪ್ರಿಯ ನಾಯಕ ಅಂತ ನಾವು ಹೇಳುತ್ತಲೇ ಇರುತ್ತೇವೆ. ಸೋನಿಯಾ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ (Enforcement Directorate) ವಿಚಾರಣೆಗೆ ಕರೆದಿರುವುದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಫ್ರೀಡಂ ಪಾರ್ಕ್​​ನಲ್ಲಿ (Freedom Park) ಪ್ರತಿಭಟನೆಗೆ ಕುಳಿತಾಗ ಸಿದ್ದರಾಮಯ್ಯ (Siddaramaiah) ಮುಂದಿನ ಸಾಲಿನ ಕುರ್ಚಿಯಲ್ಲಿ ಕಂಡು ಹಿಂದಿನ ಸಾಲಿನಲ್ಲಿ ಕುಳಿತ ಮಹಿಳಾ ಕಾರ್ಯಕರ್ತರು ಪುಳಕಿತರಾಗಿ ವಿಶ್ ಮಾಡುತ್ತಾರೆ. ಸಿದ್ದರಾಮಯ್ಯ ಸಹ ನಗುಮೊಗದಿಂದ ಅವರ ಕೈಕುಲುಕುತ್ತಾರೆ ಮತ್ತು ಯೋಗಕ್ಷೇಮ ವಿಚಾರಿಸುತ್ತಾರೆ.