ಸಭೆಗೆ ಆಹ್ವಾನಿಸಿಲ್ಲ ಎಂದು ಕಾಂಗ್ರೆಸ್ ಕಾರ್ಯಾಗಾರದಲ್ಲಿ ಕಾರ್ಯಕರ್ತರ ಜಗಳ, ಮಾರಾಮಾರಿ
ಕೆಪಿಸಿಸಿ ಸದಸ್ಯರಾಗಿರುವ ಪಿ.ಎನ್ ಕೃಷ್ಣಮೂರ್ತಿಗೆ ಆಹ್ವಾನ ನೀಡದೇ ಇದ್ದದ್ದಕ್ಕೆ 20 ಕ್ಕೂ ಹೆಚ್ಚು ಕೃಷ್ಣಮೂರ್ತಿ ಬೆಂಬಲಿಗರು ಏಕಾಏಕಿ ಗಲಾಟೆ ಮಾಡಿದ್ದಾರೆ. ದಾಸರಹಳ್ಳಿ ಕ್ಷೇತ್ರ ಕಾಂಗ್ರೆಸ್ ಉಸ್ತುವಾರಿ ನಾಗಲಕ್ಷ್ಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಕಾರ್ಯಾಗಾರದಲ್ಲಿ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಕೆಪಿಸಿಸಿ ಸದಸ್ಯರಾಗಿರುವ ಪಿ.ಎನ್ ಕೃಷ್ಣಮೂರ್ತಿ ಅವರನ್ನ ಆಹ್ವಾನಿಸಿಲ್ಲ ಎಂಬ ಕಾರಣಕ್ಕೆ ಬೆಂಬಲಿಗರು ದಾಸರಹಳ್ಳಿ ಕ್ಷೇತ್ರ ಕಾಂಗ್ರೆಸ್ ಉಸ್ತುವಾರಿ ನಾಗಲಕ್ಷ್ಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ 20 ಕ್ಕೂ ಹೆಚ್ಚು ಕೃಷ್ಣಮೂರ್ತಿ ಬೆಂಬಲಿಗರಿಂದ ಏಕಾಏಕಿ ಗಲಾಟೆ ಮಾಡಿ ಮಾರಾಮಾರಿ ನಡೆದಿದೆ.
Published on: Nov 10, 2022 03:53 PM