ಹರಿಹರಕ್ಕೆ ಸಿದ್ದರಾಮಯ್ಯ ಬಂದಾಗ ಕಾರ್ಯಕರ್ತರಿಂದ ಭಾವಿ ಮುಖ್ಯಮಂತ್ರಿಗೆ ಜಯವಾಗಲಿ ಘೋಷಣೆ!
ಸಿದ್ದರಾಮಯ್ಯನವರನ್ನು ಹಾರ ತುರಾಯಿಗಳಿಂದ ಸನ್ಮಾನಿಸಲಾಯಿತು. ಕಾರ್ಯಕರ್ತರು ತಾಯಿ ಚಾಮುಂಡೇಶ್ವರಿಗೆ ಜಯವಾಗಲಿ ಆತ ಘೋಷಣೆಗಳನ್ನು ಕೂಗುತ್ತಾ, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ ಅಂತಲೂ ಕೂಗಿದರು.
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ರಾಜ್ಯದ ಎಲ್ಲ ಮೂಲೆಗಳಲ್ಲಿ ಅಭಿಮಾನಿಗಳಿರೋದು ನಿರ್ವಿವಾದಿತ. ಶನಿವಾರ ವಿರೋಧ ಪಕ್ಷದ ನಾಯಕರು ದಾವಣಗೆರೆ ಜಿಲ್ಲೆ ಹರಿಹರ ಪಂಚಮಸಾಲಿ ಪೀಠದ ಶ್ರೀಗಳಾದ ಶ್ರೀ ವಚನಾನಂದ (Sri Vachananda Swamy) ಅವರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೆಲಿಕಾಪ್ಟರ್ ಒಂದರಲ್ಲಿ ಆಗಮಿಸಿದರು. ಸಿದ್ದರಾಮಯ್ಯ ಇರುವೆಡೆ ಜನ ಮತ್ತು ಕಾರ್ಯಕರ್ತರು ಮುಕ್ಕುರುವುದನ್ನು ನಾವು ನೋಡಿದ್ದೇವೆ. ಇಲ್ಲಿ ಕತೆ ಭಿನ್ನವಾಗೇನೂ ಇರಲಿಲ್ಲ. ನೆರೆದಿದ್ದ ಜನರಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಧುರೀಣ ಶ್ಯಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ ಮತ್ತ್ತು ಹಿಂದೊಮ್ಮೆ ಅಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಹೂವಿನ ಹಡಗಲಿ ಶಾಸಕ ಪಿಟಿ ಪರಮೇಶ್ವರ ನಾಯಕ್ ಸಹ ಇದ್ದರು.
ಸಿದ್ದರಾಮಯ್ಯನವರನ್ನು ಹಾರ ತುರಾಯಿಗಳಿಂದ ಸನ್ಮಾನಿಸಲಾಯಿತು. ಕಾರ್ಯಕರ್ತರು ತಾಯಿ ಚಾಮುಂಡೇಶ್ವರಿಗೆ ಜಯವಾಗಲಿ ಆತ ಘೋಷಣೆಗಳನ್ನು ಕೂಗುತ್ತಾ, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ ಅಂತಲೂ ಕೂಗಿದರು. ಇಂಥ ಘೋಷಣೆಯನ್ನು ಸಿದ್ದರಾಮಯ್ಯ ನಿಸ್ಸಂದೇಹವಾಗಿ ಎಂಜಾಯ್ ಮಾಡುತ್ತಾರೆ ಮಾರಾಯ್ರೇ!
ವಿಧಾನ ಸಭೆಗೆ ಇನ್ನೂ ಒಂದು ವರ್ಷ ಬಾಕಿಯಿದೆ. ಎಲ್ಲ ಪಕ್ಷಗಳು ತಮ್ಮ ತಮ್ಮ ಲೆಕ್ಕಾಚಾರದಲ್ಲಿ ಮುಳುಗಿವೆ. ಈ ಬಾರಿಯ ಚುನಾವಣಾ ಕಣಕ್ಕೆ ಆಪ್ ರೂಪದಲ್ಲಿ ಹೊಸ ಪಕ್ಷದ ಪ್ರವೇಶವಾಗಲಿದೆ. ಆಪ್ ಎಷ್ಟು ಸ್ಥಾನಗಳಿಗೆ ಸ್ಪರ್ಧಿಸಲಿದೆ ಅಂತ ಯಾವುದೇ ಊಹೆ ಇಲ್ಲ ಆದರೆ ಸ್ಪರ್ಧಿಸಿದ ಕ್ಷೇತ್ರಗಳಲ್ಲಿ ಈ ಪಕ್ಷದಿಂದಾಗಿ ವೋಟುಗಳು ಒಡೆದು ಹೋಗುವುದು ಮಾತ್ರ ನಿಶ್ಚಿತ. ಈ ಅಂಶ ಉಳಿದೆಲ್ಲ ಪಕ್ಷಗಳಿಗೆ ಸಮಸ್ಯೆ ಒಡ್ಡಬಹುದು.
ಇದನ್ನೂ ಓದಿ: ತುಮಕೂರಿನಲ್ಲಿ ಇಬ್ಬರು ದಲಿತರ ಸಾವು: ಜ್ಞಾನೇಂದ್ರ ಗೃಹ ಸಚಿವ ರಾಗಿರಲು ಅನರ್ಹ, ರಾಜೀನಾಮೆ ನೀಡಲಿ – ಸಿದ್ದರಾಮಯ್ಯ ಆಗ್ರಹ