ಕರ್ನಾಟಕ ಪೊಲೀಸರಿಗೊಂದು ಹೊಸ ಕ್ಯಾಪ್: ಇತಿಹಾಸದ ಪುಟ ಸೇರಿದೆ ಸ್ಲೋಚ್ ಕ್ಯಾಪ್

Updated on: Oct 28, 2025 | 10:29 PM

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. 1956ರ ದಶಕದಿಂದಲೂ ಪೊಲೀಸರು ಧರಿಸುತ್ತಿದ್ದ ಸ್ಲೋಚ್ ಕ್ಯಾಪ್ ಗೆ ವಿದಾಯ ಹೇಳಲಾಗಿದೆ. ಹೌದು.. ಕರ್ನಾಟಕ ಪೊಲೀಸರಿಗೆ ಇನ್ನು ಮುಂದೆ ಹೊಸ ರೂಪ ಕೊಡಲಾಗಿದ್ದು, ಇಂದಿನಿಂದ ರಾಜ್ಯ ಪೊಲೀಸ್ ಸಿಬ್ಬಂದಿಗಳು ನೀಲಿ ಬಣ್ಣದ ಪೀಕ್ ಕ್ಯಾಪ್ಧರಿಸಲಿದ್ದಾರೆ. ಈ ಮೂಲಕ ಪೊಲೀಸರ ಸ್ಲೋಚ್ ಕ್ಯಾಪ್ ಇತಿಹಾಸದ ಪುಟ ಸೇರಿದೆ.

ಬೆಂಗಳೂರು, (ಅಕ್ಟೋಬರ್ 28): ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. 1956ರ ದಶಕದಿಂದಲೂ ಪೊಲೀಸರು ಧರಿಸುತ್ತಿದ್ದ ಸ್ಲೋಚ್ ಕ್ಯಾಪ್ ಗೆ ವಿದಾಯ ಹೇಳಲಾಗಿದೆ. ಹೌದು.. ಕರ್ನಾಟಕ ಪೊಲೀಸರಿಗೆ ಇನ್ನು ಮುಂದೆ ಹೊಸ ರೂಪ ಕೊಡಲಾಗಿದ್ದು, ಇಂದಿನಿಂದ ರಾಜ್ಯ ಪೊಲೀಸ್ ಸಿಬ್ಬಂದಿಗಳು ನೀಲಿ ಬಣ್ಣದ ಪೀಕ್ ಕ್ಯಾಪ್ಧರಿಸಲಿದ್ದಾರೆ. ಈ ಮೂಲಕ ಪೊಲೀಸರ ಸ್ಲೋಚ್ ಕ್ಯಾಪ್ ಇತಿಹಾಸದ ಪುಟ ಸೇರಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಖುದ್ದು ಹಾಜರಾಗಿ ಪೊಲೀಸ್ ಸಿಬ್ಬಂದಿಗಳಿಗೆ ಹೊಸ ಕ್ಯಾಪ್ ವಿತರಣೆ ಮಾಡಿದರು. ಬಳಿಕ ಪೊಲೀಸರು ಹೊಸ ಟೋಪಿ ಧರಿಸಿ ಮಿಂಚಿದರು.

1956ರಿಂದ ಟರ್ಬನ್ ಕ್ಯಾಪ್, ಸ್ಲೋಚ್ ಕ್ಯಾಪ್ ಚಾಲ್ತಿಯಲ್ಲಿತ್ತು. ಆದ್ರೆ, 2018ರಲ್ಲೇ ಕ್ಯಾಪ್ ಬದಲಾವಣೆಗೆ ಪ್ರಕ್ರಿಯೆ ಶುರುವಾದರೂ ಅದು ನನೆಗುದಿಗೆ ಬಿದ್ದಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅವರೇ ವೈಯಕ್ತಿಕ ಆಸಕ್ತಿ ವಹಿಸಿ, ಇಲಾಖೆಯ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ನೀಲಿ ಬಣ್ಣದ ಹೊಸ ಪೀಕ್ ಕ್ಯಾಪ್ ಅನ್ನು ಸಿಎಂ ಸಿದ್ದರಾಮಯ್ಯ ಅವರೇ ಸೆಲೆಕ್ಟ್ ಮಾಡಿದ್ದು ವಿಶೇಷ. ಈ ಮೂಲಕ ಪೊಲೀಸರ ಬಹುದಿನಗಳ ಬೇಡಿಕೆ ಈಡೇರಿದೆ.