ನ.2ರಂದು ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಭೀಮ್ ಆರ್ಮಿ ಬೆಂಬಲ, ಕಂಡಿಷನ್ಸ್ ಅಪ್ಲೈ
ಡಿಸಿ ಫೌಜಿಯಾ, SP ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರ್ಎಸ್ಎಸ್ ಹಾಗೂ ಭೀಮ್ ಆರ್ಮಿ ನಡುವೆ ವಾಗ್ವಾದ ನಡೆದಿದ್ದರಿಂದ ಒಮ್ಮತ ಮೂಡದೇ ಗೊಂದಲ, ಗದ್ದಲದಲ್ಲೇ ಅಂತ್ಯವಾಗಿದೆ. ಆರ್ಎಸ್ಎಸ್ ಹಾಗೂ ಭೀಮ್ ಆರ್ಮಿ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇನ್ನು ಆರ್ಎಸ್ಎಸ್ ಭಗವಾ ಧ್ವಜ ಬಿಟ್ಟು ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನದಲ್ಲಿ ಸಂವಿಧಾನದ ಪೀಠಿಕೆ ಹಾಗೂ ಭಾರತದ ತ್ರಿವರ್ಣ ಧ್ವಜ ಹಿಡಿದ್ರೆ ಮಾತ್ರ ಬೆಂಬಲ ಕೊಡುತ್ತೇವೆ. ಇಲ್ಲ ಅಂದರೆ ಇಲ್ಲ ಎಂದು ಭೀಮ್ ಆರ್ಮಿ ನಾಯಕರು ಕಡ್ಡಿ ಮುಂರಿದಂತೆ ಹೇಳಿದ್ದಾರೆ.
ಕಲಬುರಗಿ, (ಅಕ್ಟೋಬರ್ 28): ಚಿತ್ತಾಪುರದಲ್ಲಿ RSS ಪಥಸಂಚಲನದ ವಿಚಾರವಾಗಿ ಹೈಕೋರ್ಟ್ ಸೂಚನೆ ಮೇರೆಗೆ ಇಂದು (ಅಕ್ಟೋಬರ್ 28) ಕಲಬುರಗಿಯಲ್ಲಿ 10 ಸಂಘಟನೆಗಳ ಜತೆ ಶಾಂತಿ ಸಭೆ ನಡೆದಿದ್ದು, ಈ ವೇಳೆ ಭಾರೀ ಹೈಡ್ರಾಮಾವೇ ನಡೆದಿದೆ. ಡಿಸಿ ಫೌಜಿಯಾ, SP ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರ್ಎಸ್ಎಸ್ ಹಾಗೂ ಭೀಮ್ ಆರ್ಮಿ ನಡುವೆ ವಾಗ್ವಾದ ನಡೆದಿದ್ದರಿಂದ ಒಮ್ಮತ ಮೂಡದೇ ಗೊಂದಲ, ಗದ್ದಲದಲ್ಲೇ ಅಂತ್ಯವಾಗಿದೆ. ಆರ್ಎಸ್ಎಸ್ ಹಾಗೂ ಭೀಮ್ ಆರ್ಮಿ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇನ್ನು ಆರ್ಎಸ್ಎಸ್ ಭಗವಾ ಧ್ವಜ ಬಿಟ್ಟು ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನದಲ್ಲಿ ಸಂವಿಧಾನದ ಪೀಠಿಕೆ ಹಾಗೂ ಭಾರತದ ತ್ರಿವರ್ಣ ಧ್ವಜ ಹಿಡಿದ್ರೆ ಮಾತ್ರ ಬೆಂಬಲ ಕೊಡುತ್ತೇವೆ. ಇಲ್ಲ ಅಂದರೆ ಇಲ್ಲ ಎಂದು ಭೀಮ್ ಆರ್ಮಿ ನಾಯಕರು ಕಡ್ಡಿ ಮುಂರಿದಂತೆ ಹೇಳಿದ್ದಾರೆ.

