ಬೊಲೆರೋಗೆ ಹಿಂದಿನಿಂದ ಡಿಕ್ಕಿ ಹೊಡೆದು ಅರ್ಧ ಕಿಲೋಮೀಟರ್ ತಳ್ಳಿಕೊಂಡು ಹೋಗಿ ಉರುಳಿಬಿದ್ದ ಕಂಟೇನರ್!
ಚಿಕ್ಕಬಳ್ಳಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಬೊಲೆರೋಗೆ ಕಂಟೇನರ್ ಲಾರಿ ಗುದ್ದಿ ಅದರ ಮೇಲೆ ಉರುಳಿಬಿದ್ದ ಪರಿಣಾಮ ಬೊಲೆರೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಬೊಲೆರೋ ಜೀಪ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ‘ಟಿವಿ9’ ಪ್ರತಿನಿಧಿ ಭೀಮಪ್ಪ ಪಾಟೀಲ ಸ್ಥಳದಿಂದ ನೀಡಿರುವ ಪ್ರತ್ಯೇಕ್ಷ ವರದಿ ಇಲ್ಲಿದೆ ನೋಡಿ.
ಚಿಕ್ಕಬಳ್ಳಾಪುರ, ಫೆಬ್ರವರಿ 10: ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರ ಚಿಕ್ಕಬಳ್ಳಾಪುರದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಂದೆ ಹೋಗುತ್ತಿದ್ದ ಬೊಲೇರೊ ಜೀಪ್ಗೆ ಕಂಟೇನರ್ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದು ಅರ್ಧಕಿಲೋ ಮೀಟರ್ ದೂರ ತಳ್ಳಿಕೊಂಡು ಹೋಗಿ ನಂತರ ಬೊಲೇರೊ ಮೇಲೆ ಉರುಳಿ ಬಿದ್ದಿದೆ. ಬೊಲೆರೋದಲ್ಲಿದ್ದ ಬೆಂಗಳೂರಿನ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Loading...
Unable to load recommendations.
Follow Us