AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮುಂಬೈನಲ್ಲಿ ಕಾಳಿ ಮಾತೆ ಪ್ರತಿಮೆಗೆ ಮದರ್ ಮೇರಿಯ ವೇಷ, ಅರ್ಚಕನ ಬಂಧನ

Video: ಮುಂಬೈನಲ್ಲಿ ಕಾಳಿ ಮಾತೆ ಪ್ರತಿಮೆಗೆ ಮದರ್ ಮೇರಿಯ ವೇಷ, ಅರ್ಚಕನ ಬಂಧನ

ನಯನಾ ರಾಜೀವ್
|

Updated on: Nov 26, 2025 | 7:40 AM

Share

ಮುಂಬೈನ ದೇವಸ್ಥಾನವೊಂದರಲ್ಲಿ ಕಾಳಿ ದೇವಿಯ ಪ್ರತಿಮೆಯನ್ನು ಮಾತೆ ಮೇರಿಯನ್ನು ಹೋಲುವಂತೆ ಅಲಂಕರಿಸಲಾಗಿತ್ತು, ಇದು ಭಕ್ತರನ್ನು ಬೆಚ್ಚಿಬೀಳಿಸಿತ್ತು ಮತ್ತು ಹಿಂದೂ ಸಂಘಟನೆಗಳ ಕೋಪಕ್ಕೆ ಕಾರಣವಾಗಿತ್ತು. ಈ ಘಟನೆ ಚೆಂಬೂರು ಪ್ರದೇಶದ ದೇವಸ್ಥಾನದಲ್ಲಿ ನಡೆದಿದ್ದು, ಅರ್ಚಕನನ್ನು ಬಂಧಿಸಲಾಗಿದೆ. ಕೆಲವು ಭಕ್ತರು ದರ್ಶನಕ್ಕಾಗಿ ಬಂದಾಗ, ಕಾಳಿ ದೇವಿಯ ಪ್ರತಿಮೆಯನ್ನು ಮಾತೆ ಮೇರಿಯ ರೂಪದಲ್ಲಿ ಚಿತ್ರಿಸಿರುವುದನ್ನು ಬೆಚ್ಚಿಬಿದ್ದಿದ್ದರು. ಇದರಿಂದ ಕೋಪಗೊಂಡ ಭಕ್ತರು ತಕ್ಷಣವೇ ದೇವಾಲಯದ ಆಡಳಿತ ಮಂಡಳಿಗೆ ದೂರು ನೀಡಿದರು.

ಮುಂಬೈ, ನವೆಂಬರ್ 26: ಮುಂಬೈನ ದೇವಸ್ಥಾನವೊಂದರಲ್ಲಿ ಕಾಳಿ ದೇವಿಯ ಪ್ರತಿಮೆಯನ್ನು ಮಾತೆ ಮೇರಿಯನ್ನು ಹೋಲುವಂತೆ ಅಲಂಕರಿಸಲಾಗಿತ್ತು, ಇದು ಭಕ್ತರನ್ನು ಬೆಚ್ಚಿಬೀಳಿಸಿತ್ತು ಮತ್ತು ಹಿಂದೂ ಸಂಘಟನೆಗಳ ಕೋಪಕ್ಕೆ ಕಾರಣವಾಗಿತ್ತು. ಈ ಘಟನೆ ಚೆಂಬೂರು ಪ್ರದೇಶದ ದೇವಸ್ಥಾನದಲ್ಲಿ ನಡೆದಿದ್ದು, ಅರ್ಚಕನನ್ನು ಬಂಧಿಸಲಾಗಿದೆ. ಕೆಲವು ಭಕ್ತರು ದರ್ಶನಕ್ಕಾಗಿ ಬಂದಾಗ, ಕಾಳಿ ದೇವಿಯ ಪ್ರತಿಮೆಯನ್ನು ಮಾತೆ ಮೇರಿಯ ರೂಪದಲ್ಲಿ ಚಿತ್ರಿಸಿರುವುದನ್ನು ಬೆಚ್ಚಿಬಿದ್ದಿದ್ದರು. ಇದರಿಂದ ಕೋಪಗೊಂಡ ಭಕ್ತರು ತಕ್ಷಣವೇ ದೇವಾಲಯದ ಆಡಳಿತ ಮಂಡಳಿಗೆ ದೂರು ನೀಡಿದರು.

ವಿವಾದ ಉಲ್ಬಣಗೊಳ್ಳುತ್ತಿದ್ದಂತೆ, ಹಲವಾರು ಸ್ಥಳೀಯ ಹಿಂದೂ ಸಂಘಟನೆಗಳು ಸಹ ಸ್ಥಳಕ್ಕೆ ಆಗಮಿಸಿ ಪ್ರತಿಭಟಿಸಿದವು.ಸ್ವಲ್ಪ ಸಮಯದ ನಂತರ, ಪೊಲೀಸರು ದೇವಸ್ಥಾನಕ್ಕೆ ಬಂದರು.ವಿಚಾರಣೆಯ ಸಮಯದಲ್ಲಿ, ಕಾಳಿ ದೇವಿಯು ಕನಸಿನಲ್ಲಿ ಮೇರಿಯ ರೂಪವನ್ನು ಧರಿಸಲು ಆಜ್ಞಾಪಿಸಿದ್ದಾಳೆಂದು ಅರ್ಚಕ ಹೇಳಿದ್ದಾರೆ. ಭಕ್ತರು ಇದನ್ನು ಧಾರ್ಮಿಕ ನಂಬಿಕೆಗಳ ಉಲ್ಲಂಘನೆ ಎಂದು ಕರೆದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ