VIDEO: ಕೆಎಲ್ ರಾಹುಲ್ ಔಟಾದಾಗ ಅನಿಲ್ ಕುಂಬ್ಳೆ ಅವರ ರಿಯಾಕ್ಷನ್ ಹೀಗಿತ್ತು
India vs South Africa 2nd Test: ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ತಂಡವು 489 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ ಕೇವಲ 201 ರನ್ಗಳಿಸಿ ಆಲೌಟ್ ಆಗಿದೆ. ಇದೀಗ 288 ರನ್ಗಳ ಮುನ್ನಡೆಯೊಂದಿಗೆ ಸೌತ್ ಆಫ್ರಿಕಾ ತಂಡ ದ್ವಿತೀಯ ಇನಿಂಗ್ಸ್ನಲ್ಲಿ 260 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ.
ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2ನೇ ಟೆಸ್ಟ್ ಪಂದ್ಯವು 5ನೇ ದಿನದಾಟಕ್ಕೆ ಕಾಲಿಟ್ಟಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ತಂಡ 489 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 201 ರನ್ಗಳಿಸಿತು. ಇನ್ನು 288 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ತಂಡ 260 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ.
ಅದರಂತೆ ಕೊನೆಯ ಇನಿಂಗ್ಸ್ನಲ್ಲಿ 549 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ನಾಲ್ಕನೇ ದಿನದಾಟಕ್ಕೆ 2 ವಿಕೆಟ್ ಕಳೆದುಕೊಂಡು 27 ರನ್ ಕಲೆಹಾಕಿದೆ. ಅದರಲ್ಲೂ ನಾಲ್ಕನೇ ದಿನದಾಟದ ಅಂತಿಮ ಹಂತದಲ್ಲಿ ಕೆಎಲ್ ರಾಹುಲ್ ಕ್ಲೀನ್ ಬೌಲ್ಡ್ ಆಗುವ ಮುನ್ನ ವಿಕೆಟ್ ಕೈಚೆಲ್ಲಿದ್ದರು.
ಸೈಮನ್ ಹರ್ಮರ್ ಎಸೆತವನ್ನು ಸರಿಯಾಗಿ ಗುರುತಿಸದೇ ಕೆಎಲ್ ರಾಹುಲ್ ಸ್ವೀಪ್ ಶಾಟ್ಗೆ ಯತ್ನಿಸಿದರು. ಆದರೆ ಒಳ ನುಗ್ಗಿ ಬಂದ ಚೆಂಡು ವಿಕೆಟ್ ಎಗರಿಸಿದೆ. ಇತ್ತ ಕೆಎಲ್ ರಾಹುಲ್ ಅವರ ಈ ಶಾಟ್ ನೋಡಿ ಲೆಜೆಂಡ್ ಅನಿಲ್ ಕುಂಬ್ಳೆ ಸಹ ಅಸಮಾಧಾನಗೊಂಡಿದ್ದಾರೆ.
ಈ ಪಂದ್ಯದ ವೇಳೆ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಂಡಿರುವ ಅನಿಲ್ ಕುಂಬ್ಳೆ ಅವರು ಕೆಎಲ್ ರಾಹುಲ್ ಔಟಾಗುತ್ತಿದ್ದಂತೆ ನೀಡಿದ ರಿಯಾಕ್ಷನ್ ವಿಡಿಯೋ ಇದೀಗ ವೈರಲ್ ಆಗಿದೆ.

