ಜಯತೀರ್ಥರ ಮೂಲ ಬೃಂದಾವನ ಕುರಿತು ತೀವ್ರಗೊಂಡ ವಿವಾದ, ಮಳಖೇಡ ಉತ್ತರಾದಿ ಮಠ ಭಕ್ತರ ಪ್ರತಿಭಟನೆ
ರಾಯರು ಮಠದವರು ಹೇಳುವುದೇನೆಂದರೆ, ತುಂಗಭದ್ರಾ ತೀರದ ಹಂಪಿಗೆ ಹತ್ತಿರದಲ್ಲಿರುವ ಆನೆಗುಂದಿಯಲ್ಲಿನ ನವ ಬೃಂದಾವನವೇ ಜಯತೀರ್ಥರ ಮೂಲ ಬೃಂದಾವನ.
ಕಲಬುರಗಿಯ ಸೇಡಂ ತಾಲ್ಲೂಕಿನ ಮಳಖೇಡನಲ್ಲಿರುವ ಉತ್ತರಾದಿ ಮಠ (Uttaradi Mutt) ವಿವಾದಿತ ಕ್ಷೇತ್ರವಾದೀತು ಅಂತ ಯಾರೂ ಎಣಿಸಿರಲಿಕ್ಕಿಲ್ಲ ಮಾರಾಯ್ರೇ. ಆದರೆ ಜಯತೀರ್ಥರ (Jayatheertha) ಮೂಲ ಬೃಂದಾವನ ಕುರಿತು ಮಂತ್ರಾಲಯ ರಾಯರ ಮಠದವರು ಆಕ್ಷೇಪಣೆ ಎತ್ತಿದ್ದಾರೆ. ರಾಯರು ಮಠದವರು ಹೇಳುವುದೇನೆಂದರೆ, ತುಂಗಭದ್ರಾ ತೀರದ ಹಂಪಿಗೆ ಹತ್ತಿರದಲ್ಲಿರುವ ಆನೆಗುಂದಿಯಲ್ಲಿನ (Anegundi) ನವ ಬೃಂದಾವನವೇ ಜಯತೀರ್ಥರ ಮೂಲ ಬೃಂದಾವನ. ಅವರ ವಾದದಿಂದ ಅಕ್ರೋಷಗೊಂಡಿರುವ ಉತ್ತರಾದಿ ಮಠದ ಭಕ್ತರು ಗುರುವಾರದಂದು ಕಲಬುರಗಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಏತನ್ನಧ್ಯೆ, ಬೆಂಗಳೂರು ಮಠದ ಪ್ರಮುಖರೊಬ್ಬರು ಕಾಲಾದಿ ಕ್ಷೇತ್ರದಲ್ಲಿನ ನವ ಬೃಂದಾನವದಲ್ಲೇ ಜಯತೀರ್ಥರ ವಿಶೇಷ ಆರಾಧನೆಯನ್ನು ನಡೆಸಲಾಗುವುದು. ಭಕ್ತರು, ಶಿಷ್ಯರು ಮತ್ತು ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಘೋಷಣೆ ಮಾಡಿದ್ದಾರೆ.
ಇದನ್ನೂಓದಿ: Viral Video: ಸಾಕುನಾಯಿ ಮತ್ತು ಕುದುರೆಯೊಂದಿಗೆ ಸ್ಕೇಟಿಂಗ್ ಮಾಡಿದ ಮಹಿಳೆ, ವಿಡಿಯೋ ವೈರಲ್