ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ನಡೆದಾಗ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿತ್ತು? ಸಿದ್ದರಾಮಯ್ಯ
ನಂತರ ಅಂಕಿ-ಅಂಶಗಳೊಂದಿಗೆ ಮಾತಾಡಿದ ಅವರು, 2022ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಲ್ಲಿತ್ತು ಮತ್ತು 1370 ಕೊಲೆಗಳು ನಡೆದಿದ್ದವು 2023 ರಲ್ಲಿ 1295 ಹತ್ಯೆಗಳು ನಡೆದಿವೆ ಅಂತ ಹೇಳಿದರು. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅಪರಾಧಗಳು ನಡೆಯುತ್ತವೆ, ಅದನ್ನು ತಾನು ಅಲ್ಲಗಳೆಯಲ್ಲ ಎಂದ ಮುಖ್ಯಮಂತ್ರಿಯವರು ಅಪರಾಧ ಪ್ರಮಾಣ ಕಡಿಮೆ ಮಾಡlu ತಮ್ಮ ಸರ್ಕಾರ ಪ್ರಯತ್ನಿಸುವುದಾಗಿ ಹೇಳಿದರು.
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ (Congress government) ಬಂದಾಗಿನಿಂದ ಕೊಲೆಗಳು ಜಾಸ್ತಿಯಾಗುತ್ತಿವೆ, ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಬಿಜೆಪಿ ನಾಯಕರು ಮಾಡುತ್ತಿರುವ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಳ್ಳಿಹಾಕಿದರು. ಟಿವಿ9 ಗೆ ನೀಡಿದ ವಿಶೇಷ ಸಂದರ್ಶನದಲ್ಲಿ (Tv9 special interview) ಮಾತಾಡಿದ ಅವರನ್ನು, ಹತ್ತು ವರ್ಷಗಳಲ್ಲಿ ನಡೆಯದ ಬಾಂಬ್ ಬ್ಲಾಸ್ಟ್ ಈಗ ನಡೆದಿದೆ, ನೇಹಾ ಹಿರೇಮಠ ಕೊಲೆ ಪ್ರಕರಣ ಸೇರಿದಂತೆ ಹಲವಾರು ಕೊಲೆಗಳು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿವೆ ಅಂತ ಬಿಜೆಪಿ ನಾಯಕರು ಆರೋಪಿಸುತ್ತಿರುವುದನ್ನು ನಿರೂಪಕ ಅವರ ಗಮನಕ್ಕೆ ತಂದಾಗ, ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ನಡೆದಾಗ ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿತ್ತು ಅಂತ ಪ್ರಶ್ನಿಸಿದರು. ನಂತರ ಅಂಕಿ-ಅಂಶಗಳೊಂದಿಗೆ ಮಾತಾಡಿದ ಅವರು, 2022ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಲ್ಲಿತ್ತು ಮತ್ತು 1370 ಕೊಲೆಗಳು ನಡೆದಿದ್ದವು 2023 ರಲ್ಲಿ 1295 ಹತ್ಯೆಗಳು ನಡೆದಿವೆ ಅಂತ ಹೇಳಿದರು. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅಪರಾಧಗಳು ನಡೆಯುತ್ತವೆ, ಅದನ್ನು ತಾನು ಅಲ್ಲಗಳೆಯಲ್ಲ ಎಂದ ಮುಖ್ಯಮಂತ್ರಿಯವರು ಅಪರಾಧ ಪ್ರಮಾಣ ಕಡಿಮೆ ಮಾಡಲು ತಮ್ಮ ಸರ್ಕಾರ ಪ್ರಯತ್ನಿಸುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಅಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಯಕ ಸಮಾಜಗಳ ಸಂಘಟನೆಯಲ್ಲಿ ಸಿದ್ದರಾಮಯ್ಯ ನಂತರ ಬರುವ ಹೆಸರೆಂದರೆ ಕೆಪಿ ನಂಜುಂಡಿ: ಡಿಕೆ ಶಿವಕುಮಾರ್