ಮಧುಗಿರಿ ತಾಲ್ಲೂಕು ಆಸ್ಪತ್ರೆಗೆ ಸರ್ಪ್ರೈಸ್ ಭೇಟಿ ನೀಡಿದ ಸಹಕಾರ ಸಚಿವ ಅಲ್ಲಿನ ಅವ್ಯವಸ್ಥೆ ಕಂಡು ವೈದ್ಯರಿಗೆ ತರಾಟೆ
ಕಳೆದ ಬಾರಿಯ ಸಭೆಯಲ್ಲಿ ನೀಡಿದ ಸೂಚನೆಗಳನ್ನು ಯಾಕೆ ಪಾಲಿಸಿಲ್ಲ ಎಂದು ಜೊತೆಗಿದ್ದ ಜಿಲ್ಲಾ ವೈದ್ಯಾಧಿಕಾರಿಯನ್ನು ಪ್ರಶ್ನಿಸಿದರು. ಚಿಕಿತ್ಸೆಗೆಂದು ಬಂದಿದ್ದ ಜನಗಳು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ರಾಜಣ್ಣಗೆ ವಿವರಿಸಿದರು.
ತುಮಕೂರು: ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ರಾಹುಲ್ ಗಾಂಧಿ (Rahul Gandhi) ನೀಡಿರುವ ಟಾಸ್ಕ್ ಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಲೋಕ ಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪ್ರದರ್ಶನ ಉತ್ತಮಗೊಳ್ಳಬೇಕಾದರೆ, ಸಚಿವರು ಮತ್ತು ಶಾಸಕರು ಶ್ರಮವಹಿಸಿ ಕೆಲಸ ಮಾಡಲೇಬೇಕು. ಹಾಗಾಗೇ, ಸಚಿವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸುತ್ತಾಡುತ್ತಾ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಇಂದು ತಮ್ಮ ಸ್ವಕ್ಷೇತ್ರ ಮಧುಗಿರಿಯ (Madhugiri) ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ದಂಗಾದರು. ಆಸ್ಪತ್ರೆಯ ಅವರಣದಲ್ಲೇ ಸಣ್ಣ ವ್ಯಾಪಾರಿಗಳು ಗೂಡಂಗಡಿಗಳನ್ನು ಓಪನ್ ಮಾಡಿದ್ದು ಕಂಡು ಸಚಿವರು ವ್ಯಗ್ರರಾದರು. ನೆರೆದಿದ್ದ ಜನರ ಮುಂದೆಯೇ ಅವರು ವೈದ್ಯಾಧಿಕಾರಿ ಡಾ ಮಹೇಶ್ ಸಿಂಗ್ ರನ್ನು (Dr Mahesh Singh) ತರಾಟೆಗೆ ತೆಗೆದುಕೊಂಡರು. ಕಳೆದ ಬಾರಿಯ ಸಭೆಯಲ್ಲಿ ನೀಡಿದ ಸೂಚನೆಗಳನ್ನು ಯಾಕೆ ಪಾಲಿಸಿಲ್ಲ ಎಂದು ಜೊತೆಗಿದ್ದ ಜಿಲ್ಲಾ ವೈದ್ಯಾಧಿಕಾರಿಯನ್ನು ಪ್ರಶ್ನಿಸಿದರು. ಚಿಕಿತ್ಸೆಗೆಂದು ಬಂದಿದ್ದ ಜನಗಳು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ರಾಜಣ್ಣಗೆ ವಿವರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ