ಮೈತ್ರಿಗೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಸಾಮರಸ್ಯ ಏರ್ಪಡಬೇಕು, ಬಿಜೆಪಿ-ಜೆಡಿಎಸ್ ನಡುವೆ ಆಗಿರುವ ಮೈತ್ರಿ ಅಪೂರ್ಣ: ಎಂಪಿ ರೇಣುಕಾಚಾರ್ಯ

|

Updated on: Oct 09, 2023 | 11:42 AM

ಮೈತ್ರಿ ಬಗ್ಗೆ ಮಾತಾಡುವಾಗ ಪಕ್ಷದ ವರಿಷ್ಠರು ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯದ ಯಾವ ನಾಯಕನನ್ನೂ ಗಣನೆಗೆ ತೆಗೆದಿಕೊಂಡಿಲ್ಲ. ಹಿಂದೆ, ಸಮ್ಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದೇ ಹೋದಾಗ ಜೆಡಿಎಸ್ ಪಕ್ಷದ ನಾಯಕರನ್ನು ವಚನ ಭ್ರಷ್ಟರು ಅಂತ ಕರೆದು ಈಗ ಮೈತ್ರಿಗೆ ಮುಂದಾದರೆ ಹೇಗೆ ಎಂದು ರೇಣುಕಾಚಾರ್ಯ ಹೇಳಿದರು.

ಚಿತ್ರದುರ್ಗ: ರಾಜಕೀಯದಲ್ಲಿ ಎರಡು ಪಕ್ಷಗಳ ನಡುವಿನ ಮೈತ್ರಿಗೆ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ (MP Renukacharya) ಸೂಕ್ತವಾದ ವ್ಯಾಖ್ಯಾನ ನೀಡಿದರು ಅನಿಸುತ್ತೆ. ಚಿತ್ರದುರ್ಗದಲ್ಲಿ ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮೈತ್ರಿಯ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದೆ, ಆದರೆ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಹೊಂದಾಣಿಕೆ ಬಹಳ ಮುಖ್ಯ ಅನ್ನೋದನ್ನು ಅವರು ಮರೆತಿದ್ದಾರೆ, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ (party workers) ನಡುವೆ ಸಂಘರ್ಷವಿದೆ ಸಾಮರಸ್ಯ ಇಲ್ಲ ಎಂದು ಹೇಳಿದರು. ಮೈತ್ರಿ ಬಗ್ಗೆ ಮಾತಾಡುವಾಗ ಪಕ್ಷದ ವರಿಷ್ಠರು ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಸೇರಿದಂತೆ ರಾಜ್ಯದ ಯಾವ ನಾಯಕನನ್ನೂ ಗಣನೆಗೆ ತೆಗೆದಿಕೊಂಡಿಲ್ಲ. ಹಿಂದೆ, ಸಮ್ಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದೇ ಹೋದಾಗ ಜೆಡಿಎಸ್ ಪಕ್ಷದ ನಾಯಕರನ್ನು ವಚನ ಭ್ರಷ್ಟರು ಅಂತ ಕರೆದು ಈಗ ಮೈತ್ರಿಗೆ ಮುಂದಾದರೆ ಹೇಗೆ ಎಂದು ರೇಣುಕಾಚಾರ್ಯ ಹೇಳಿದರು. ತಾನು ಮೈತ್ರಿಗೆ ವಿರೋಧಿ ಅಲ್ಲ ಆದರೆ ಅದು ಪರಿಪೂರ್ಣವಾಗಿರಬೇಕು, ಈಗ ಆಗಿರುವ ಮೈತ್ರಿ ಅಪೂರ್ಣ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ