ನಾಳಿನ ಕೋರ್ ಕಮಿಟಿ ಸಭೆಯಲ್ಲಿ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ: ನಿಖಿಲ್ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸುವುದು ಹೆಚ್ಚುಕಡಿಮೆ ಖಚಿತವಾಗುತ್ತಿರುವಂತೆಯೇ ಯಾವುದೋ ಕಾರಣಕ್ಕೆ ಅದನ್ನು ಘೋಷಣೆ ಮಾಡುವ ಗೋಜಿಗೆ ಜೆಡಿಎಸ್ ನಾಯಕರು ಮತ್ತು ಖುದ್ದು ಕುಮಾರಸ್ವಾಮಿ ಹೋಗುತ್ತಿಲ್ಲ. ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟಿಕೊಟ್ಟಿರುವುದನ್ನು ಬಿಜೆಪಿ ನಾಯಕರು ಈಗಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಜೆಡಿಎಸ್ ನಾಯಕರು ಗೊಂದಲದಲ್ಲಿದ್ದಾರೆ.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮಂಡ್ಯ ಲೋಕಸಭಾ ಕ್ಷೇತ್ರದಿಂದ (Mandya Lok Sabha constituency) ಯಾರು ಕಣಕ್ಕಿಳಿಯಲಿದ್ದಾರೆ ಅಂತ ಯಾವುದನ್ನೂ ಸ್ಪಷ್ಟವಾಗಿ ಹೇಳಲಿಲ್ಲ. ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸ್ಪರ್ಧಿಸುವುದು ಹೆಚ್ಚುಕಡಿಮೆ ಖಚಿತವಾಗುತ್ತಿರುವಂತೆಯೇ ಯಾವುದೋ ಕಾರಣಕ್ಕೆ ಅದನ್ನು ಘೋಷಣೆ ಮಾಡುವ ಗೋಜಿಗೆ ಜೆಡಿಎಸ್ ನಾಯಕರು ಮತ್ತು ಖುದ್ದು ಕುಮಾರಸ್ವಾಮಿ ಹೋಗುತ್ತಿಲ್ಲ. ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟಿಕೊಟ್ಟಿರುವುದನ್ನು ಬಿಜೆಪಿ ನಾಯಕರು ಈಗಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಜೆಡಿಎಸ್ ನಾಯಕರು ಗೊಂದಲದಲ್ಲಿದ್ದಾರೆ. ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕರಾಗಿದ್ದು ಅವರನ್ನು ಬಿಟ್ಟು ಕೊಡಲು ಅಲ್ಲಿಯ ಜನ ತಯಾರಿಲ್ಲ. ನಿಖಿಲ್ ಹೇಳುವ ಹಾಗೆ ಕುಮಾರಸ್ವಾಮಿಯವರು ಹಳೇ ಮೈಸೂರು ಪ್ರಾಂತ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಕೇವಲ ಜೆಡಿಎಸ್ ಕಾರ್ಯಕರ್ತರು ಮಾತ್ರವಲ್ಲ, ಬಿಜೆಪಿ ಕಾರ್ಯಕರ್ತರಲ್ಲೂ ಹೊಸ ಹುಮ್ಮಸ್ಸು ಹುಟ್ಟಲಿದೆ, ತಮ್ಮನ್ನು ಬಿಟ್ಟುಹೋಗುವ ಆತಂಕದಲ್ಲ್ಲಿರುವ ಚನ್ನಪಟ್ಟಣ ಜನ ಆಕ್ರೋಶಭರಿತರಾಗಿದ್ದಾರೆ, ನಾಳೆ ಕುಮಾರಸ್ವಾಮಿಯವರ ನಿವಾಸದಲ್ಲಿ ಕೋರ್ ಕಮಿಟಿ ಸಭೆ ಕರೆಯಲಾಗಿದೆ, ಸಭೆಯಲ್ಲಿ ಕುಮಾರಸ್ವಾಮಿಯವರ ಸ್ಪರ್ಧೆ ಬಗ್ಗೆ ಒಂದು ನಿರ್ಣಯ ತೆಗೆದುಕೊಳ್ಳಲಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಹೆಚ್ ಡಿ ಕುಮಾರಸ್ವಾಮಿ ಕುಕ್ಕರ್ ಬಾಂಬ್! ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ 4 ಲಕ್ಷಕ್ಕೂ ಹೆಚ್ಚು ಕುಕ್ಕರ್ ಹಂಚಿಕೆ?