Proceedings in Council: ಕೋಟ ಶ್ರೀನಿವಾಸ ಪೂಜಾರಿ ಶಾಲಾಮಕ್ಕಳಂತೆ ಹಟ ಮಾಡಿದಾಗ ಸಭಾಪತಿ ಪ್ರಾಣೇಶ್ ಉಗ್ರರೂಪ ತಳೆದ ಹೆಡ್ ಮಾಸ್ಟರ್​ನಂತಾದರು!

|

Updated on: Jul 14, 2023 | 5:06 PM

ವಿರೋಧ ಪಕ್ಷದ ಸದಸ್ಯರ ವಾದ ಅರ್ಥಹೀನವಾದ್ದು ಅಂತ ಮುಖ್ಯಮಂತ್ರಿ ಹೇಳಿದಾಗ ಪೂಜಾರಿ ಪುನಃ ಎದ್ದು ನಿಂತು ಮಾತಾಡಲಾರಂಭಿಸುತ್ತಾರೆ.

ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಇಂದು ಗದ್ದಲವೋ ಗದ್ದಲ. ಸದಸ್ಯರು ಅದರಲ್ಲೂ ವಿಶೇಷವಾಗಿ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಚಿಕ್ಕಮಕ್ಕಳು ರಚ್ಚೆಹಿಡಿಯುವ ಹಾಗೆ ಆಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಉತ್ತರ ನೀಡುವಾಗ ಪೂಜಾರಿ ಮಾತಾಡಲು ಅವಕಾಶ ನೀಡದೆ ಅಡ್ಡಿಪಡಿಸತೊಡಗಿದರು. ಮೊದಲು ಪೀಠದಲ್ಲಿದ್ದ ಶಶೀಲ್ ಜಿ ನಮೋಶಿ (Shashil Namoshi) ಹಲವಾರು ಬಾರಿ ಕೂತುಕೊಳ್ಳುವಂತೆ ಹೇಳಿದರೂ ಕೇಳದ ಪೂಜಾರಿ ಮಾತಾಡುತ್ತಲೇ ಇದ್ದರು. ಕೊನೆಗೆ ನಮೋಶಿಯವರೇ ಎದ್ದು ಉಪ ಸಭಾಪತಿ ಎಂಕೆ ಪ್ರಾಣೇಶ್ (MK Pranesh) ಅವರಿಗೆ ಪೀಠ ಬಿಟ್ಟುಕೊಟ್ಟರು. ಪ್ರಾಣೇಶ್ ಬಂದು ಕೂತ ಬಳಿಕ ಮುಖ್ಯಮಂತ್ರಿ ಉತ್ತರ ನೀಡಲು ಎದ್ದು ನಿಂತ ಸಿದ್ದರಾಮಯ್ಯ ಗೃಹ ಜ್ಯೋತಿ ಯೋಜನೆ ಬಗ್ಗೆ ವಿರೋಧ ಪಕ್ಷದ ಸದಸ್ಯರ ವಾದ ಅರ್ಥಹೀನವಾದ್ದು ಅಂತ ಹೇಳಿದಾಗ ಪೂಜಾರಿ ಪುನಃ ಎದ್ದು ನಿಂತು ಮಾತಾಡಲಾರಂಭಿಸುತ್ತಾರೆ. ಅವರೊಂದಿಗೆ ನಾರಾಯಣಸ್ವಾಮಿ ಧ್ವನಿಗೂಡಿಸುತ್ತಾರೆ. ಅಡಳಿತ ಪಕ್ಷದ ನಾಯಕರು ಸಹ ಎದ್ದು ನಿಂತು ಕೂಗಾಡಲಾರಂಭಿಸುತ್ತಾರೆ. ಅಗ ತಾಳ್ಮೆ ಕಳೆದುಕೊಳ್ಳುವ ಸಭಾಪತಿಗಳು ಪೀಠದಿಂದ ಎದ್ದುನಿಂತು ಪೂಜಾರಿಯವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ನಾನು ಹೇಳೋದು ನಿಮ್ಮ ತಲೆಗೆ ಹೋಗ್ತಾ ಇಲ್ಲವಾ, ಮುಖ್ಯಮಂತ್ರಿಯವರು ಮಾತಾಡುವಾಗ ಅಡ್ಡಿಪಡಿಸ ಕೂಡದು ಅಂತ ಹೇಳಿದರೂ ಮೊಂಡುತನ ಮುಂದುವರಿಸುತ್ತೀರಲ್ಲ ಅಂತ ಹೇಳಿ ಆಡಳಿತ ಪಕ್ಷದ ಸದಸ್ಯರನ್ನು ಸಹ ಗದರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ