‘ಜೇಮ್ಸ್​’ ಬಿಡುಗಡೆಗೆ ಕೌಂಟ್​ಡೌನ್​: ವಿದೇಶದಲ್ಲೂ ಕಾರ್​ ರ‍್ಯಾಲಿ ಮಾಡಿ, ಪಟಾಕಿ ಹೊಡೆಯಲಿರುವ ಫ್ಯಾನ್ಸ್​

| Updated By: shivaprasad.hs

Updated on: Mar 15, 2022 | 7:16 AM

ಮಾ.17ರಂದು ಭಾರತ ಮಾತ್ರವಲ್ಲದೇ ಇತರೆ ಅನೇಕ ದೇಶಗಳಲ್ಲೂ ‘ಜೇಮ್ಸ್​’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ವಿತರಕ ಕಿರಣ್​ ನೀಡಿದ ಮಾಹಿತಿ ಇಲ್ಲಿದೆ..

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್ (Puneeth Rajkumar)​ ನಟನೆಯ ‘ಜೇಮ್ಸ್​’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಚಿತ್ರವನ್ನು ಅಭಿಮಾನಿಗಳು (Puneeth Rajkumar Fans) ಕಣ್ತುಂಬಿಕೊಳ್ಳಲು ಎರಡೇ ದಿನ ಬಾಕಿ ಇದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ‘ಜೇಮ್ಸ್​’ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಕೆನಡಾದಲ್ಲಿ ನೆಲೆಸಿರುವ ಕನ್ನಡಿಗ ಕಿರಣ್​ ಅವರು ವಿದೇಶದಲ್ಲಿ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಪ್ರಪಂಚದ ವಿವಿಧ ನಗರಗಳಲ್ಲಿ ‘ಜೇಮ್ಸ್​’ ಸಿನಿಮಾವನ್ನು (James Movie) ಯಾವ ರೀತಿ ಬರಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ‘ಮಾ.17ರಂದು ಈ ಸಿನಿಮಾವನ್ನು ವಿದೇಶದಲ್ಲೂ ರಿಲೀಸ್​ ಮಾಡಲಾಗುತ್ತಿದೆ. ನಾವು ಹೊರದೇಶದಲ್ಲಿ ಇದ್ದರೂ ಕೂಡ ಅಪ್ಪು ಸರ್​ ಸಿನಿಮಾವನ್ನು ಸೆಲೆಬ್ರೇಟ್​ ಮಾಡುತ್ತಿದ್ದೇವೆ. ಅವರಿಗೆ ನಮನ ಸಲ್ಲಿಸಲು ಕಾರ್​ ರ‍್ಯಾಲಿ ಮಾಡುತ್ತಿದ್ದೇವೆ. ಪಟಾಕಿ ಹೊಡೆಯುತ್ತಿದ್ದೇವೆ. ಪ್ರಪಂಚದಾದ್ಯಂತ ಇರುವ ಎಲ್ಲ ಅಪ್ಪು ಸರ್​ ಅಭಿಮಾನಿಗಳಿಗೆ ಇದು ಒಂದು ಎಮೋಷನ್​. ಅನಿವಾಸಿ ಭಾರತೀಯರೆಲ್ಲರೂ ಈ ಚಿತ್ರತಂಡಕ್ಕೆ ಮತ್ತು ಶಿವರಾಜ್​ಕುಮಾರ್​ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ’ ಎಂದಿದ್ದಾರೆ ಕಿರಣ್​.

ಪುನೀತ್​ ರಾಜ್​ಕುಮಾರ್​ ಅವರು ಸೈನಿಕನ ಸಮವಸ್ತ್ರ ಧರಿಸಿ, ಗನ್​ ಹಿಡಿದು ನಿಂತಿರುವ ಫಸ್ಟ್​ ಲುಕ್​ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಸಿನಿಮಾದ ಕಥೆ ಏನು ಎಂಬುದನ್ನು ತಿಳಿದುಕೊಳ್ಳಲು ಕಾತರ ಹೆಚ್ಚಿದೆ.

ಇದನ್ನೂ ಓದಿ:

‘ಸ್ವಲ್ಪ ನೋವು, ಬೇಜಾರು ಆಯ್ತು’: ‘ಜೇಮ್ಸ್​’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಬಳಿಕ ಶಿವಣ್ಣ ಭಾವುಕ ಮಾತು

‘ಜೇಮ್ಸ್​’ ಮಾತ್ರವಲ್ಲ; ಮಾ.17ಕ್ಕೆ ಸಿಗಲಿದೆ ಇನ್ನೊಂದು ಸರ್ಪ್ರೈಸ್​: ಇಲ್ಲಿದೆ ಗುಡ್​ ನ್ಯೂಸ್​