ನೆಲಮಂಗಲದಲ್ಲಿ ಖ್ಯಾತ ಬ್ರ್ಯಾಂಡೊಂದರ ನಕಲಿ ಚಹಾಪುಡಿ ತಯಾರಿಸುತ್ತಿದ್ದ ಮನೆ ಮೇಲೆ ಪೊಲೀಸ್ ದಾಳಿ, ಮಾಲೀಕ ಪರಾರಿ

|

Updated on: Jan 11, 2024 | 12:26 PM

ಖೂಳರು ನಕಲಿ ಚಹಾ ಪುಡಿಯೊಂದಿಗೆ ಫೇಕ್ ರಿನ್ ಡಿಟರ್ಜೆಂಟ್ ಕೇಕ್ ಮತ್ತು ವ್ಹೀಲ್ ವಾಶಿಂಗ್ ಪೌಡರ್ ಸಹ ತಯಾರಿಸುತ್ತಿದ್ದುದನ್ನು ದೃಶ್ಯಗಳಲ್ಲಿ ನೋಡಬಹುದು. ನಕಲಿ ಪದಾರ್ಥಗಳನ್ನು ಅಸಲಿ ಕಾಣುವಂತೆ ತಯಾರಿಸುತ್ತಿದ್ದ ಮಾಧುಸಿಂಗ್ ಪೊಲೀಸ್ ದಾಳಿ ನಡೆಯುವ ಸುಳಿವು ಸಿಗುತ್ತಿದ್ದಂತೆಯೇ ಪರಾರಿಯಾಗಿದ್ದು ಅವನ ಸೆರೆಹಿಡಿಯಲು ಜಾಲ ಬೀಸಲಾಗಿದೆ.

ನೆಲಮಂಗಲ: ಮನೆಯಲ್ಲಿ ನೀವು ಚಹಾಗಾಗಿ ಬ್ರೂಕ್ ಬಾಂಡ್ (Brooke Bond) ಸಂಸ್ಥೆಯ ಪ್ರಖ್ಯಾತ ಬ್ರ್ಯಾಂಡ್ 3 ರೋಸಸ್ ಟೀ ಪೌಡರ್ (3 Roses tea powder) ಬಳಸುತ್ತಿದ್ದರೆ ಅಂಗಡಿಯಲ್ಲಿ ಅದನ್ನು ಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ. ನೀವು ಖರೀದಿಸುವ ನಿಮ್ಮ ನೆಚ್ಚಿನ ಟೀ ಪೌಡರ್ ನಕಲಿ (counterfeit) ಆಗಿರುವ ಸಾಧ್ಯತೆ ಇದೆ. ಬೆಂಗಳೂರು ಉತ್ತರ ತಾಲ್ಲೂಕಿನ ಗಂಗೊಂಡಹಳ್ಳಿಯಲ್ಲಿ ನಕಲಿ 3 ರೋಸಸ್ ಚಹಾ ಪುಡಿ ತಯಾರಿಸುತ್ತಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿರುವ ಮಾದನಾಯಕನಹಳ್ಳಿ ಪೊಲೀಸರು 200 ಕೇಜಿ ನಕಲಿ ಟೀ ಪೌಡರ್ ಮತ್ತು ಪ್ಯಾಕಿಂಗ್ ಗೆ ಬಳಸುತ್ತಿದ್ದ ಮಶೀನನ್ನು ವಶಪಡಿಸಿಕೊಂಡಿದ್ದಾರೆ. ಖೂಳರು ನಕಲಿ ಚಹಾ ಪುಡಿಯೊಂದಿಗೆ ಫೇಕ್ ರಿನ್ ಡಿಟರ್ಜೆಂಟ್ ಕೇಕ್ ಮತ್ತು ವ್ಹೀಲ್ ವಾಶಿಂಗ್ ಪೌಡರ್ ಸಹ ತಯಾರಿಸುತ್ತಿದ್ದುದನ್ನು ದೃಶ್ಯಗಳಲ್ಲಿ ನೋಡಬಹುದು. ನಕಲಿ ಪದಾರ್ಥಗಳನ್ನು ಅಸಲಿ ಕಾಣುವಂತೆ ತಯಾರಿಸುತ್ತಿದ್ದ ಮಾಧುಸಿಂಗ್ ಪೊಲೀಸ್ ದಾಳಿ ನಡೆಯುವ ಸುಳಿವು ಸಿಗುತ್ತಿದ್ದಂತೆಯೇ ಪರಾರಿಯಾಗಿದ್ದು ಅವನ ಸೆರೆಹಿಡಿಯಲು ಜಾಲ ಬೀಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ