ಸೊಂಟ ಬಳುಕಿಸಿ ಎಂಜಾಯ್ ಮಾಡಿದ ಮಹಿಳಾ ಮಣಿಯರು! ವಿಡಿಯೋ ನೋಡಿ

ಸೊಂಟ ಬಳುಕಿಸಿ ಎಂಜಾಯ್ ಮಾಡಿದ ಮಹಿಳಾ ಮಣಿಯರು! ವಿಡಿಯೋ ನೋಡಿ

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on: Jan 11, 2024 | 12:39 PM

ಕಾರ್ಯಕ್ರಮದಲ್ಲಿ ತಮ್ಮ ಇಳಿ ವಯಸ್ಸನ್ನೂ ಲೆಕ್ಕಿಸದೆ‌ ವಿವಾಹಿತ ಮಹಿಳೆಯರು ಡ್ಯಾನ್ಸ್ ಮಾಡಿದ್ರು... ಜೊಕೆ ನಾನು ಬಳ್ಳಿಯ ಮಿಂಚು ಎಂಬ ರೆಟ್ರೋ ಸಾಂಗಿಗೆ ಅಜ್ಜಿ, ಸೊಸೆ, ಮೊಮ್ಮಗಳು ಕುಣಿದು ಕುಪ್ಪಳಿಸಿದ್ದು ಎಲ್ಲರ ಗಮನ ಸೆಳೆದ್ರೆ.. ಮಹಿಳೆಯರು ಕನ್ನಡ, ತೆಲುಗು, ಹಿಂದಿ ಸಾಂಗ್ಸ್ ಗೆ ಸೊಂಟ ಕುಲುಕಿಸಿ ನೋಡುಗರ ಹುಮ್ಮಸ್ಸು ಹೆಚ್ಚು ಮಾಡಿದರು..

ಮದುವೆಯಾದ ಮಹಿಳೆಯರು ಮನೆಯಲ್ಲಿ ಮೂಲೆಗುಂಪಾಗುವುದರ ಬದಲು ಒಂದು ದಿನ ಮನೆಯಿಂದ ಆಚೆ ಬಂದು ವಯಸ್ಸುಗಿಯಸ್ಸು ಏನನ್ನೂ ಲೆಕ್ಕಿಸದೆ ಕುಣಿದು ಕುಪ್ಪಳಿಸಿದ್ದು ಯುವತಿಯರೆ ನಾಚುವಂತಾಗಿತ್ತು. ಅದೆಲ್ಲಿ ಅಂತಿರಾ ಈ ವರದಿ ನೋಡಿ.. ಜೋಕೆ ನಾನು ಬಳ್ಳಿಯ ಮಿಂಚು ಎನ್ನುತ್ತಿರುವ ಈ ಅಂಟಿಗೆ ಸ್ವೀಟ್ 60… ಈ ರೇಟ್ರೋ ಹಾಡಿಗೆ ವಯಸ್ಸು ಮೀರಿ ಸೊಂಟ ಕುಲುಕಿಸುತ್ತಿದ್ದಾರೆ.. ಜೊತೆಗೆ ಸೊಸೆ ಮತ್ತು ಮೊಮ್ಮಗಳ ಜೊತೆ ಹೆಜ್ಜೆಗೆ ಹೆಜ್ಜೆ ಹಾಕಿದ್ದಾರೆ… ಹೀಗೆ ಡಿಜೆ ಸಾಂಗ್ ಗೆ ಮಹಿಳಾ ಮಣಿಯರು ಕುಣಿದು ಕುಪ್ಪಳಿಸಿದ್ದು ಚಿಕ್ಕಬಳ್ಳಾಪುರ ನಗರದಲ್ಲಿ… ವಾಸವಿ ಮಹಿಳಾ ಮಂಡಳಿ ಮತ್ತು ವೈಕುಂಠ ಭಜನಾ ಮಂಡಳಿಯ ಮಹಿಳೆಯರು ಸಂಘ ಕಟ್ಟಿಕೊಂಡು ನಿನ್ನೆ ಬುಧವಾರ ಮನರಂಜನಾ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರು ಉತ್ಸಾಹದಿಂದ ನೃತ್ಯ ಮಾಡಿ ಸಂತಸಪಟ್ಟರು.

ಕಾರ್ಯಕ್ರಮದಲ್ಲಿ ತಮ್ಮ ಇಳಿ ವಯಸ್ಸನ್ನೂ ಲೆಕ್ಕಿಸದೆ‌ ವಿವಾಹಿತ ಮಹಿಳೆಯರು ಡ್ಯಾನ್ಸ್ ಮಾಡಿದ್ರು… ಜೊಕೆ ನಾನು ಬಳ್ಳಿಯ ಮಿಂಚು ಎಂಬ ರೆಟ್ರೋ ಸಾಂಗಿಗೆ ಅಜ್ಜಿ, ಸೊಸೆ, ಮೊಮ್ಮಗಳು ಕುಣಿದು ಕುಪ್ಪಳಿಸಿದ್ದು ಎಲ್ಲರ ಗಮನ ಸೆಳೆದ್ರೆ.. ಮಹಿಳೆಯರು ಕನ್ನಡ, ತೆಲುಗು, ಹಿಂದಿ ಸಾಂಗ್ಸ್ ಗೆ ಸೊಂಟ ಕುಲುಕಿಸಿ ನೋಡುಗರ ಹುಮ್ಮಸ್ಸು ಹೆಚ್ಚು ಮಾಡಿದರು.. ನೋಡ ನೋಡುತ್ತಿದ್ದಂತೆ ಮಹಿಳೆಯರು ಶಿಲ್ಲೆ ಕೇಕೆ ಹೊಡೆದು ಕುಂತಲ್ಲೇ ಡ್ಯಾನ್ಸ್ ಮಾಡುತ್ತಾ ಚಿಯರ್​ ಅಪ್ ಮಾಡಿದ್ರು.. ನಂತರ ಡಿಜೆ ಸಾಂಗ್ಸ್ ಗೆ ಕಿರಿಯರಿಂದ ಹಿರಿಯರ ವರೆಗೂ ಮನ ಮರೆತು ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು.

ಒಟ್ಟಾರೆ ವರ್ಷಪೂರ್ತಿ ಮಹಿಳೆಯರು ಮನೆಗೆ ಸೀಮಿತರಾಗಬಾರ್ದು ಎಂದು ಗಂಡಸರಿಗಿಂತ ನಾವೇನೂ ಕಮ್ಮಿಯಿಲ್ಲ ಎಂದು ಒಂದು ದಿನ ಹೊರಗಡೆ ಬಂದು ನೂರಾರು ಮಹಿಳೆಯರೆಲ್ಲಾ ಸೇರಿ ಸೊಂಟ ಕುಲುಕಿ ಎಂಜಾಯ್ ಮಾಡಿದ್ದು ನಯನ ಮನೋಹರವಾಗಿತ್ತು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ