AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಆಧಾರ್​ ಕಾರ್ಡ್​ ಇಟ್ಟುಕೊಂಡು ಸಲ್ಮಾನ್​ ಖಾನ್​ ಫಾರ್ಮ್​ಹೌಸ್​ಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ

ಇಬ್ಬರು ಯುವಕರ ವರ್ತನೆ ಕಂಡು ಸಲ್ಮಾನ್​ ಖಾನ್​ ಅವರ ಭದ್ರತಾ ಸಿಬ್ಬಂದಿಗೆ ಅನುಮಾನ ಮೂಡಿದೆ. ಹಾಗಾಗಿ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಅಕ್ರಮವಾಗಿ ಫಾರ್ಮ್​ಹೌಸ್​ ಪ್ರವೇಶಿಸಲು ಯತ್ನಿಸಿದ ಇಬ್ಬರನ್ನು ಪನ್ವೇಲ್​ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ಆಗಿದೆ.

ನಕಲಿ ಆಧಾರ್​ ಕಾರ್ಡ್​ ಇಟ್ಟುಕೊಂಡು ಸಲ್ಮಾನ್​ ಖಾನ್​ ಫಾರ್ಮ್​ಹೌಸ್​ಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ
ಸಲ್ಮಾನ್​ ಖಾನ್
ಮದನ್​ ಕುಮಾರ್​
|

Updated on: Jan 08, 2024 | 2:55 PM

Share

ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ಜೀವ ಬೆದರಿಕೆ ಇರುವುದು ಗೊತ್ತೇ ಇದೆ. ಈಗಾಗಲೇ ಅವರ ಮೇಲೆ ಹಲವು ಬಾರಿ ಹತ್ಯೆ ಪ್ರಯತ್ನ ನಡೆದ ಬಗ್ಗೆ ವರದಿ ಆಗಿದೆ. ಹಾಗಾಗಿ ಅವರು ಭದ್ರತೆಯ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಇಬ್ಬರು ಯುವಕರು ಅನುಮಾನಾಸ್ಪದವಾಗಿ ಸಲ್ಮಾನ್​ ಖಾನ್​ ಅವರ ಫಾರ್ಮ್​ಹೌಸ್​ಗೆ ನುಗ್ಗಲು ಪ್ರಯತ್ನಿಸಿರುವ ಘಟನೆ ಈಗ ಬೆಳಕಿಗೆ ಬಂದಿದೆ. ಪನ್ವೇಲ್​ನಲ್ಲಿ ಸಲ್ಮಾನ್​ ಖಾನ್​ ಅವರು ಫಾರ್ಮ್​ಹೌಸ್​ (Salman Khan Farm House) ಹೊಂದಿದ್ದಾರೆ. ಅದರ ಕಾಂಪೌಂಡ್​ ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಭಿಮಾನಿಗಳು ಎಂದು ಹೇಳಿಕೊಂಡು ಬಂದ ಈ ಇಬ್ಬರನ್ನು ಅಜೇಶ್​ ಕುಮಾರ್​ ಓಂಪ್ರಕಾಶ್​ ಗಿಲ್​ ಹಾಗೂ ಗುರುಸೇವಕ್​ ಸಿಂಗ್​ ಎಂದು ಗುರುತಿಸಿಲಾಗಿದೆ. ಸಿಕ್ಕಿ ಬಿದ್ದಾಗ ಅವರಿಬ್ಬರ ಆಧಾರ್​ ಕಾರ್ಡ್​ ಪರಿಶೀಲನೆ ಮಾಡಲಾಯಿತು. ಅವು ನಕಲಿ ಆಧಾರ್​ ಕಾರ್ಡ್​ ಎಂಬುದು ತಿಳಿದುಬಂದಿದೆ. ಮಹೇಶ್​ ಕುಮಾರ್​ ಮತ್ತು ವಿನೋದ್​ ಕುಮಾರ್​ ಎಂಬ ಹೆಸರಿನಲ್ಲಿ ಅವರು ನಕಲಿ ಆಧಾರ್​ ಕಾರ್ಡ್​ ಸಿದ್ಧಪಡಿಸಿಕೊಂಡು ಮೋಸ ಮಾಡಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ನಟ ಸಲ್ಮಾನ್ ಖಾನ್ ಅವರು ಇನ್ನೂ ಮದುವೆ ಆಗದಿರಲು ಕಾರಣವೇನು?

ಈ ಇಬ್ಬರ ವರ್ತನೆ ಕಂಡು ಸಲ್ಮಾನ್​ ಖಾನ್​ ಅವರ ಭದ್ರತಾ ಸಿಬ್ಬಂದಿಗೆ ಅನುಮಾನ ಮೂಡಿದೆ. ಹಾಗಾಗಿ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಅಕ್ರಮವಾಗಿ ಫಾರ್ಮ್​ಹೌಸ್​ ಪ್ರವೇಶಿಸಲು ಯತ್ನಿಸಿದ ಇಬ್ಬರನ್ನು ಪನ್ವೇಲ್​ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ಆಗಿದೆ. ಸದ್ಯಕ್ಕೆ ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಫಾರ್ಮ್​ಹೌಸ್​ ನುಸುಳಲು ಪ್ರಯತ್ನಿಸಿದ್ದರ ಹಿಂದಿನ ಉದ್ದೇಶ ಏನೆಂಬುದು ಸ್ಪಷ್ಟವಾಗಬೇಕಿದೆ.

ಸಲ್ಮಾನ್​ ಖಾನ್ ಅವರನ್ನು ಕೊಲ್ಲುವುದಾಗಿ ಈಗಾಗಲೇ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​, ಗೋಲ್ಡಿ ಬ್ರಾರ್​ ಮುಂತಾದವರು ಬೆದರಿಕೆ ಹಾಕಿದ್ದಾರೆ. ಸಲ್ಮಾನ್​ ಖಾನ್​ ಅವರ ಆಪ್ತರ ಮೇಲೂ ಹಲ್ಲೆ ಪ್ರಯತ್ನಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಸಲ್ಮಾನ್​ ಖಾನ್​ ಅವರು ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಬುಲೆಟ್​ಪ್ರೂಫ್​ ಕಾರುಗಳನ್ನು ಅವರು ಖರೀದಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ