AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್​ ಖಾನ್​ಗೆ ‘ನನ್ನ ಡಾರ್ಲಿಂಗ್​’ ಎಂದು ಕರೆದ ಪ್ರೀತಿ ಜಿಂಟಾ; ಫೋಟೋ ವೈರಲ್​

‘ನೀವು ಯಾವಾಗಲೂ ಶೈನ್​ ಆಗುವುದನ್ನು, ನಗುತ್ತಿರುವುದನ್ನು ನೋಡಲು ನಾನು ಬಯಸುತ್ತೇನೆ. ಜನ್ಮದಿನದ ಸಲುವಾಗಿ ಅಪ್ಪುಗೆ ನೀಡಲು ನಾನು ಈಗ ನಿಮ್ಮ ಜೊತೆ ಇಲ್ಲ. ಆ ಕೆಲಸವನ್ನು ಈ ಫೋಟೋ ಮಾಡಲಿದೆ. ಹ್ಯಾಪಿ ಬರ್ತ್​ಡೇ. ಎಂದೆಂದಿಗೂ ನನ್ನ ಸ್ನೇಹಿತ’ ಎಂದು ಪ್ರೀತಿ ಜಿಂಟಾ ಅವರು ಪೋಸ್ಟ್​ ಮಾಡಿದ್ದಾರೆ.

ಸಲ್ಮಾನ್​ ಖಾನ್​ಗೆ ‘ನನ್ನ ಡಾರ್ಲಿಂಗ್​’ ಎಂದು ಕರೆದ ಪ್ರೀತಿ ಜಿಂಟಾ; ಫೋಟೋ ವೈರಲ್​
ಪ್ರೀತಿ ಜಿಂಟಾ, ಸಲ್ಮಾನ್​ ಖಾನ್​
ಮದನ್​ ಕುಮಾರ್​
|

Updated on: Dec 28, 2023 | 7:17 PM

Share

ಬಾಲಿವುಡ್​ನ ಖ್ಯಾತ ನಟ ಸಲ್ಮಾನ್​ ಖಾನ್ (Salman Khan)​ ಅವರು ಡಿಸೆಂಬರ್​ 27ರಂದು ಜನ್ಮದಿನ ಆಚರಿಸಿಕೊಂಡರು. 58ನೇ ವರ್ಷಕ್ಕೆ ಕಾಲಿಟ್ಟ ಅವರಿಗೆ ಅನೇಕರು ಶುಭಾಶಯ ತಿಳಿಸಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಕೂಡ ವಿಶ್​ ಮಾಡಿದ್ದಾರೆ. ಚಿತ್ರರಂಗದಲ್ಲಿ ಬಹುತೇಕರ ಜೊತೆ ಸಲ್ಮಾನ್​ ಖಾನ್​ ಸ್ನೇಹ ಹೊಂದಿದ್ದಾರೆ. ಹಿಂದಿ ಚಿತ್ರರಂಗದ ಜನಪ್ರಿಯ ನಟಿ ಪ್ರೀತಿ ಜಿಂಟಾ (Preity Zinta) ಕೂಡ ಸಲ್ಲುಗೆ ಬೆಸ್ಟ್​ ಫ್ರೆಂಡ್​. ಸಲ್ಮಾನ್​ ಖಾನ್​ ಹುಟ್ಟುಹಬ್ಬದ (Salman Khan Birthday) ಸಲುವಾಗಿ ಪ್ರೀತಿ ಜಿಂಟಾ ಅವರು ಒಂದು ಸ್ಪೆಷಲ್​ ಫೋಟೋ ಹಂಚಿಕೊಂಡು ‘ನನ್ನ ಡಾರ್ಲಿಂಗ್​’ ಎಂದು ಕರೆದಿದ್ದಾರೆ.

ಈ ವರ್ಷದ ಸಲ್ಮಾನ್​ ಖಾನ್​ ಬರ್ತ್​ಡೇ ಸೆಲೆಬ್ರೇಷನ್​ನಲ್ಲಿ ನೇರವಾಗಿ ಭಾಗಿಯಾಗಲು ಪ್ರೀತಿ ಜಿಂಟಾ ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಅವರು ಒಂದು ಹಳೇ ಫೋಟೋವನ್ನು ಹಂಚಿಕೊಂಡಿದ್ದಾರೆ. ದೂರದಿಂದಲೇ ತಮ್ಮ ಬೆಸ್ಟ್​ ಫ್ರೆಂಡ್​ಗೆ ಅವರು ಶುಭಾಶಯ ತಿಳಿಸಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ಹಂಚಿಕೊಂಡ ಈ ಪೋಸ್ಟ್​ ಸಖತ್​ ವೈರಲ್​ ಆಗಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಸಲ್ಮಾನ್​ ಖಾನ್​ ಜೊತೆ ಫೋಟೋ ತೆಗೆದುಕೊಳ್ಳಲು ಬಂದು ಕಿಸ್​ ಮಾಡಿದ ಮಹಿಳೆ

‘ನನ್ನ ಡಾರ್ಲಿಂಗ್​ ಸಲ್ಮಾನ್​ ಖಾನ್​ಗೆ ಜನ್ಮದಿನದ ಶುಭಾಶಯ. ನೀವು ಯಾವಾಗಲೂ ಶೈನ್​ ಆಗುವುದನ್ನು, ನಗುತ್ತಿರುವುದನ್ನು ನೋಡಲು ನಾನು ಬಯಸುತ್ತೇನೆ. ಜನ್ಮದಿನದ ಸಲುವಾಗಿ ಅಪ್ಪುಗೆ ನೀಡಲು ನಾನು ಈಗ ನಿಮ್ಮ ಜೊತೆ ಇಲ್ಲ. ಆ ಕೆಲಸವನ್ನು ಈ ಫೋಟೋ ಮಾಡಲಿದೆ. ಹ್ಯಾಪಿ ಬರ್ತ್​ಡೇ. ಎಂದೆಂದಿಗೂ ನನ್ನ ಸ್ನೇಹಿತ’ ಎಂದು ಪ್ರೀತಿ ಜಿಂಟಾ ಅವರು ಪೋಸ್ಟ್​ ಮಾಡಿದ್ದಾರೆ.

View this post on Instagram

A post shared by Preity G Zinta (@realpz)

ನಟನಾಗಿ, ನಿರ್ಮಾಪಕನಾಗಿ, ನಿರೂಪಕನಾಗಿ ಸಲ್ಮಾನ್​ ಖಾನ್​ ಅವರು ಬ್ಯುಸಿ ಆಗಿದ್ದಾರೆ. ವಯಸ್ಸು 58 ವರ್ಷ ಆಗಿದ್ದರೂ ಕೂಡ ಅವರು ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ಹಿಂದೆ ಅನೇಕ ನಟಿಯರ ಜೊತೆ ಅವರು ಡೇಟಿಂಗ್​ ಮಾಡಿದ್ದರು. ಆದರೆ ಯಾರನ್ನೂ ಮದುವೆ ಆಗಲಿಲ್ಲ. ಸದ್ಯಕ್ಕಂತೂ ಅವರು ಶಾದಿ ಬಗ್ಗೆ ಆಲೋಚನೆಯೇ ಮಾಡಿದಂತಿಲ್ಲ. ಸಿನಿಮಾ ಕೆಲಸಗಳು ಮತ್ತು ಬಿಗ್​ ಬಾಸ್​ ಶೋ ನಿರೂಪಣೆಯಲ್ಲಿ ಅವರು ಸಕ್ರಿಯರಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ