ಕೇಕ್ ಕತ್ತರಿಸುವಾಗ ಎಡವಟ್ಟು; ರಣಬೀರ್ ಕಪೂರ್ ವಿರುದ್ಧ ದಾಖಲಾಯ್ತು ದೂರು

ರಣಬೀರ್ ಕಪೂರ್ ಮತ್ತು ಅವರ ಕುಟುಂಬ ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ. ಮುಂಬೈನ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ಕೂಡ ದಾಖಲಾಗಿದೆ.

ಕೇಕ್ ಕತ್ತರಿಸುವಾಗ ಎಡವಟ್ಟು; ರಣಬೀರ್ ಕಪೂರ್ ವಿರುದ್ಧ ದಾಖಲಾಯ್ತು ದೂರು
ರಣಬೀರ್ ಕಪೂರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 28, 2023 | 11:43 AM

ಕ್ರಿಸ್‌ಮಸ್ ಹಬ್ಬವನ್ನು ಕಪೂರ್ ಕುಟುಂಬ ಬಹಳ ವಿಶೇಷ ಎಂದು ಪರಿಗಣಿಸಿದೆ. ಪ್ರತಿ ವರ್ಷ ಇಡೀ ಕುಟುಂಬವು ಕ್ರಿಸ್‌ಮಸ್ ಹಬ್ಬವನ್ನು ಒಟ್ಟಾಗಿ ಆಚರಿಸುತ್ತದೆ. ಈ ಸಮಯದಲ್ಲಿ ಕುಟುಂಬದ ಪ್ರತಿಯೊಬ್ಬರೂ ಭಾಗವಹಿಸಿ ಕ್ರಿಸ್​​rಮಸ್ ಹಬ್ಬವನ್ನು ಆಚರಿಸುತ್ತಾರೆ. ಈ ಬಾರಿಯೂ ರಣಬೀರ್ ಕಪೂರ್ (Ranbir Kapoor), ಆಲಿಯಾ ಭಟ್ ಮೊದಲಾದವರು ಭಾಗಿ ಆಗಿದ್ದಾರೆ. ರಹಾ ಮುಖವನ್ನು ತೋರಿಸುವ ಮೂಲಕ ಆಲಿಯಾ ಹಾಗೂ ರಣಬೀರ್ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದಾರೆ, ಈ ಮಧ್ಯೆ  ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ರಣಬೀರ್ ಕಪೂರ್ ವಿರುದ್ಧ ಕೇಸ್ ದಾಖಲಾಗಿದೆ. ಇದರಿಂದ ಅವರಿಗೆ ಸಂಕಷ್ಟ ಹೆಚ್ಚಿದೆ.

ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್ ಮೊಮ್ಮೊಗಳು ನವ್ಯಾ ನಂದಾ ನವೇಲಿ, ರಹಾ ಕಪೂರ್, ಅಗಸ್ತ್ಯ ನಂದಾ, ನಿಖಿಲ್ ನಂದಾ, ಕರಿಷ್ಮಾ ಕಪೂರ್, ಅವರ ಮಕ್ಕಳಾದ ಸಮೈರಾ ಮತ್ತು ಕಿಯಾನ್, ರಣಧೀರ್ ಕಪೂರ್, ರೀಮಾ ಜೈನ್, ನೀಲಾ ದೇವಿ, ಬಬಿತಾ ಕಪೂರ್ ಪಾರ್ಟಿಯಲ್ಲಿ ಇದ್ದರು. ಈ ವೇಳೆ ರಣಬೀರ್ ಕಪೂರ್ ಮಾಡಿದ ಒಂದು ತಪ್ಪಿನಿಂದ ತೊಂದರೆ ಅನುಭವಿಸಿದ್ದಾರೆ.

ರಣಬೀರ್ ಕಪೂರ್ ಮತ್ತು ಅವರ ಕುಟುಂಬ ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ. ಮುಂಬೈನ ಘಾಟ್‌ಕೋಪರ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ಕೂಡ ದಾಖಲಾಗಿದೆ. ವೈರಲ್ ಆಗಿರುವ ವೀಡಿಯೋ ಆಧರಿಸಿ ರಣಬೀರ್ ಮತ್ತು ಕಪೂರ್ ಕುಟುಂಬದ ವಿರುದ್ಧ ಐಪಿಸಿ ಸೆಕ್ಷನ್ 295, 509 ಮತ್ತು 34ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ.

ಏನಿದು ಘಟನೆ?

ಕಪೂರ್ ಕುಟುಂಬ ಕೇಕ್ ಕತ್ತರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಣಬೀರ್ ಕಪೂರ್ ಕೇಕ್ ಮೇಲೆ ಮದ್ಯ ಸುರಿಯುತ್ತಾರೆ. ಆ ಬಳಿಕ ಅದಕ್ಕೆ ಬೆಂಕಿ ಹಚ್ಚುತ್ತಾರೆ. ಈ ವೇಳೆ ರಣಬೀರ್ ಕಪೂರ್ ‘ಜೈ ಮಾತಾ ದಿ’ ಎಂದು ಹೇಳುತ್ತಿರುವುದು ಕಂಡುಬಂದಿದೆ. ಆ ಬಳಿಕ ಕುಟುಂಬದ ಇತರ ಸದಸ್ಯರು ಕೂಡ ‘ಜೈ ಮಾತಾ ದಿ’ ಎಂದು ಜೋರಾಗಿ ಘೋಷಣೆ ಕೂಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗಿದ್ದು,  ದೂರು ದಾಖಲಿಸಲಾಗಿದೆ.

ಮದ್ಯ ಬಳಕೆ ಮಾಡಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೇರೆ ಧರ್ಮದವರ ಹಬ್ಬವನ್ನು ಆಚರಿಸುವಾಗ ಜೈ ಮಾತಾ ದಿ ಎಂದು ಹೇಳಲಾಗಿದೆ. ಹಿಂದೂ ಧರ್ಮಕ್ಕೆ ಸಂಬಂಧಿಸಿದ ಧಾರ್ಮಿಕ ಭಾವನೆಗಳನ್ನು ಅವಮಾನಿಸಲಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣಬೀರ್ ಕಪೂರ್; ನಟನ ಬಗ್ಗೆ ಮೆಚ್ಚುಗೆ

ರಣಬೀರ್ ಕಪೂರ್​ಗೆ ಕ್ರಿಸ್​ಮಸ್ ಸಖತ್ ವಿಶೇಷ..

ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಡಿಸೆಂಬರ್ 1ರಂದು ರಿಲೀಸ್ ಆಯಿತು. ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ತೃಪ್ತಿ ದಿಮ್ರಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅಂದುಕೊಂಡಿದ್ದಕ್ಕಿಂತಲೂ ಒಳ್ಳೆಯ ಗಳಿಕೆ ಮಾಡಿ ಸಿನಿಮಾ ಗೆದ್ದು ಬೀಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ