ನಟ ಸಲ್ಮಾನ್ ಖಾನ್ ಅವರು ಇನ್ನೂ ಮದುವೆ ಆಗದಿರಲು ಕಾರಣವೇನು?

ಇತ್ತೀಚೆಗೆ ಮದುವೆ ಬಗ್ಗೆ ಸಲ್ಮಾನ್ ಖಾನ್ ಗಂಭೀರವಾಗಿ ಮಾತನಾಡಿದ್ದರು. ‘ಅನೇಕ ಮಹಿಳೆಯರು ನನ್ನ ಜೀನವನದಲ್ಲಿ ಬಂದು ಹೋಗಿದ್ದಾರೆ. ನನ್ನ ಎಲ್ಲಾ ಗೆಳತಿಯರು ಒಳ್ಳೆಯವರಾಗಿದ್ದರು. ತಪ್ಪು ನನ್ನಲ್ಲೇ ಇತ್ತು’ ಎಂದಿದ್ದರು ಸಲ್ಮಾನ್ ಖಾನ್.

ನಟ ಸಲ್ಮಾನ್ ಖಾನ್ ಅವರು ಇನ್ನೂ ಮದುವೆ ಆಗದಿರಲು ಕಾರಣವೇನು?
ಸಲ್ಮಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 27, 2023 | 11:55 AM

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಇಂದು (ಡಿಸೆಂಬರ್ 27) 58ನೇ ವರ್ಷದ ಹುಟ್ಟುಹಬ್ಬ.  ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸಲ್ಮಾನ್ ಸದ್ಯ ‘ಬಿಗ್ ಬಾಸ್ ಹಿಂದಿ ಸೀಸನ್ 17′ ನಿರೂಪಣೆಯಲ್ಲಿ ಬ್ಯುಸಿ ಇದ್ದಾರೆ. ಅವರು ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಕಳೆದ ಹಲವು ದಶಕಗಳಿಂದ ಬಾಲಿವುಡ್‌ನಲ್ಲಿ ಪ್ರಾಬಲ್ಯ ಹೊಂದಿರುವ ಅವರು ಮದುವೆ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. 58ರ ಹರೆಯದಲ್ಲೂ ಅವರು ಒಂಟಿಯಾಗಿದ್ದಾರೆ. ಅವರು ಬಾಲಿವುಡ್​ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಅವರು ಮದುವೆ ಆಗದೇ ಇರಲು ಕಾರಣ ಏನು ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಇತ್ತೀಚೆಗೆ ಎರಡನೇ ಮದುವೆಯಾಗಿದ್ದಾರೆ. ಮೇಕಪ್ ಕಲಾವಿದೆ ಶುರಾ ಖಾನ್ ಅವರನ್ನು ವಿವಾಹವಾಗಿದ್ದಾರೆ. ಸಲ್ಮಾನ್ ಖಾನ್ ಕೂಡ ಒಂದು ಮದುವೆ ಆಗಬಹುದಿತ್ತು ಎಂದು ಅನೇಕರು ಹೇಳಿದ್ದಿದೆ. ಈಗ ಅವರ ಬರ್ತ್​ಡೇ ಪ್ರಯುಕ್ತ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ಸಲ್ಮಾನ್ ಅವರು ಈ ಮೊದಲ ಸಂದರ್ಶನದಲ್ಲಿ ಮದುವೆ ಬಗ್ಗೆ ಮಾತನಾಡಿದ್ದರು. ‘ಮದುವೆ ಎನ್ನುವುದು ಜೀವನದಲ್ಲಿ ನಡೆಯುವ ಒಂದು ಮಹತ್ವದ ವಿಚಾರ. ಅದಕ್ಕೆ ತುಂಬಾ ಖರ್ಚಾಗುತ್ತದೆ. ನನಗೆ ಆ ವೆಚ್ಛವನ್ನು ಭರಿಸಲು ಸಾಧ್ಯವಿಲ್ಲ. ಆದ್ದರಿಂದ ನಾನು ಮದುವೆಯಾಗುತ್ತಿಲ್ಲ’ ಎಂದು ಸಲ್ಮಾನ್ ಖಾನ್ ಅವರು ‘ಸುಲ್ತಾನ್’ ಚಿತ್ರದ ಪ್ರಚಾರದ ವೇಳೆ ಹೇಳಿದ್ದರು. ಇದು ಅವರು ಫನ್​ ರೀತಿಯಲ್ಲಿ ಹೇಳಿದ್ದರು. ‘ನಾನು ಮದುವೆಯಾಗಲು ಆತುರದಲ್ಲಿದ್ದೇನೆ. ನಾನು ಇನ್ನೊಬ್ಬರ ಒಪ್ಪಿಗೆಗಾಗಿ ಕಾಯುತ್ತಿದ್ದೇನೆ. ಮದುವೆಗೆ ಮಹಿಳೆಯರ ಒಪ್ಪಿಗೆ ಮುಖ್ಯವೇ ಹೊರತು ಪುರುಷನ ಇಚ್ಛೆ ಅಲ್ಲ’ ಎಂದೂ ಸಲ್ಮಾನ್ ಹೇಳಿದ್ದರು.

ಇತ್ತೀಚೆಗೆ ಮದುವೆ ಬಗ್ಗೆ ಸಲ್ಮಾನ್ ಖಾನ್ ಗಂಭೀರವಾಗಿ ಮಾತನಾಡಿದ್ದರು. ‘ಅನೇಕ ಮಹಿಳೆಯರು ನನ್ನ ಜೀನವನದಲ್ಲಿ ಬಂದು ಹೋಗಿದ್ದಾರೆ. ನನ್ನ ಎಲ್ಲಾ ಗೆಳತಿಯರು ಒಳ್ಳೆಯವರಾಗಿದ್ದರು. ತಪ್ಪು ನನ್ನಲ್ಲೇ ಇದೆ. ಮೊದಲನೆಯವರು ಹೋದಾಗ ಅದು ಅವಳ ತಪ್ಪಾಗಿರಬಹುದು ಎಂದುಕೊಂಡೆ. ಎರಡನೆಯವರು ಮತ್ತು ನಂತರ ಮೂರನೆಯವರು ಹೋದಾಗ ಅವರ ತಪ್ಪು ಇರಬಹುದು ಎಂದುಕೊಂಡೆ. ಆದರೆ ನಾಲ್ಕನೆಯರು ಹೋದಾಗ ತಪ್ಪು ಅವರದ್ದೋ ಅಥವಾ ನನ್ನದೋ ಎಂಬ ಅನುಮಾನ ಕಾಡುತ್ತದೆ. ಇನ್ನೂ ಅನೇಕರು ಬಂದು ಹೋದಾಗ ತಪ್ಪು ನನ್ನದೇ ಎಂದು ಗೊತ್ತಾಗುತ್ತದೆ. ಅವರಿಗೆ ಜೀವನದಲ್ಲಿ ಖುಷಿ ನೀಡಲು ನನ್ನಿಂದ ಸಾಧ್ಯವಾಗುವುದಿಲ್ಲ ಎನಿಸುತ್ತದೆ. ಎಲ್ಲೇ ಇದ್ದರೂ ಅವರೆಲ್ಲರೂ ಸಂತೋಷವಾಗಿದ್ದಾರೆ’ ಎಂದಿದ್ದರು ಸಲ್ಮಾನ್.

ಹಲವು ನಟಿಯರ ಜೊತೆ ಡೇಟಿಂಗ್

ಸಲ್ಮಾನ್ ಖಾನ್ ಮದುವೆ ಆಗಿಲ್ಲ. ಹಾಗಂತ ಅವರು ಸುಮ್ಮನೆ ಕುಳಿತವರಲ್ಲ. ಹಲವು ನಟಿಯರ ಜೊತೆ ಅವರು ಡೇಟಿಂಗ್ ಮಾಡಿದ್ದಾರೆ. ಮೊದಲು ಅವರು ಸೋಮಿ ಅಲಿಯೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಇಬ್ಬರೂ ಮದುವೆ ಆಗಲಿಲ್ಲ. ಆ ಬಳಿಕ ನಟಿ ಸಂಗೀತಾ ಬಿಜಲಾನಿ ಅವರೊಂದಿಗೆ ಡೇಟಿಂಗ್ ಶುರು ಮಾಡಿದರು. ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಆದರೆ ಇವರ ಸಂಬಂಧ ಹೆಚ್ಚು ದಿನ ಮುಂದುವರಿಯಲು ಸಾಧ್ಯವಾಗಲಿಲ್ಲ. ಇಬ್ಬರ ಮಧ್ಯೆ ಈಗಲೂ ಒಳ್ಳೆಯ ಫ್ರೆಂಡ್​ಶಿಪ್ ಇದೆ.

ಇದನ್ನೂ ಓದಿ: ಕಾರು ಅಪಘಾತ, ಕೃಷ್ಣ ಮೃಗ ಹತ್ಯೆ; ಸಲ್ಮಾನ್ ಖಾನ್ ಮಾಡಿಕೊಂಡ ವಿವಾದಗಳು ಒಂದೆರಡಲ್ಲ

ಸಲ್ಮಾನ್ ಖಾನ್ ಹಾಗೂ ನಟಿ ಐಶ್ವರ್ಯಾ ರೈ ಜತೆಗಿನ ಸಂಬಂಧ ಹೆಚ್ಚು ಚರ್ಚೆಯಾಗಿತ್ತು. ಅವರ ಸಂಬಂಧವು ಸಾಕಷ್ಟು ಸುದ್ದಿ ಆಗಿತ್ತು. ಆದರೆ, ಸಲ್ಮಾನ್ ಖಾನ್ ಅವರ ಕೋಪದ ಕಾರಣಕ್ಕೆ ಈ ಸಂಬಂಧ ಕೊನೆ ಆಯಿತು ಎನ್ನಲಾಗಿದೆ. ಕತ್ರಿನಾ ಕೈಫ್ ಮತ್ತು ಸಲ್ಮಾನ್ ಇಬ್ಬರೂ ಪ್ರೀತಿಯಲ್ಲಿದ್ದರು. ಆದರೆ ದುರದೃಷ್ಟವಶಾತ್ ಇವರ ಸಂಬಂಧ ಮದುವೆವರೆಗೆ ಹೋಗಲಿಲ್ಲ. ಸಲ್ಮಾನ್ ಅವರ ಹೆಸರನ್ನು ಮಾಡೆಲ್ ಇಲಿಯಾ ವಂಟೂರ್ ಅವರೊಂದಿಗೆ ಲಿಂಕ್ ಮಾಡಲಾಗುತ್ತಿದೆ. ಆದರೆ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಮೌನವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ