AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್ ಖಾನ್​ ಮಗಳು ಇರಾ ಖಾನ್​ ಮದುವೆ ಶಾಸ್ತ್ರಗಳು ಆರಂಭ; ಫೋಟೋ ವೈರಲ್​

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಕಾಲಿಡುತ್ತಾರೆ. ಆದರೆ ಆಮಿರ್​ ಖಾನ್ ಅವರ ಪುತ್ರಿ ಇರಾ ಖಾನ್​ಗೆ ಚಿತ್ರರಂಗದ ಬಗ್ಗೆ ಆಸಕ್ತಿ ಇಲ್ಲ. ಬೇರೆ ಸ್ಟಾರ್​ ಕಿಡ್​ಗಳ ರೀತಿಯಲ್ಲಿ ಅವರು ನಟಿಯಾಗುವ ಆಸಕ್ತಿ ಹೊಂದಿಲ್ಲ. ಅವರೀಗ ಪ್ರಿಯಕರ ನೂಪುರ್​ ಶಿಖಾರೆ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಆಮಿರ್ ಖಾನ್​ ಮಗಳು ಇರಾ ಖಾನ್​ ಮದುವೆ ಶಾಸ್ತ್ರಗಳು ಆರಂಭ; ಫೋಟೋ ವೈರಲ್​
ಇರಾ ಖಾನ್​ ಮದುವೆ ಶಾಸ್ತ್ರಗಳು ಆರಂಭ
ಮದನ್​ ಕುಮಾರ್​
|

Updated on: Dec 27, 2023 | 12:53 PM

Share

ಬಾಲಿವುಡ್​ನ ಖ್ಯಾತ ನಟ ಆಮಿರ್ ಖಾನ್​ ಅವರ ಪುತ್ರಿ ಇರಾ ಖಾನ್ (Ira Khan) ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಫಿಟ್ನೆಸ್​ ಟ್ರೇನರ್​ ನೂಪುರ್​ ಶಿಖಾರೆ (Nupur Shikhare) ಜೊತೆ ಇರಾ ಖಾನ್​ ಮದುವೆ ಆಗುತ್ತಿದ್ದಾರೆ. ಜನವರಿ 3ರಂದು ಅವರ ವಿವಾಹ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಅದರ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಇರಾ ಖಾನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಮಿರ್​ ಖಾನ್​ (Aamir Khan) ಅವರ ಮಾಜಿ ಪತ್ನಿ ಕಿರಣ್​ ರಾವ್​ ಕೂಡ ಮದುವೆ ಶಾಸ್ತ್ರಗಳಲ್ಲಿ ಭಾಗಿ ಆಗಿದ್ದಾರೆ.

ಆಮಿರ್​ ಖಾನ್​ ಮತ್ತು ರೀನಾ ದತ್ತ ಅವರು 1986ರಲ್ಲಿ ವಿವಾಹವಾದರು. ಈ ದಂಪತಿಯ ಮಗಳೇ ಇರಾ ಖಾನ್​. 2002ರಲ್ಲಿ ಆಮಿರ್​ ಖಾನ್​ ಹಾಗೂ ರೀನಾ ದತ್ತ ವಿಚ್ಛೇದನ ಪಡೆದರು. ಹಾಗಿದ್ದರೂ ಕೂಡ ಮಕ್ಕಳ ಮತ್ತು ಮಾಜಿ ಪತ್ನಿಯ ಜೊತೆ ಆಮಿರ್ ಖಾನ್​ ಅವರು ಒಡನಾಟ ಉಳಿಸಿಕೊಂಡಿದ್ದಾರೆ. ಮಗಳ ಮದುವೆಯನ್ನು ಅವರು ಅದ್ದೂರಿಯಾಗಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಆಮಿರ್​ ಖಾನ್​ ಜೊತೆ ನಟಿ ಜೆನಿಲಿಯಾ ಡಿಸೋಜಾ ರೊಮ್ಯಾನ್ಸ್​

ನಟ ಆಮಿರ್ ಖಾನ್​ಗೆ ಫಿಟ್ನೆಸ್​ ಟ್ರೇನಿಂಗ್​ ನೀಡಲು ಬಂದ ನೂಪುರ್​ ಶಿಖಾರೆ ಜೊತೆಗೆ ಇರಾ ಖಾನ್​ ಅವರಿಗೆ ಲವ್​ ಆಯಿತು. ಒಂದಷ್ಟು ದಿನ ಡೇಟಿಂಗ್​ ನಡೆಸಿದ ಈ ಜೋಡಿ ಈಗ ಹಸೆಮಣೆ ಏರುತ್ತಿದೆ. ಮದುವೆ ಶಾಸ್ತ್ರಗಳಲ್ಲಿ ಕುಟುಂದವರು ಭಾಗಿ ಆಗಿದ್ದಾರೆ. ಜನವರಿ 3ರಂದು ನಡೆಯಲಿರುವ ವಿವಾಹ ಸಮಾರಂಭದಲ್ಲಿ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಗಳ ಮದುವೆಯ ಸಲುವಾಗಿ ಆಮಿರ್ ಖಾನ್​ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಚೆನ್ನೈನಲ್ಲಿ ಕಮಲ್​ ಹಾಸನ್​ ಬರ್ತ್​ಡೇ ಪಾರ್ಟಿಗೆ ಹಾಜರಿ ಹಾಕಿದ ಆಮಿರ್​ ಖಾನ್​, ಸೂರ್ಯ; ಫೋಟೋ ವೈರಲ್​

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮಕ್ಕಳು ಕೂಡ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಆದರೆ ಆಮಿರ್​ ಖಾನ್ ಅವರ ಪುತ್ರಿ ಇರಾ ಖಾನ್​ಗೆ ಚಿತ್ರರಂಗದ ಬಗ್ಗೆ ಆಸಕ್ತಿ ಇಲ್ಲ. ಬೇರೆ ಸ್ಟಾರ್​ ಕಿಡ್​ಗಳ ರೀತಿಯಲ್ಲಿ ಅವರು ನಟಿಯಾಗುವ ಆಸಕ್ತಿ ಹೊಂದಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು