ರೋಡ್​ ಶೋ ವೇಳೆ ಪ್ರಧಾನಿ ಮೋದಿಯನ್ನ ಮದುವೆಗೆ ಆಹ್ವಾನಿಸಿದ ಭಾವಿ ದಂಪತಿ

ರೋಡ್​ ಶೋ ವೇಳೆ ಪ್ರಧಾನಿ ಮೋದಿಯನ್ನ ಮದುವೆಗೆ ಆಹ್ವಾನಿಸಿದ ಭಾವಿ ದಂಪತಿ

ವಿವೇಕ ಬಿರಾದಾರ
|

Updated on:May 06, 2023 | 12:02 PM

ಪ್ರಧಾನಿ ನರೇಂದ್ರ ಮೋದಿ ರೋಡ್​ ಶೋ ಸೌತ್ ಎಂಡ್ ಸರ್ಕಲ್​​ಗೆ ಆಗಮಿಸುತ್ತಿದ್ದಂತೆ, ಪ್ರಧಾನಿ ಮೋದಿಯವರನ್ನು ಬಾವಿ ದಂಪತಿ ಮದುವೆಗೆ ಆಹ್ವಾನಿಸಿದ್ದಾರೆ.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅತಿದೊಡ್ಡ ರೋಡ್​ ಶೋ ನಡೆಯುತ್ತಿದೆ. 26 ಕಿಮೀ ರೋಡ್​ ಶೋ ಇದಾಗಿದ್ದು, ಬಹುತೇಕ ಬೆಂಗಳೂರು ಕೇಸರಿಮಯವಾಗಿದೆ. ಎಲ್ಲಡೆ ಬಿಜೆಪಿ ಮತ್ತು ಹಿಂದುತ್ವದ ಧ್ವಜಗಳು ರಾರಾಜಿಸುತ್ತಿವೆ. ಇನ್ನು ಪ್ರಧಾನಿ ಮೋದಿಯವರನ್ನು ನೋಡಲು ರಸ್ತೆಯ ಅಕ್ಕಪಕ್ಕದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂನಿಂದ ಆರಂಭವಾದ ರೋಡ್​​ ಶೋ ಮಲ್ಲೇಶ್ವರಂನಲ್ಲಿ ಅಂತ್ಯವಾಗಲಿದೆ. ರೋಡ್​ ಶೋ ಸೌತ್ ಎಂಡ್ ಸರ್ಕಲ್​​ಗೆ ಆಗಮಿಸುತ್ತಿದ್ದಂತೆ, ಪ್ರಧಾನಿ ಮೋದಿಯವರನ್ನು ಭಾವಿ ದಂಪತಿ ಮದುವೆಗೆ ಆಹ್ವಾನಿಸಿದ್ದಾರೆ. ಹೌದು ನವ ಜೋಡಿ ಮೋದಿಜಿ ನೀವು ಮೇ 12ರಂದು ನಮ್ಮ ಮದುವೆಗೆ ಬರಬೇಕು ಅಂತಾ ಬ್ಯಾನರ್ ಹಿಡಿದು ಆಹ್ವಾನಿಸಿದ್ದಾರೆ.

Published on: May 06, 2023 11:27 AM