ಬಕ್ರೀದ್ ಪ್ರಯುಕ್ತ ಕೋವಿಡ್-19 ಸುರಕ್ಷಾ ನಿಯಮಗಳಲ್ಲಿ ಸಡಲಿಕೆ; ಕೇರಳದಲ್ಲಿ ಹೆಚ್ಚಿದ ಸೋಂಕಿನ ಪ್ರಕರಣಗಳು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 21, 2021 | 6:02 PM

ಮಂಗಳವಾರ ಭಾರತದಲ್ಲಿ 39,785 ಹೊಸ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ ಶೇಕಡಾ 42 ರಷ್ಟು ಪ್ರಕರಣಗಳು ಕೇರಳ ಒಂದರಲ್ಲೇ ಪತ್ತೆಯಾಗಿವೆ. ನಿನ್ನೆ ಈ ರಾಜ್ಯದಲ್ಲಿ 16,848 ಹೊಸ ಪ್ರಕರಣಗಳು ಪತ್ತೆಯಾಗಿವೆ.

ನವದೆಹಲಿ: ಮಾರ್ಚ್​ 16 ರಿಂದ ಇಲ್ಲಿಯವರೆಗಿನ ಅವಧಿಯಲ್ಲೇ ಅತ್ಯಂತ ಕಡಿಮೆ ಕೋವಿಡ್​ ಸೋಂಕಿನ ಪ್ರಕರಣಗಳು ವರದಿಯಾಗಿದ್ದ ಭಾರತದಲ್ಲಿ ಬಕ್ರೀದ್ ಹಬ್ಬದ ಮುನ್ನಾದಿನವಾಗಿದ್ದ ಮಂಗಳವಾರ ಕೇರಳ ಮತ್ತು ಭಾರತ ಈಶಾನ್ಯ ಭಾರತದ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದಿಢೀರನೆ ಏರಿದ್ದು ದೇಶದಲ್ಲಿ ಬೆಳಕಿಗೆ ಬಂದ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ 40,000 ಗಡಿ ಸಮೀಪಿಸುವಂತಾಗಿದೆ. ಸೊಮವಾರದಂದು ಅತಿ ಕಡಿಮೆ ಪ್ರಕರಣಗಳು ವರದಿಯಾಗಿದ್ದವು.

ಭಾರತದಲ್ಲಿ ಈಗ ಜಾರಿಯಲ್ಲಿರುವ ದತ್ತಾಂಶ ಸಮನ್ವಯ ಪ್ರಕ್ರಿಯೆಯ ಭಾಗವಾಗಿ ಮಹಾರಾಷ್ಟ್ರವು ಸರ್ಕಾರವು ರಾಜ್ಯದಲ್ಲಿ ಇದುವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆಗೆ ಮಂಗಳವಾರ 3,509 ಹೆಚ್ಚುವರಿ ಮರಣಗಳನ್ನು ಸೇರಿಸಿದೆ. ಸಾವುಗಳ ಬ್ಲ್ಯಾಕ್​ಲಾಗ್​ಗೆ ಸಂಬಂಧಿಸಿದಂತೆ ಇದು ಎರಡನೇ ಅತಿದೊಡ್ಡ ಹೆಚ್ಚುವರಿ ಮರಣಗಳ ಸಂಖ್ಯೆಯಾಗಿದೆ. ಕಳೆದ ತಿಂಗಳು ಬಿಹಾರ 3,951 ಹೆಚ್ಚುವರಿ ಮರಣಗಳನ್ನು ಸೋಂಕಿಗೆ ಬಲಿಯಾದವರ ಪಟ್ಟಿಗೆ ಸೇರಿಸಿತ್ತು.

ಮಂಗಳವಾರ ಭಾರತದಲ್ಲಿ 39,785 ಹೊಸ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ ಶೇಕಡಾ 42 ರಷ್ಟು ಪ್ರಕರಣಗಳು ಕೇರಳ ಒಂದರಲ್ಲೇ ಪತ್ತೆಯಾಗಿವೆ. ನಿನ್ನೆ ಈ ರಾಜ್ಯದಲ್ಲಿ 16,848 ಹೊಸ ಪ್ರಕರಣಗಳು ಪತ್ತೆಯಾಗಿವೆ. ಜೂನ್ 5 ರಂದು 17,328 ಪ್ರಕರಣಗಳು ಪತ್ತೆಯಾದ ನಂತರ ಇದುವರೆಗೆ ವರದಿಯಾಗಿರುವ ಅತಿಹೆಚ್ಚು ಕೇಸುಗಳ ಸಂಖ್ಯೆ ಇದಾಗಿದೆ. ಈಶಾನ್ಯ ರಾಜ್ಯಗಳ ಪೈಕಿ ಮಿಜೊರಾಂನಲ್ಲಿ 806, ಮಣಿಪುರನಲ್ಲಿ 1,127, ಅರುಣಾಚಲ ಪ್ರದೇಶದಲ್ಲಿ 508 ಮತ್ತು ತ್ರಿಪುರದಲ್ಲಿ 488 ಪ್ರಕರಣಗಳು ಪತ್ತೆಯಾಗಿವೆ.

ಇದನ್ನೂ ಓದಿ: ಬಕ್ರೀದ್ ಪ್ರಯುಕ್ತ ಲಾಕ್​ಡೌನ್ ಸಡಿಲಿಸಿದ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ