ಅವನು ಮೂವರನ್ನು ಏಕಕಾಲಕ್ಕೆ ಪ್ರೀತಿಸಿದ, ಅದನ್ನು ಕಂಡುಕೊಂಡ ಯುವತಿಯರು ನೋವು ಮರೆಯಲು ವಿಶ್ವ ಪರ್ಯಟನಕ್ಕೆ ಹೊರಟರು!

ಮೂವರಲ್ಲಿ ಗೆಳೆತನ ಬೆಳೆದು ಪ್ರವಾಸ ಮಾಡುವ ಮೂಲಕ ತಮಗಾದ ನೋವು ಮರೆಯಲು ನಿರ್ಧರಿಸಿದರು. ಈ ವಿಡಿಯೋದಲ್ಲಿ ಅವರು ಎಂಜಾಯ್ ಮಾಡುತ್ತಿರುವುದನ್ನು ನೋಡಿದರೆ ಅವರು ಹೃದಯಕ್ಕಾದ ಘಾಸಿ ವಾಸಿ ಮಾಡಿಕೊಂಡಿದ್ದಾರೆ ಅನಿಸುತ್ತದೆ. ಜೂನ್ 25 ರಂದು ಅವರ ಪ್ರವಾಸ ಆರಂಭವಾಗಿದೆ. ಬೇರೆ ಬೇರೆ ದೇಶಗಳನ್ನು ಅವರು ಜಾಲಿಯಾಗಿ ಸುತ್ತುತ್ತಿದ್ದಾರೆ.

ಬೆಕಾ ಕಿಂಗ್, ಅಬಿ ರಾಬರ್ಟ್ಸ್ ಮತ್ತು ಮೊರ್ಗನ್ ಟೇಬರ್-ಈ ಮೂವರಲ್ಲೂ ಒಂದು ಸಂಗತಿ ಕಾಮನ್ ಆಗಿತ್ತು, ಅವರ ಬಾಯ್​ಫ್ರೆಂಡ್! ಹೌದು, ಒಬ್ಬನೇ ಭೂಪ ಮೂವರೊಂದಿಗೆ ಫ್ಲರ್ಟ್​ ಮಾಡುತ್ತಾ ಅವರಿಗೆ ದ್ರೋಹವೆಸಗುತ್ತಿದ್ದ. ಮೊದಲಿಗೆ ಈ ಹೆಂಗಳೆಯರಿಗೆ ಈ ವಿಷಯ ಗೊತ್ತಿರಲಿಲ್ಲ. ಅದೊಂದು ದಿನ ಟೇಬರ್ ಅವನ ಸೋಶಿಯಲ್ ಮಿಡಿಯಾ ನೋಡಿವಾಗ ಅದರಲ್ಲಿ ಮತ್ತೊಬ್ಬ ಯುವತಿಯ ಪೇಜ್ ಕಾಣಸಿಕ್ಕಿತು. ಕೂಡಲೇ ಆಕೆಗೆ ತಾನು ಮನಸಾರೆ ಪ್ರೀತಿಸುತ್ತಿದ್ದವನು ಬೇರೆ ಹೆಂಗಸಿನ ಜೊತೆಯೂ ಸಂಬಂಧವಿಟ್ಟುಕೊಂಡಿದ್ದು ಖಾತ್ರಿಯಾಯಿತು.

‘ನಾನು ಅವನನ್ನೇ ಮದುವೆಯಾಗಲು ನಿರ್ಧರಿಸಿದ್ದೆ ಮತ್ತು ನಾವಿಬ್ಬರು ನಮ್ಮ ಮನೆ ಮತ್ತು ಮದುವೆ ಹೇಗೆ ನಡೆಯಬೇಕು ಅಂತೆಲ್ಲ ಪ್ಲ್ಯಾನ್ ಮಾಡಿದ್ದೆವು. ಆದರೆ ಅವನು ಇನ್ನೊಬ್ಬ ಹೆಂಗಸಿನ ಜೊತೆ ಇದ್ದ ಫೋಟೋ ನೋಡಿ ನನ್ನ ಕನಸಿನ ಸೌಧ ಕುಸಿದು ಬಿತ್ತು. ನನಗಾದ ವಂಚನೆ ಬದುಕಿನುದ್ದಕ್ಕೂ ದುಃಖಿಸುವಂತೆ ಮಾಡಿದೆ. ನನ್ನ ಆತ್ಮವೇ ಸತ್ತುಹೋಗಿರುವಂಥ ಭಾವನೆ ನನ್ನಲ್ಲಿ ಹುಟ್ಟಿಕೊಂಡಿದೆ,’ ಎಂದು ಇದಾಹೊ ರಾಜಧಾನಿ ಬೋಯಿಸ್​ನಲ್ಲಿ ವಾಸ ಮಾಡುವ ಟೇಬರ್ ಟಿವಿ ಚ್ಯಾನೆಲೊಂದರ ಜೊತೆ ಮಾತಾಡುವಾಗ ಹೇಳಿದಳು.
ತನ್ನ ಬಾಯ್​ಫ್ರೆಂಡ್ ಜೊತೆಯಿದ್ದ ಆ ಯುವತಿ ರಾಬರ್ಟ್ಸ್​ಳ ಕಾಂಟ್ಯಾಕ್ಟ್ ನಂಬರ್ ಅನ್ನು ಅವನ ಪೋನ್​ನಿಂದ ಕದ್ದು ಆಕೆಯನ್ನು ಸಂಪರ್ಕಿಲು ಟೇಬರ್​ಗೆ ಕಷ್ಟವಾಗಲಿಲ್ಲ. ಅವರಿಬ್ಬರೂ ಸೇರಿ, ತಮ್ಮ ಬಾಯ್​ಫ್ರೆಂಡ್​ನಿಂದ ಮೋಸ ಹೋಗಿರುವ ಬೇರೆ ಯುವತಿಯರನ್ನು ಪತ್ತೆ ಮಾಡುವ ಕೆಲಸ ಆರಂಭಿಸಿದರು. ಅವರಿಗೆ ಸಿಕ್ಕವಳು ಬೇಕಾ ಕಿಂಗ್, ಮತ್ತು ಇನ್ನೂ ಮೂವರು ಯುವತಿಯರು. ಆಂದರೆ ಅವನು ಆರು ಜನರನ್ನು ಏಕಕಾಲಕ್ಕೆ ವಂಚಿಸುತ್ತಿದ್ದ.

ಈ ಮೂವರು ಫೇಸ್​ಟೈಮ್​ ಅಂತ ಒಂದು ಗ್ರೂಪ್​ ಮಾಡಿಕೊಂಡು ತಮ್ಮ ತಮ್ಮ ವೇದನೆಗಳನ್ನು ಹಂಚಿಕೊಂಡರು. ಅವರೆಲ್ಲ ಒಂದು ದಿನ ಗ್ರೂಪ್​ನಲ್ಲಿ ಚಾಟ್​ ಮಾಡುತ್ತಿದ್ದಾಗ, ಟೇಬರ್ ಮನೆಗೆ ಬೋಕೆ ಹಿಡಿದುಕೊಂಡು ಬಾಯ್​ಫ್ರೆಂಡ್ ಬಂದ. ಆಕೆ, ಅವನಿಗೆ, ನಾನು ಕೆಲ ಹೊಸ ಸ್ನೇಹಿತೆಯರನ್ನು ಮಾಡಿಕೊಂಡಿದ್ದೇನೆ ಅಂತ ಉಳಿದಿಬ್ಬರನ್ನು ಅವನಿಗೆ ತೋರಿಸಿದಳು. ಅವನ ಮುಖ ಆಗ ನೋಡುವಂತಿತ್ತು ಎಂದು ಹೇಳಿಕೊಂಡಿರುವ ಮೂವರು ಅವನ ಅಂದಿನ ಅವಸ್ಥೆಯನ್ನೂ ತಮ್ಮ ಬದುಕಿನಲ್ಲಿ ಯಾವತ್ತೂ ಮರೆಯಲಾರೆವು ಅಂತ ಹೇಳಿಕೊಂಡಿದ್ದಾರೆ. ಈ ಮೂವರು ಅವನಿಗೆ ಚೆನ್ನಾಗಿ ಉಗಿದು, ಇನ್ನಾವತ್ತೂ ತಮ್ಮ ತಂಟೆಗೆ ಬರಬೇಡ ಅಂತ ತಾಕೀತು ಮಾಡಿ ಅವನನ್ನು ಡಂಪ್ ಮಾಡಿದ್ದಾರೆ. ಆಂದಹಾಗೆ, ರಾಬರ್ಟ್ಸ್ ಉಟಾಹ್ ಸಾಲ್ಟ್ ಲೇಕ್ ಸಿಟಿಯಲ್ಲಿ ವಾಸವಾಗಿದ್ದಾಳೆ.

ನಂತರ ಮೂವರಲ್ಲಿ ಗೆಳೆತನ ಬೆಳೆದು ಪ್ರವಾಸ ಮಾಡುವ ಮೂಲಕ ತಮಗಾದ ನೋವು ಮರೆಯಲು ನಿರ್ಧರಿಸಿದರು. ಈ ವಿಡಿಯೋದಲ್ಲಿ ಅವರು ಎಂಜಾಯ್ ಮಾಡುತ್ತಿರುವುದನ್ನು ನೋಡಿದರೆ ಅವರು ಹೃದಯಕ್ಕಾದ ಘಾಸಿ ವಾಸಿ ಮಾಡಿಕೊಂಡಿದ್ದಾರೆ ಅನಿಸುತ್ತದೆ. ಜೂನ್ 25 ರಂದು ಅವರ ಪ್ರವಾಸ ಆರಂಭವಾಗಿದೆ. ಬೇರೆ ಬೇರೆ ದೇಶಗಳನ್ನು ಅವರು ಜಾಲಿಯಾಗಿ ಸುತ್ತುತ್ತಿದ್ದಾರೆ.

ಇದನ್ನೂ ಓದಿ: Viral Video: ಕೇರಂ ಆಟದ ನಡುವೆ ಅಜ್ಜಂದಿರ ಜಟಾಪಟಿ; ವೈರಲ್ ವಿಡಿಯೋ ನೋಡಿ ನಕ್ಕು ಹಗುರಾದ ನೆಟ್ಟಿಗರು