ಮಗ ಮೋದಿ ಸಂಪುಟದಲ್ಲಿ ಮಂತ್ರಿಯಾದರೂ ತಂದೆ-ತಾಯಿ ಮಾತ್ರ ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಾರೆ!
ಚೆನೈನ ಡಾ. ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪಡೆದಿರುವ ಮುರುಗನ್, ವಕೀಲಿಕೆಯನ್ನೂ ಮಾಡಿದ್ದಾರೆ. ಪೋಷಕರು, ಕರುಳಿನ ಅಷ್ಟು ಎತ್ತರಕ್ಕೆ ಬೆಳೆಯಲು ತಮ್ಮ ಕಾಣಿಕೆ ಏನೂ ಇಲ್ಲ, ಅವರೇ ಕಷ್ಟಪಟ್ಟು ಮುಂದೆ ಬಂದಿದ್ದಾರೆ ಎಂದು ಹೇಳುತ್ತಾರೆ.
ಮೊನ್ನೆಯಷ್ಟೇ ಪುನಾರಚನೆಗೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಕೆಲವು ಹೊಸಮುಖಗಳಿವೆ. ಈ ಬಾರಿಯ ವಿಸ್ತರಣೆಯಲ್ಲಿ ಪ್ರಧಾನಿಗಳು ಮಹಿಳೆಯರಿಗೆ, ದಲಿತರಿಗೆ ಮತ್ತು ಸಮಾಜದ ತಳಮಟ್ಟದಿಂದ ಬಂದ ಧುರೀಣರಿಗೆ ಅವಕಾಶ ಕಲ್ಪಿಸಿದ್ದಾರೆ. ನಮ್ಮಲ್ಲಿ ಅನೇಕರು ಮೋದಿ ಸಂಪುಟದಲ್ಲಿ ಸಂಪುಟದ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ವಾರ್ತಾ ಮತ್ತು ಪ್ರಚಾರ ಇಲಾಖೆ ರಾಜ್ಯ ಸಚಿವರಾಗಿ ಸಚಿವರಾಗಿ ನೇಮಕಗೊಂಡಿರುವ ಎಲ್ ಮುರುಗನ್ ಅವರ ಬಗ್ಗೆ ಗೊತ್ತಿರಲಾರದು. ಮುರುಗನ್ ದಲಿತ ಸಮುದಾಯದ ಅರುತಂಥಿಯರ್ ಪಂಗಡಕ್ಕೆ ಸೇರಿದ್ದಾರೆ ಮತ್ತು ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದರೂ ಅವರ ತಂದೆ-ತಾಯಿ ಈಗಲೂ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಕೊನೋರ್ ಹೆಸರಿನ ಗ್ರಾಮದಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸ ಮಾಡುತ್ತಿರೋದು ತಮ್ಮ ಜಮೀನಲ್ಲಿ ಅಲ್ಲ, ಬೇರೆಯವರ ಜಮೀನಿನಲ್ಲಿ! ಮಾಧ್ಯಮದವರು ಅವರನ್ನು ಮಾತಾಡಿಸಲು ಹೋದಾಗ ಅವರಿಗೆ ದಿನಗೂಲಿ ನೀಡುವ ಜಮೀನು ಮಾಲೀಕನ ಅನುಮತಿ ಪಡೆಯಬೇಕಾಯಿತಂತೆ. ಅಂದ ಹಾಗೆ ಅವರ ತಂದೆ ತಾಯಿಯ ಹೆಸರು ಲೋಗನಾಥನ್ ಮತ್ತು ವರುದಮ್ಮಳ್ ಕೊನೋರ್.
ಚೆನೈನ ಡಾ. ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪಡೆದಿರುವ ಮುರುಗನ್, ವಕೀಲಿಕೆಯನ್ನೂ ಮಾಡಿದ್ದಾರೆ. ಪೋಷಕರು, ಕರುಳಿನ ಅಷ್ಟು ಎತ್ತರಕ್ಕೆ ಬೆಳೆಯಲು ತಮ್ಮ ಕಾಣಿಕೆ ಏನೂ ಇಲ್ಲ, ಅವರೇ ಕಷ್ಟಪಟ್ಟು ಮುಂದೆ ಬಂದಿದ್ದಾರೆ ಎಂದು ಹೇಳುತ್ತಾರೆ.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿದ್ದ ಮುರುಗನ್ ಬಿಜೆಪಿಗೆ ಸಂಬಂಧಿಸಿದ ಕೆಲ ಪ್ರಕರಣಗಳಲ್ಲಿ ವಕಾಲತ್ ಮಾಡಿದ್ದಾರೆ. ಸಚಿವರಾಗುವ ಮುನ್ನ ಅವರು ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಆ ಸ್ಥಾನಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ತರಲಾಗಿದೆ.
ಇದನ್ನೂ ಓದಿ: Viral Video: ಸಾವಿರಾರು ಜನರ ಮುಂದೆ ಪ್ರಪೋಸ್ ಮಾಡಿದ ಹುಡುಗ, ನೋ ಎಂದ ಹುಡುಗಿ; ಮುಂದೇನಾಯ್ತು? ವಿಡಿಯೋ ನೋಡಿ