ಹುರುಳಿಕಾಳು ಅಂಗ್ರೀವಾ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

ಮನೆಯಲ್ಲಿ ದಿನಕ್ಕೊಂದು ತಿಂಡಿ ಮಾಡಿ ಸವಿಯಬೇಕು. ಬೇರೆ ಬೇರೆ ಕಡೆ ಯಾವ ಯಾವ ತಿಂಡಿ ಮಾಡುತ್ತಾರೆ? ಹೇಗೆ ಮಾಡುತ್ತಾರೆ? ರುಚಿ ಹೇಗೆ ಇರುತ್ತೆ? ಇವೆಲ್ಲವನ್ನೂ ತಿಳಿದಿರಬೇಕು.


ಹುರುಳಿಕಾಳಿನ ಸಾರು, ಚಟ್ನಿ ಮಾಡಿ ತಿಂದಿದ್ದೀರಾ. ಆದರೆ ಹುರುಳಿಕಾಳು ಅಂಗ್ರೀವಾ ಅನ್ನೊ ತಿಂಡಿನ ತಿಂದಿದ್ದೀರಾ? ಬಹುತೇಕರಿಗೆ ಅಂಗ್ರೀವಾ ತಿಂಡಿ ಬಗ್ಗೆ ಗೊತ್ತೇ ಇಲ್ಲ. ಈ ತಿಂಡಿ ಮಳೆಗಾಲದಲ್ಲಿ ತುಂಬಾ ಸ್ಪೆಷಲ್. ಮನೆಯಲ್ಲಿ ದಿನಕ್ಕೊಂದು ತಿಂಡಿ ಮಾಡಿ ಸವಿಯಬೇಕು. ಬೇರೆ ಬೇರೆ ಕಡೆ ಯಾವ ಯಾವ ತಿಂಡಿ ಮಾಡುತ್ತಾರೆ? ಹೇಗೆ ಮಾಡುತ್ತಾರೆ? ರುಚಿ ಹೇಗೆ ಇರುತ್ತೆ? ಇವೆಲ್ಲವನ್ನೂ ತಿಳಿದಿರಬೇಕು. ಹುರುಳಿಕಾಳು ಅಂಗ್ರೀವಾ ಮಕ್ಕಳಿಗೆ ಇಷ್ಟವಾಗುತ್ತೆ. ಒಂದು ಬಾರಿ ಹುರುಳಿಕಾಳು ಅಂಗ್ರೀವಾ ಮಾಡಿ ತಿಂದರೆ ಸಾಕು, ಪದೇ ಪದೇ ತಿನ್ನಬೇಕು ಅಂತ ಅನಿಸುತ್ತೆ.

ಹುರುಳಿಕಾಳು ಅಂಗ್ರೀವಾ ಮಾಡಲು ಬೇಕಾಗುವ ಸಾಮಾಗ್ರಿಗಳು ನೆನಸಿದ ಹುರುಳಿಕಾಳು, ಬೆಲ್ಲ, ಕೊಬ್ಬರಿ, ಬಾದಾಮಿ, ಪಿಸ್ತಾ, ದ್ರಾಕ್ಷಿ, ಗೋಡಂಬಿ, ತುಪ್ಪ, ಏಲಕ್ಕಿ.

ಹುರುಳಿಕಾಳು ಅಂಗ್ರೀವಾ ಮಅಡುವ ವಿಧಾನ:
ಮೊದಲು ನೆನಸಿದ ಹುರುಳಿಕಾಳನ್ನು ಒಂದು ಕುಕ್ಕರ್​ಗೆ ಹಾಕಿ ಬೇಯಿಸಿಕೊಳ್ಳಬೇಕು. ಬಳಿಕ ಒಂದು ಪಾತ್ರೆಗೆ ತುಪ್ಪ ಹಾಕಿ ಅದು ಕಾದ ಮೇಲೆ, ಬಾದಾಮಿ, ಪಿಸ್ತಾ, ದ್ರಾಕ್ಷಿ, ಗೋಡಂಬಿ, ಹುರಿದುಕೊಳ್ಳಿ. ನಂತರ ಪಾತ್ರೆಗೆ ಬೆಲ್ಲ ಮತ್ತು ನೀರು ಹಾಕಿ ಅದು ಕರಗಿದ ಮೇಲೆ ಅದನ್ನು ಶೋಧಿಸಿಟ್ಟುಕೊಂಡು, ಪುನಃ ಅದನ್ನು ಕುದಿಯಲು ಬಿಡಿ, ನಂತರ ಬೇಯಿಸಿದ ಹುರುಳಿಕಾಳು ಹಾಕಿ, ಅದರ ಮೇಲೆ ತುಪ್ಪ ಹಾಕಿ, ಅದು ಕಾದ ಮೇಲೆ ಕೊಬ್ಬರಿ ತುರಿ, ಏಲಕ್ಕಿ, ಹುರಿದ ಬಾದಾಮಿ, ಪಿಸ್ತಾ, ದ್ರಾಕ್ಷಿ, ಗೋಡಂಬಿ ಹಾಕಿ. ಈಗ ಹುರುಳಿಕಾಳು ಅಂಗ್ರೀವಾ ಸವಿಯಲು ಸಿದ್ಧ.

ಇದನ್ನೂ ಓದಿ:
ಉತ್ತರ ಭಾರತದ ಡೋಕ್ಲಾ ತಿಂಡಿ ತಿಂದಿದ್ದೀರಾ? ವಿಧಾನ ಸುಲಭವಿದೆ

ರೋಸ್ ಕೋಕೊನೆಟ್​ ಬಾಲ್; ಮಕ್ಕಳಿಗೆ ಇಷ್ಟವಾಗುವ ತಿಂಡಿಯನ್ನು ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

Click on your DTH Provider to Add TV9 Kannada